ಒಳ್ಳೆ ಕೆಲಸಕ್ಕೆ ಕಲ್ಲು ಹಾಕುವವರೇ ಹೆಚ್ಚು : ಭಾರತಿ ಶ್ರೀನಿವಾಸ್
ಖಾಸಗಿ ಡೈರಿಗಳು ಪ್ರತಿದಿನ ಹಣ ಪಾವತಿ ಮಾಡುತ್ತದೆ ಎಂಬ ಕಾರಣಕ್ಕೆ ಖಾಸಗಿ ಡೈರಿಯತ್ತ ಹೋಗು ತ್ತಿದ್ದ ರೈತರಿಗೆ ಈಗ ನಂದಿನಿ ಒಕ್ಕೂಟದ ಕೆಲಸ ಅರಿವಿಗೆ ಬಂದಿದೆ. ಸರ್ಕಾರ ಸ್ವಾಮ್ಯದ ಕೆಎಂಎಫ್ ಹೈನುಗಾರಿಕೆಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಿದೆ. ನಂದಿನಿ ಹಾಲಿನ ಡೈರಿ ಷೇರುದಾರರಿಗೆ ಆರೋಗ್ಯ ವಿಮೆ ಜಾರಿ ಮಾಡಿದೆ. ಈ ಹಿನ್ನಲೆ 25 ಸಾವಿರ ರೂಗಳ ಸಹಾಯಧನ, ಮರಣ ಹೊಂದಿದಲ್ಲಿ 50 ಸಾವಿರ ರೂ ಪರಿಹಾರ ಧನ ಸಹ ಸಿಗಲಿದೆ