ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮಣ್ಣಿನಲ್ಲೇ ಬದುಕು, ಕಲೆಯಲ್ಲೇ ಭಕ್ತಿ: ಜೀವನೋಪಾಯಕ್ಕೆ ನಾನಾವೇಶ ನಾನಾ ಪ್ರದೇಶ

ಕಾಯಕ ಸಮುದಾಯದ ಚೆದುರಿದ ಬದುಕಿಗೆ ಸಮಾಜದ ಬೆಂಬಲ ಅಗತ್ಯ

ಈಗಾಗಲೇ ನಗರ ಹೊಲಯ ಅಗಲಗುರ್ಕಿಗೆ ಹೋಗುವ ರೈಲ್ವೆ ಟ್ರ್ಯಾಕ್ ಸಮೀಪ ನೆಲೆ ನಿಂತಿರುವ ಇವರು ಗಣಪತಿ  ಹಬ್ಬಕ್ಕೂ ಪೂರ್ವದಲ್ಲಿಯೇ ನರಸಿಂಹ ಅವತಾರ, ವರಾಹ ಅವತಾರ ಗಣಪತಿ, ದರ್ಬಾರ್ ಗಣಪತಿ, ಶಿವ ಗಣಪತಿ, ಆಂಜನೇಯ ಗಣಪತಿ, ರಥಾರೂಢ, ಗರುಡವಾಹನ, ಸಿಂಹಾ ರೂಢ, ಗಜಾರೂಢ, ಬಸವಾರೂಡ, ಇಲಿವಾಹನ, ಸರ್ಪಾರೂಢ, ಕೃಷ್ಣ ಗಣಪತಿ ಸೇರಿದಂತೆ ನೂರಕ್ಕೂ ಹೆಚ್ಚು ವಿನ್ಯಾಸಗಳ ಮಾದರಿಗಳನ್ನು ಸಿದ್ಧಪಡಿಸಿರುವ ಇವರ ಕಲಾನೈಪುಣ್ಯ ನೋಡು ಗರ ಗಮನ ಸೆಳೆಯುತ್ತದೆ.

Gubbi News: ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ

ಅಂಗನವಾಡಿ ಕೇಂದ್ರಗಳಿಗೆ ಅಲಮಾರು ವಿತರಿಸಿದ ಎಂ.ಎಚ್.ಪಟ್ಟಣ ಗ್ರಾಪಂ

ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಒಟ್ಟು 17 ಅಂಗನವಾಡಿ ಕೇಂದ್ರಗಳ ಪೈಕಿ ಬಿಳಿಕಲ್ಲಪಾಳ್ಯ, ಚೌಕೇನಹಳ್ಳಿ, ಬೈಜೇನಹಳ್ಳಿ, ರಂಗನಾಥಪುರ, ಚಿಕ್ಕನೆಟ್ಟಗುಂಟೆ, ರಾಯವಾರ ಇಂದಿರಾನಗರ ಈ ಆರು ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಅಲಮಾರು(ಬೀರು) ವಿತರಿಸಲಾಯಿತು.

Gubbi News: ವರುಣನ ಕೃಪೆಗೆ ಕತ್ತೆಗಳ ಮದುವೆ..!!

Gubbi News: ವರುಣನ ಕೃಪೆಗೆ ಕತ್ತೆಗಳ ಮದುವೆ..!!

ಮುಂಗಾರು ಮಳೆ ಕೈ ಕೊಟ್ಟ ಹಿನ್ನಲೆ ಕಂಗೆಟ್ಟ ಈ ಕಚ್ಚೇನಹಳ್ಳಿ ಮತ್ತು ಯರಬಳ್ಳಿ ರೈತರು ಒಂದು ವಾರದ ಮುಂಚೆಯೇ ಕತ್ತೆಗಳ ಮದುವೆಗೆ ಸಜ್ಜಾಗಿದ್ದರು. ಗಂಡು ಕತ್ತೆ ಹಾಗೂ ಹೆಣ್ಣು ಕತ್ತೆಗಳನ್ನು ಕರೆತಂದು ಗಂಡು ಕತ್ತೆಗೆ ಹೊಸ ಪಂಚೆ ಟಾವಲ್ ಹಾಗೂ ಹೆಣ್ಣು ಕತ್ತೆಗೆ ಹೊಸ ಹಸಿರು ಸೀರೆ, ಬಳೆ ಗಳನ್ನು ತೊಡಿಸಿ ವಧು ವರ ರೀತಿಯಲ್ಲಿ ಅಲಂಕರಿಸಿದ್ದರು.

ಮಂತ್ರಿ ಭಾಗ್ಯದ ದಡದಲ್ಲಿ ಪ್ರದೀಪ್ ಈಶ್ವರ್; ದೆಹಲಿಯ ನಿರ್ಧಾರಕ್ಕೆ ಜಿಲ್ಲೆಯ ರಾಜಕೀಯ ಚಿತ್ತ

ಮಂತ್ರಿ ಭಾಗ್ಯದ ದಡದಲ್ಲಿ ಪ್ರದೀಪ್ ಈಶ್ವರ್

ಅಹಿಂದ ವರ್ಗದ ಪ್ರತಿನಿಧಿತ್ವ, ಯುವ ನಾಯಕತ್ವಕ್ಕೆ ಆದ್ಯತೆ ಹಾಗೂ ಸಾಮಾ ಜಿಕ ಸಮತೋಲನದ ಲೆಕ್ಕಾಚಾರಗಳಲ್ಲಿ ಪ್ರದೀಪ್ ಈಶ್ವರ್ ಹೆಸರು ಪರಿಗಣನೆಯಲ್ಲಿದೆ ಎನ್ನಲಾಗುತ್ತಿದೆ. ಆದರೆ, ಇದೇ ವೇಳೆ ಜಿಲ್ಲೆಯ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಅಸಮಾಧಾನ ಮತ್ತು ಆಂತರಿಕ ವಿರೋಧವೂ ಅವರ ಹಾದಿಯಲ್ಲಿ ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂಬ ರಾಜಕೀಯ ವಲಯದ ಚರ್ಚೆಗಳಿವೆ.

MLA B N Ravikumar: ಜನಪರ ಯೋಜನೆಗಳ ಮಾಹಿತಿ ಜನರಿಗೆ ತಲುಪಿದಾಗಲೇ ಸಾರ್ಥಕತೆ: ಶಾಸಕ ಬಿ.ಎನ್. ರವಿಕುಮಾರ್

ಜನಪರ ಯೋಜನೆಗಳ ಮಾಹಿತಿ ಜನರಿಗೆ ತಲುಪಿದಾಗಲೇ ಸಾರ್ಥಕತೆ

ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶ ಹೊಂದಿವೆ. ಆದ್ದರಿಂದ ಅಧಿಕಾರಿಗಳು ಯೋಜನೆಗಳ ಮಾಹಿತಿ ಯನ್ನು ಗ್ರಾಮಮಟ್ಟಕ್ಕೂ ತಲುಪಿಸಿ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸೌಲಭ್ಯ ದೊರೆಯುವಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು

Gauribidanur News: ರಾಯರೇಕಲಹಳ್ಳಿಯಲ್ಲಿ ಭಕ್ತಿ ಸಂಭ್ರಮದ ದೀಪೋತ್ಸವ; ಗ್ರಾಮದೇವತೆಗಳಿಗೆ ವಿಶೇಷ ಪೂಜೆ

ರಾಯರೇಕಲಹಳ್ಳಿಯಲ್ಲಿ ಭಕ್ತಿ ಸಂಭ್ರಮದ ದೀಪೋತ್ಸವ

ಹಿಂದಿನ ದಿನಗಳಲ್ಲಿ ಪ್ಲೇಗ್, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮದ ಶಕ್ತಿ ದೇವತೆಗಳ ಮೊರೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು. ಇಂತಹ ಆಚರಣೆಗಳು ಸಮಾಜದಲ್ಲಿ ನಂಬಿಕೆ, ಒಗ್ಗಟ್ಟು ಹಾಗೂ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ

Bengaluru Murder: ರಾಮೋಹಳ್ಳಿಯ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ದುಷ್ಕರ್ಮಿಗಳು!

ಕೆರೆಯಲ್ಲಿ ತೇಲಿಬಂದ ಸೂಟ್‌ಕೇಸ್‌ನಲ್ಲಿ‌‌ ಮಹಿಳೆಯ ಮೃತದೇಹ ಪತ್ತೆ!

Dead body found in suitcase: ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂಬಳಗೋಡು ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Gubbi News: ಹಳೆ ವಿದ್ಯಾರ್ಥಿಗಳ ಸಂಘ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲಿ : ಪ್ರಾಂಶುಪಾಲ ಡಾ.ಓ.ನಾಗರಾಜ್

ಹಳೆ ವಿದ್ಯಾರ್ಥಿಗಳ ಸಂಘ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಲಿ

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್. ಟಿ.ಭೈರಪ್ಪ ಮಾತನಾಡಿ, ಕಾಲೇಜು ದಿನಗಳು ಪ್ರತಿಯೊಬ್ಬರ ಜೀವನದ ಸುವರ್ಣ ಕ್ಷಣಗಳು. ತಾವು ಕಲಿತ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸುವುದು ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯ ಕರ್ತವ್ಯ. ಈ ಸಂಸ್ಥೆ ಬೆಳೆದಂತೆ ನಾವೆಲ್ಲರೂ ಬೆಳೆದಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದು ಅಭಿಪ್ರಾಯಪಟ್ಟರು.

Footpath clearance drive: ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನಿರಲ್ಲ: ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ

ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನಿರಲ್ಲ: ಕೃಷ್ಣಬೈರೇಗೌಡ

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಅನುಸಾರ ಸುರಕ್ಷಿತ ಪಾದಚಾರಿ ಮಾರ್ಗ (ಫುಟ್‌ಪಾತ್) ಅಭಿಯಾನವನ್ನು ಬೆಂಗಳೂರಿನಲ್ಲಿ ಕೈಗೊಳ್ಳಲಾಗಿದೆ. ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಸರ್ಕಾರಿ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

Farmers Protest for 128th day: 128ನೇ ದಿನಕ್ಕೂ ಮುಂದುವರಿದ ಜಂಗಮಕೋಟೆ ರೈತರ ಹೋರಾಟ; ಸರ್ಕಾರಕ್ಕೆ 'ಪಿಂಡ ಪ್ರದಾನ' ಮಾಡಿ ಆಕ್ರೋಶ

128ನೇ ದಿನಕ್ಕೂ ಮುಂದುವರಿದ ಜಂಗಮಕೋಟೆ ರೈತರ ಹೋರಾಟ

ಜಂಗಮಕೋಟೆ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಬಾರದು. ಕೃಷಿಗೆ ಯೋಗ್ಯವಲ್ಲದ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ನಮ್ಮ ವಿರೋಧವಿಲ್ಲ. ಆದರೆ ಅನ್ನ ಬೆಳೆಯುವ ಫಲವತ್ತಾದ ಭೂಮಿಯನ್ನು ಉಳಿಸಬೇಕು ಎಂದು ರೈತರು ಒತ್ತಾಯಿಸಿದರು.

Student Protest: ವಿದ್ಯಾರ್ಥಿನಿಯರಿಗೆ ಮೂರು ದಿನ ಅನ್ನ ನೀಡಿಲ್ಲವೆಂಬ ಆರೋಪ; ಡಾ. ಲಲಿತಾ ಮನೋಹರನ್ ಫಾರ್ಮಸಿ ಕಾಲೇಜಿನ ವಿರುದ್ಧ ಪ್ರತಿಭಟನೆ

ಡಾ. ಲಲಿತಾ ಮನೋಹರನ್ ಫಾರ್ಮಸಿ ಕಾಲೇಜಿನ ವಿರುದ್ಧ ಪ್ರತಿಭಟನೆ

ಇಂಟಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀಂದ್ರ ಮಾತನಾಡಿ, ಕುಡಿದು ಬಂದು ವಿದ್ಯಾರ್ಥಿ ಗಳೊಂದಿಗೆ ಅನುಚಿತವಾಗಿ ವರ್ತಿಸಿದರೆಂದು ಆರೋಪಿಸಲಾಗಿರುವ ಉಪನ್ಯಾಸಕರನ್ನು ಕೂಡಲೇ ಅಮಾನತುಗೊಳಿಸಬೇಕು. ಮೊಬೈಲ್ ಇಟ್ಟುಕೊಂಡಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯರಿಗೆ ಊಟ ನೀಡದೆ ಕಿರುಕುಳ ನೀಡಿರುವ ಸಿಬ್ಬಂದಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಪದಕ ವಿಜೇತ ರವಿಕುಮಾರ್‌ಗೆ ಭಸ್ಮಂಗಿ ಕಾವಲ್ ಸರ್ಕಾರಿ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಅಭಿನಂದನೆ

ಮುಖ್ಯಮಂತ್ರಿ ಪದಕ ವಿಜೇತ ರವಿಕುಮಾರ್‌ಗೆ ಸನ್ಮಾನ

Madhugiri News: ಭಯೋತ್ಪಾದಕ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್ ಅವರಿಗೆ ಮುಖ್ಯಮಂತ್ರಿ ಪದಕ ಪಡೆದಿರುವ ಹಿನ್ನೆಲೆಯಲ್ಲಿ ಸನ್ಮಾನ ಮಾಡಲಾಗಿದೆ. ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಸಜ್ಜೆಹೊಸಹಳ್ಳಿ ಕ್ಲಸ್ಟರ್‌ನ ಭಸ್ಮಂಗಿ ಕಾವಲ್ ಬೆಟ್ಟದ ಶ್ರೀ ರುದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿದೆ.

ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿದ್ದ ವೃದ್ಧೆಗೆ  ಸಂಕೀರ್ಣ ಹಿಪ್ ಶಸ್ತ್ರಚಿಕಿತ್ಸೆ

ಸೊಂಟದ ಮೂಳೆ ಮುರಿತ: ವೃದ್ಧೆಗೆ ಹಿಪ್ ಶಸ್ತ್ರಚಿಕಿತ್ಸೆ

ಲಕ್ಷ್ಮಿ ಭಾರ್ಗವ್ ಅವರು ತಮ್ಮ 99ನೇ ವಯಸ್ಸಿನಲ್ಲಿ ಎಡಭಾಗದ ಫೆಮೊರಲ್ ನೆಕ್ ಫ್ರ್ಯಾಕ್ಚರ್ ಮತ್ತು ಕಾಂಪ್ಲೆಕ್ಸ್ ಸಬ್‌ಟ್ರೊಕಾಂಟೆರಿಕ್ ಎಕ್ಸ್‌ಟೆನ್ಶನ್‌ನಿಂದ ಬಳಲುತ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ವಯೋವೃದ್ಧರಲ್ಲಿ ಇಂತಹ ಅಸ್ಥಿರ ಗಾಯಗಳು ಭಾರೀ ಸವಾಲೊಡ್ಡುತ್ತವೆ. ಇಳಿ ವಯಸ್ಸಿನ ಜೊತೆಗೆ ದೀರ್ಘಕಾಲದ ಬ್ರಾಂಕಿಯಲ್ ಅಸ್ತಮಾ (ಉಬ್ಬಸ) ಕೂಡ ಇದ್ದುದರಿಂದ ಈ ಪ್ರಕರಣವು ವೈದ್ಯರಿಗೆ ಅತ್ಯಂತ ಹೈ-ರಿಸ್ಕ್ ಆಗಿತ್ತು.

Congress Protest: ಬಂಧನಕ್ಕೆ ಹೆದರಲ್ಲ; ಕೇಂದ್ರ ಸರ್ಕಾರ ಯುವಜನತೆಯ ಹೋರಾಟ ಹತ್ತಿಕ್ಕುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಬಂಧನಕ್ಕೆ ಹೆದರುವುದಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಡಿಕೆಶಿ ಕಿಡಿ

ದೆಹಲಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಂಗಳವಾರ ಕಾಂಗ್ರೆಸ್‌ ಪ್ರತಿಭಟನೆ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯುವ ಸಮೂಹ ಈ ದೇಶದ ಭವಿಷ್ಯ. ಹೋರಾಟ ಅವರ ಹಕ್ಕು. ಅವರಿಗೆ ರಕ್ಷಣೆ ನೀಡುವುದು ನಮ್ಮ ಸಂವಿಧಾನದ ಹಕ್ಕು ಅವರು ತಿಳಿಸಿದ್ದಾರೆ.

Delhi Protest: ದೆಹಲಿ ಪ್ರತಿಭಟನೆಗಳ ಹಿಂದೆ ಕಾಣದ ಶಕ್ತಿಗಳ ಕೈವಾಡ: ಅನುಮಾನ ವ್ಯಕ್ತಪಡಿಸಿದ ಕುಮಾರಸ್ವಾಮಿ

ದೆಹಲಿ ಪ್ರತಿಭಟನೆಗಳ ಹಿಂದೆ ಕಾಣದ ಶಕ್ತಿಗಳ ಕೈವಾಡ: ಕುಮಾರಸ್ವಾಮಿ

ದೆಹಲಿಯಲ್ಲಿ ಸಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಭಟನೆಗಳ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇದ ಕೆಲವರ ಕಣ್ಣು ಕುಕ್ಕಿರುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಭಯಾನಕ ಘಟನೆ: ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ಬಲವಂತವಾಗಿ ಮದ್ಯ ಕುಡಿಸಿದ ಪಾಪಿಗಳು

ದೇವನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Crime News: ಬಾಲಕಿಯನ್ನು ಅಪಹರಿಸಿ, ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಮರುದಿನ ಬೆಳಗ್ಗೆ ಆಕೆಯ ಮನೆಯ ಬಳಿ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ನೆಪದಲ್ಲಿ ಆಕೆಯನ್ನು ಹೊರಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Belagavi News: ಇನ್ಶೂರೆನ್ಸ್‌ ಹಣದ ಆಸೆಗಾಗಿ ಚಿನ್ನದಂಗಡಿಯಲ್ಲಿ ಕಳ್ಳತನದ ನಾಟಕ; ಮಾಲೀಕ ಅರೆಸ್ಟ್‌

ಇನ್ಶೂರೆನ್ಸ್‌ ಹಣದ ಆಸೆಗಾಗಿ ಚಿನ್ನದಂಗಡಿಯಲ್ಲಿ ಕಳ್ಳತನದ ನಾಟಕ!

ಬೆಳಗಾವಿಯ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ಮಾಲೀಕ ದೂರು ನೀಡಿದ್ದರು. 65.95 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದು ಹಣ ಕಳ್ಳತನವಾಗಿದೆ ಎಂದು ಖಡೇಬಜಾರ್ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಅಂಗಡಿ ಮಾಲೀಕನೇ ಆರೋಪಿ ಎಂದು ತನಿಖೆ ವೇಳೆ ತಿಳಿದುಬಂದಿದೆ.

Pavagada News: ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ, ಸೇವೆಯೇ ಶಾಶ್ವತ: ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್

ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ, ಸೇವೆಯೇ ಶಾಶ್ವತ: ಮಂಜುನಾಥ್

Pavagada News: ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಮದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1996-97, 1997-98 ಹಾಗೂ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Baldota Steel Factory: ಬಲ್ಡೋಟಾ ವಿರುದ್ಧ ಮತ್ತೆ ಭುಗಿಲೆದ್ದ ರೈತರ ಆಕ್ರೋಶ; ಕಾರ್ಖಾನೆ ಗೇಟ್‌, ಕಾಂಪೌಂಡ್‌ ಛಿದ್ರ

ಬಲ್ಡೋಟಾ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ; ಬೃಹತ್‌ ಪ್ರತಿಭಟನೆ

Farmers protest in Koppal: ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಬಲ್ಡೋಟಾ ಕಾರ್ಖಾನೆ ಬಳಿ 46ನೇ ರೈತ ಹುತಾತ್ಮ ದಿನಾಚರಣೆಯ ಪ್ರಯುಕ್ತ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ರೈತರು, ಕಾರ್ಖಾನೆ ಆವರಣಕ್ಕೆ ನುಗ್ಗಿ, ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

Congress Protest in Delhi: ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಚ್ ಖಂಡಿಸಿ ಪ್ರಧಾನಿ ನಿವಾಸದ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ಸಿಎಂ ಡಿ.ಕೆ. ಶಿವಕುಮಾರ್ ಭಾಗಿ

ಪ್ರಧಾನಿ ನಿವಾಸದ ಮುಂದೆ ಕಾಂಗ್ರೆಸ್‌ ಪ್ರತಿಭಟನೆ; ಸಿಎಂ ಡಿಕೆಶಿ ಭಾಗಿ

ದೆಹಲಿಯಲ್ಲಿ ಸೋಮವಾರ ಸಿಜೆಪಿ ಹಮ್ಮಿಕೊಂಡಿದ್ದ ಸಂಸತ್‌ ಚಲೋ ಬೃಹತ್‌ ಪ್ರತಿಭಟನಾ ಮೆರವಣಿಗೆ ವೇಳೆ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್‌ ನಡೆಸಿರುವುದಕ್ಕೆ ಕಾಂಗ್ರೆಸ್‌ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ರಾಜೀನಾಮೆಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್‌ ಉಗ್ರ ಜಾಲ ಪತ್ತೆ: ಐಸಿಸ್ ನೇಮಕಾತಿ, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ 8 ಕಡೆಗಳಲ್ಲಿ ಇಡಿ ದಾಳಿ

ಭಯೋತ್ಪಾದಕರಿಗೆ ಹಣಕಾಸು ನೆರವು: ಬೆಂಗಳೂರಿನಲ್ಲಿ ಇಡಿ ದಾಳಿ

ED Raids in Bengaluru: ಬೆಂಗಳೂರಿನಾದ್ಯಂತ ಎಂಟು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಐಸಿಸ್ ನೇಮಕಾತಿ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲಾಗುತ್ತಿದೆ ಎಂಬ ಆರೋಪದಡಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ತೆರೆದ ಚರಂಡಿಗೆ ಬಿದ್ದು ಗಾಯ; ಬಿಜೆಪಿ ಮುಖಂಡ ಬೇಲೂರು ರಾಘವೇಂದ್ರ ಶೆಟ್ಟಿ ಆರೋಗ್ಯ ವಿಚಾರಿಸಿದ ಶಾಸಕ ಅಶ್ವತ್ಥನಾರಾಯಣ್

ಬೇಲೂರು ರಾಘವೇಂದ್ರ ಶೆಟ್ಟಿ ಆರೋಗ್ಯ ವಿಚಾರಿಸಿದ ಶಾಸಕ ಅಶ್ವತ್ಥನಾರಾಯಣ್

CN Ashwath Narayan: ಬಿಜೆಪಿ ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕ ಮತ್ತು ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಲೂರು ರಾಘವೇಂದ್ರ ಶೆಟ್ಟಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ತಕ್ಷಣ ಸ್ಪಂದಿಸಬೇಕಾದ ಉತ್ತರ ಮಹಾನಗರಪಾಲಿಕೆ ಅಧಿಕಾರಿವರ್ಗವು ಸರಿಯಾಗಿ ಸ್ಪಂದಿಸಿಲ್ಲ. ಪೊಲೀಸರು ಕೇಸು ದಾಖಲಿಸಲು ಹಿಂಜರಿದಿದ್ದಾರೆ. ಜವಾಬ್ದಾರಿ, ಸೂಕ್ಷ್ಮತೆ ಇಲ್ಲದೇ ಒಂದು ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಅವರು ಆರೋಪಿಸಿದ್ದಾರೆ.

ಅಡ್ವಾನ್ಸ್ ನೀಡಿದ್ದು 1 ಲಕ್ಷ, ಕೈಗೆ ಸಿಕ್ಕಿದ್ದು 20 ಸಾವಿರ; ವಂಚಿಸಿದ ಬೆಂಗಳೂರು ಮನೆ ಮಾಲೀಕನ ವಿರುದ್ಧ ಮಹಿಳೆ ಆಕ್ರೋಶ!

ಬೆಂಗಳೂರಿನಲ್ಲಿ ಮಹಿಳೆಗೆ ಅಡ್ವಾನ್ಸ್ ಹಣ ಕಡಿತಗೊಳಿಸಿ ವಂಚನೆ

Viral News: ವರ್ಷಪೂರ್ತಿ ಸರಿಯಾಗಿ ಬಾಡಿಗೆ ಪಾವತಿ ಮಾಡಿದರೂ ಮಾಲೀಕನೊಬ್ಬ ಒಟ್ಟು 1 ಲಕ್ಷ ಹಣದಲ್ಲಿ 80,396 ರೂಪಾಯಿ ಕಡಿತಗೊಳಿಸಿ ತನ್ನ ಕೈಗೆ ಕೇವಲ 20,000 ರೂಪಾಯಿ ನೀಡಿದ್ದಾನೆಂದು ಮಹಿಳೆ ಆಕ್ರೋಶಗೊಂಡಿದ್ದಾಳೆ. ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದ ಯುವಕ- ಯುವತಿಯರಿಗೆ ಇದೊಂದು ದೊಡ್ಡ ಹೊರೆ ಎಂದು ಅವರು ಬರೆದುಕೊಂಡಿದ್ದಾರೆ.

Bengaluru Power Cut: ಜುಲೈ 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಜುಲೈ 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru Power Cut: ಸಾರಕ್ಕಿ ಮತ್ತು ಇಸ್ಕಾನ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 22ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Loading...