ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Pradeep Eshwar: ಸಂಸದ ಸುಧಾಕರ್‌ ತಾಯಿ ಹೆಸರಲ್ಲಿ ಹೃದ್ರೋಗ ಘಟಕ ಸ್ಥಾಪಿಸುವೆ: ಪ್ರದೀಪ್ ಈಶ್ವ‌ರ್

ಸಂಸದರ ತಾಯಿ ಹೆಸರಲ್ಲಿ ಹೃದ್ರೋಗ ಘಟಕ ಸ್ಥಾಪಿಸುವೆ: ಪ್ರದೀಪ್ ಈಶ್ವ‌ರ್

chikkaballapur News: ಚಿಕ್ಕಬಳ್ಳಾಪುರದಲ್ಲಿ ಆಸತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ 80 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರಿನಲ್ಲಿ ಶಾಂತಮ್ಮ ಕಾರ್ಡಿಯಾಕ್ ಕೇರ್‌ ಸೆಂಟರ್‌ ನಿರ್ಮಿಸುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

Bigg Boss Kannada 12: ಬಿಗ್‌ಬಾಸ್‌ಗೂ ನನಗೂ ಸಂಬಂಧವಿಲ್ಲ, ಉಲ್ಲಂಘನೆ ಸರಿಮಾಡಲು ಅವಕಾಶ ಕೊಡಿ: ಡಿಕೆ ಶಿವಕುಮಾರ್

ಬಿಗ್‌ಬಾಸ್‌ಗೂ ನನಗೂ ಸಂಬಂಧವಿಲ್ಲ, ತಪ್ಪು ಸರಿಪಡಿಸಲು ಅವಕಾಶ ಕೊಡಿ: ಡಿಕೆಶಿ

DK Shivakumar: ಜನರಿಗೆ ಮನರಂಜನೆ ನೀಡಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಏನಾದ್ರೂ ತಪ್ಪಾಗಿದ್ದರೂ ಅವಕಾಶ ಕೊಡಲು ಹೇಳಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೆ ಫೋನ್ ಮಾಡಿದೆ. ಆಗಲೇ ನನಗೆ ವಿಷಯ ಗೊತ್ತಾಗಿದ್ದು, ಎಂಟರ್ ಟೈನ್ ಮೆಂಟ್ ನಮಗೆ ಬೇಕು ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Viral Video: ಏರ್‌ಪೋರ್ಟ್‌ನ ಖರ್ಚಿಗಳ ಮೇಲೆ ಶ್ವಾನದ ಗಡದ್‌ ನಿದ್ದೆ... ಫ್ಲೈ ಮಿಸ್ಸಾಯ್ತೇ ಎಂದ ನೆಟ್ಟಿಗರು!

ಏರ್‌ಪೋರ್ಟ್‌ನ ಖರ್ಚಿಗಳ ಮೇಲೆ ಶ್ವಾನದ ಗಡದ್‌ ನಿದ್ದೆ!

Plane Missing: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಪ್ರಯಾಣಿಕನೋರ್ವನ ವಿಡಿಯೊ ವೈರಲ್ ಆಗಿದೆ. ಕುರ್ಚಿಯಲ್ಲಿ ಮಲಗಿರುವ ಈತ ಯಾರ ಭಯವೂ ಇಲ್ಲದೆ ಗಡದ್ದಾಗಿ ನಿದ್ದೆ ಮಾಡಿದ್ದಾನೆ. ಈ ವಿಡಿಯೊ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟಕ್ಕೂ ಯಾರೀ ಅನಿರೀಕ್ಷಿತ ಪ್ರಯಾಣಿಕ ಅಂತೀರಾ, ಈ ವಿಡಿಯೊ ನೋಡಿ.

Bigg Boss Kannada 12: ಬಿಗ್‌ ಬಾಸ್‌ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ

ಬಿಗ್‌ ಬಾಸ್‌ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

Jollywood Studios: ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲಿ ಆದೇಶ ಹೊರಡಿಸಲಾಗಿದೆ. ತಮ್ಮ ಅಹವಾಲು ಆಲಿಸದೆ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಅರ್ಜಿಯಲ್ಲಿ ವೆಲ್ಸ್ ಸ್ಟುಡಿಯೋ ಆರೋಪಿಸಿದೆ.

Gold Rate 08-10-2025: ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ದರ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and silver Price today: 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 105 ರೂ. ಏರಿಕೆ ಕಂಡಿದ್ದು, 11,290 ರೂ. ಆಗಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 115 ರೂ. ಏರಿಕೆ ಕಂಡು, 12,317 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 90,320 ರೂ. ಬಾಳಿದರೆ, 10 ಗ್ರಾಂಗೆ ನೀವು 1,12,900 ಹಾಗೂ 100 ಗ್ರಾಂಗೆ 11,29,000 ರೂ. ನೀಡಬೇಕಾಗುತ್ತದೆ.

Narahari passes away: ಆರ್‌ಎಸ್‌ಎಸ್ ಮುಖಂಡ, ಮಾಜಿ ಪರಿಷತ್‌ ಸದಸ್ಯ ಪ್ರೊ.ಕೃ. ನರಹರಿ ನಿಧನ

ಆರ್‌ಎಸ್‌ಎಸ್ ಮುಖಂಡ, ಮಾಜಿ ಪರಿಷತ್‌ ಸದಸ್ಯ ಪ್ರೊ.ಕೃ. ನರಹರಿ ನಿಧನ

Narahari: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧವೂ ಹೋರಾಟ ಮಾಡಿ ಜೈಲುವಾಸ ಅನುಭವಿಸಿದ್ದರು.

Bigg Boss Kannada 12: ಬಿಗ್‌ ಬಾಸ್‌ ಶೂಟಿಂಗ್‌ ಸ್ಥಗಿತ, ಕೋರ್ಟ್‌ ಮೊರೆ ಹೋಗಲು ಆಯೋಜಕರ ನಿರ್ಧಾರ

ಬಿಗ್‌ ಬಾಸ್‌ ಶೂಟಿಂಗ್‌ ಸ್ಥಗಿತ, ಕೋರ್ಟ್‌ ಮೊರೆ ಹೋಗಲು ಆಯೋಜಕರ ನಿರ್ಧಾರ

Ramanagara: ಬಿಗ್ ಬಾಸ್ ಆಯೋಜಕರ ಮುಂದಿನ ನಡೆ ಏನು ಎಂಬುದು ಈಗ ಕುತೂಹಲಕರವಾಗಿದೆ. ಅಗತ್ಯ ಪರವಾನಗಿಗಳನ್ನು ಪಡೆದುಕೊಂಡು ಜಾಲಿವುಡ್ ಸ್ಟುಡಿಯೋದಲ್ಲಿಯೇ ಶೂಟಿಂಗ್ ಮುಂದುವರೆಸಲಾಗುತ್ತದಾ ಅಥವಾ ಬೇರೆ ಕಡೆ ಶಿಫ್ಟ್ ಮಾಡಲಾಗುತ್ತದೆಯೇ ಎಂಬುದೀಗ ಪ್ರಶ್ನೆಯಾಗಿದೆ. ಸ್ಟುಡಿಯೋಗೆ ಬೀಗಮುದ್ರೆ ಹಾಕಿದ್ದರಿಂದ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.

Cough Syrup: ಕಿಲ್ಲರ್‌ ಕಾಫ್‌ ಸಿರಪ್‌ಗೆ ಮತ್ತೆ 6 ಬಲಿ, ರಾಜ್ಯದಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

ದೇಶದಲ್ಲಿ ಮತ್ತೆ 6 ಬಲಿ, ರಾಜ್ಯದಲ್ಲಿ ಕಾಫ್‌ ಸಿರಪ್‌ಗೆ ಕಡಿವಾಣ

Karnataka: ಮಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್‌ ಸೇವಿಸಿ ಮತ್ತೆ 6 ಮಕ್ಕಳು ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೇರಿದೆ. ಕರ್ನಾಟಕದಲ್ಲಿ ಕಾಫ್‌ ಸಿರಪ್‌ ಶಿಫಾರಸು, ಮಾರಾಟ ಹಾಗೂ ಸೇವನೆಗೆ ಕಠಿಣ ಮಾರ್ಗಸೂಚಿಗಳನ್ನು ನೀಡಲಾಗಿದೆ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಅಥವಾ ಶೀತದ ಸಿರಪ್ ನೀಡಬಾರದು ಎಂದು ತಿಳಿಸಲಾಗಿದೆ.

ಪರಿಸರ ಕಾಯಿದೆ ಉಲ್ಲಂಘಿಸಿದ್ದಕ್ಕೆ ಬಿಗ್‌ ಬಾಸ್‌ ಮುಚ್ಚಲು ನೋಟಿಸ್: ಈಶ್ವರ ಖಂಡ್ರೆ‌

ಪರಿಸರ ಕಾಯಿದೆ ಉಲ್ಲಂಘಿಸಿದ್ದಕ್ಕೆ ಬಿಗ್‌ ಬಾಸ್‌ ಮುಚ್ಚಲು ನೋಟಿಸ್: ಖಂಡ್ರೆ‌

Eshwar Khandre: ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ಜಾಲಿವುಡ್ ಸ್ಟುಡಿಯೋ ಸಂಸ್ಥೆಗೆ ಜಲ ಕಾಯಿದೆ ಹಾಗೂ ವಾಯು ಕಾಯಿದೆಯಡಿ ಅಗತ್ಯ ಅನುಮತಿಗಳನ್ನು ಪಡೆಯದೆ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Drowned: ಮಾರ್ಕೋನಹಳ್ಳಿ ಡ್ಯಾಂನಲ್ಲಿ 6 ಮಂದಿ ನೀರುಪಾಲು

ಮಾರ್ಕೋನಹಳ್ಳಿ ಡ್ಯಾಂನಲ್ಲಿ 6 ಮಂದಿ ನೀರುಪಾಲು

Tumkur news: 15 ಜನ ಬೈಕ್ ಹಾಗೂ ಓಮಿನಿಯಲ್ಲಿ ಮಾಗಡಿ ಪಾಳ್ಯದಲ್ಲಿರುವ ಅಮೃತೂರು ಠಾಣೆ ಎಎಸ್‍ಐ ಜಿಲಾನಿ ಅವರ ಮನೆಗೆ ಬಂದಿದ್ದರು. ಅಲ್ಲಿ ಊಟ ಮುಗಿಸಿ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು. ಇದರಲ್ಲಿ 12 ಜನ ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ 6 ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

Murder Case: ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಚ್ಚಿ ಕೊಲೆ

ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಚ್ಚಿ ಕೊಲೆ

Koppala news: ವೆಂಕಟೇಶ ಕುರುಬರ ದೇವಿಕ್ಯಾಂಪ್‌ನಿಂದ ಸ್ನೇಹಿತರೊಂದಿಗೆ ಊಟ ಮಾಡಿ ಬೈಕ್‌ನಲ್ಲಿ ಗಂಗಾವತಿಗೆ ತೆರಳುತ್ತಿದ್ದರು. ಕೊಪ್ಪಳ ರಸ್ತೆಯ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಮದ್ಯರಾತ್ರಿ 2 ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದೆ. ಬೈಕ್‌ಗೆ ಗುದ್ದಿ ಅಡ್ಡಗಟ್ಟಿದ ಗುಂಪು, ಲಾಂಗ್ ಮತ್ತು ಮಚ್ಚುಗಳಿಂದ ವೆಂಕಟೇಶನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಐಬಿಸ್ ಹೋಟೆಲ್ಗಳ ಸುಸ್ಥಿರತೆ: ಗ್ರೀನ್ ಕೀ ಪ್ರಮಾಣೀಕರಣ ಗೌರವ

ಐಬಿಸ್ ಹೋಟೆಲ್ಗಳ ಸುಸ್ಥಿರತೆ: ಗ್ರೀನ್ ಕೀ ಪ್ರಮಾಣೀಕರಣ ಗೌರವ

ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ, ಇಂಧನ ದಕ್ಷತೆ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ಗಳ ಕಡಿತ ಸೇರಿದಂತೆ ಕಟ್ಟುನಿಟ್ಟಾದ ಪರಿಸರ ಮಾನದಂಡಗಳನ್ನು ಪ್ರತಿ ಹೋಟೆಲ್ ಅನುಸರಿಸು ವುದಕ್ಕೆ ಗ್ರೀನ್ ಕೀ ಪ್ರಮಾಣೀಕರಣ ನೀಡಲಾಗುತ್ತದೆ. ಅನೇಕ ಹೋಟೆಲ್ಗಳು ಆನ್-ಸೈಟ್ ವಾಟರ್ ಬಾಟ್ಲಿಂಗ್ ಸ್ಥಾವರಗಳನ್ನು ಸ್ಥಾಪಿಸಿವೆ.

MLA K H Puttaswamy Gowda: ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ವ್ಯಕ್ತಿ ಮಹರ್ಷಿ ವಾಲ್ಮೀಕಿ : ಶಾಸಕ ಕೆಎಚ್ ಪುಟ್ಟಸ್ವಾಮಿಗೌಡ

ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ ವ್ಯಕ್ತಿ ಮಹರ್ಷಿ ವಾಲ್ಮೀಕಿ

ವಾಲ್ಮೀಕಿ ಮಹರ್ಷಿಗಳು ರಚಿಸಿರುವ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿನ ಮೊದಲ ಕಾವ್ಯ ವಾಗಿದ್ದು, ಅದರಲ್ಲಿ ಸೋದರತ್ವ ,ಪಿತೃ ವಾಕ್ಯ ಪಾಲನೆ, ಪ್ರಜಾ ಪರಿ ಪಾಲನೆ ಮುಂತಾದ ನೀತಿ ಪಾಠ ಗಳಿವೆ. ಅವುಗಳನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದ ಅವರು ಕ್ಷೇತ್ರದಲ್ಲಿ ಅತಿ ದೊಡ್ಡ ಸಮುದಾಯವಾಗಿರುವ ನಾಯಕ ಸಮುದಾಯ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರವಾಗಿದ್ದಾರೆ.

MLA B N Ravikumar: ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಬಿ ಎನ್ ರವಿಕುಮಾರ್ ಚಾಲನೆ

ಅದ್ದೂರಿ ಮೆರವಣಿಗೆಗೆ ಶಾಸಕ ಬಿ ಎನ್ ರವಿಕುಮಾರ್ ಚಾಲನೆ

ಮೆರವಣಿಗೆಯಲ್ಲಿ ಡೊಳ್ಳು, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಜ್ಜೆ ಹಾಕಿ ನರ್ತಿಸಿದರು. ಅಲ್ಲದೇ, ಮೆರವಣಿಗೆಯಲ್ಲಿ ಪ್ರತಿಯೊಂದು ಹಳ್ಳಿಯಿಂದ ಆಗಮಿಸಿದ ವಾಲ್ಮೀಕಿ ಯುವಕ ಪದಾಧಿಕಾರಿಗಳು ತಮ್ಮ ತಮ್ಮ ವಾಹನಗಳಿಗೆ ದೊಡ್ಡ ಪ್ರಮಾಣದಲ್ಲಿ ವಾಲ್ಮೀಕಿ ಭಾವ ಚಿತ್ರವಿರುವ ಪ್ಲೆಕ್ಸ್ಗಳನ್ನು ಕಟ್ಟಿಕೊಂಡು ತಂಡೋಪ ತಂಡವಾಗಿ ಆಗಮಿಸುವ ಮೂಲಕ ಮೆರವಣಿಗೆಯ ಮೆರಗು ಹೆಚ್ಚಿಸಿದರು.

MLA Subbareddy: ರಾಮಾಯಣ ಒಂದು ಜಾತಿ, ಒಂದು ಕುಲಕ್ಕೆ ಸೀಮಿತವಲ್ಲ, ಸರ್ವರಿಗೂ ಸಲ್ಲುವಂತದು : ಶಾಸಕ ಸುಬ್ಬಾರೆಡ್ಡಿ

ರಾಮಾಯಣ ಒಂದು ಜಾತಿ, ಒಂದು ಕುಲಕ್ಕೆ ಸೀಮಿತವಲ್ಲ, ಸರ್ವರಿಗೂ ಸಲ್ಲುವಂತದು

ಇಡೀ ವಿಶ್ವಕ್ಕೆ ಮಾದರಿಯಾದ ರಾಮಾಯಣವನ್ನು ಬರೆದುಕೊಟ್ಟ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೇ ಸಾಲದು, ಅವರ ಆದರ್ಶಗಳನ್ನು, ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗು ತ್ತದೆ. ಅವರು ರಚಿಸಿದಂತಹ ರಾಮಾಯಣ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದರೇ ತಪ್ಪಾಗ ಲಾರದು.

Sadguru Sri Madhusudan Sai: ಸತ್ಯ ಸಾಯಿ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಕೊಡುಗೆ: ಶ್ರೀ ಮಧುಸೂದನ ಸಾಯಿ

ಸತ್ಯ ಸಾಯಿ ವೈದ್ಯಕೀಯ ಕಾಲೇಜು ಇಡೀ ಜಗತ್ತಿಗೆ ಕೊಡುಗೆ

Sadguru Sri Madhusudan Sai: ಸತ್ಯ ಸಾಯಿ ಗ್ರಾಮದಲ್ಲಿರುವ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಂದು ಕೊಡುಗೆಯಾಗಿದೆ. ಜಗತ್ತಿನ ಯಾವುದೇ ಭಾಗದ ಜನರು ಇಲ್ಲಿಗೆ ಬಂದು ಉಚಿತವಾಗಿ ಚಿಕಿತ್ಸೆ ಪಡೆಯಲಿ ಎಂಬುದು ನಮ್ಮ ಆಲೋಚನೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತಿಳಿಸಿದ್ದಾರೆ.

Marutha Movie: ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರಕ್ಕೆ U/A ಪ್ರಮಾಣಪತ್ರ: ಅ.31ಕ್ಕೆ ಸಿನಿಮಾ ಬಿಡುಗಡೆ

ಎಸ್. ನಾರಾಯಣ್ ನಿರ್ದೇಶನದ ʼಮಾರುತʼ ಚಿತ್ರಕ್ಕೆ U/A ಪ್ರಮಾಣಪತ್ರ

Marutha Movie: ಖ್ಯಾತ ನಿರ್ದೇಶಕ ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಮಾರುತʼ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ ನೀಡದೆ U/A ಪ್ರಮಾಣಪತ್ರ ನೀಡಿದೆ. ಈ ಚಿತ್ರ ಅಕ್ಟೋಬರ್ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Bigg Boss Kannada 12: ಬಿಗ್‌ಬಾಸ್‌ ಸ್ಪರ್ಧಿಗಳು ಬಿಡದಿಯ ಖಾಸಗಿ ರೆಸಾರ್ಟ್‌ಗೆ ಶಿಫ್ಟ್‌

ಬಿಗ್‌ಬಾಸ್‌ ಸ್ಪರ್ಧಿಗಳು ಬಿಡದಿಯ ಖಾಸಗಿ ರೆಸಾರ್ಟ್‌ಗೆ ಶಿಫ್ಟ್‌

Jollywood Studio: ಬಿಗ್ ಬಾಸ್ ಕನ್ನಡ ಸೀಸನ್ 12 ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಆದರೆ, ಪರಿಸರ ನಿಯಮ ಉಲ್ಲಂಘಿಸಿದ್ದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಬಿಗ್‌ ಬಾಸ್‌ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್‌ ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಿತ್ತು. ಇದೀಗ ಸ್ಟುಡಿಯೋ ಬಂದ್‌ ಮಾಡಲಾಗಿದೆ.

ಅಬಾಟ್ ಪರಿಚಯಿಸುತ್ತಿದೆ ಅವೀರ್™️ ಡಿಆರ್, ಜಗತ್ತಿನ ಮೊದಲ ಡ್ಯುಯಲ್ ಚೇಂಬರ್ ಲೀಡ್ ರಹಿತ ಪೇಸ್‌ಮೇಕರ್‌ ಈಗ ಭಾರತದಲ್ಲಿ

ಅಬಾಟ್ ಪರಿಚಯಿಸುತ್ತಿದೆ ಅವೀರ್™️ ಡಿಆರ್,

ಲೀಡ್-ರಹಿತ ಪೇಸ್‌ಮೇಕರ್ಸ್ ಹೊಸ, ಹೆಚ್ಚು ಸುಧಾರಿತ ಆಯ್ಕೆಯಾಗಿದೆ. ಇವುಗಳು ಬಹಳ ಸಣ್ಣ ಸಾಧನಗಳಾಗಿದ್ದು, ಇದನ್ನು ಒಂದು ಕ್ಯಾಥೆಟರ್ ಮೂಲಕ ರಕ್ತನಾಳಗಳಲ್ಲಿ ಹಾಕಿ, ಹೃದಯದೊಳಗೆ ನೇರವಾಗಿ ಇರಿಸಲಾಗುತ್ತದೆ- ಇದರಲ್ಲಿ ಯಾವುದೇ ತಂತಿಗಳ ಅಗತ್ಯ ವಿರುವುದಿಲ್ಲ. ಇದರಿಂದ ಈ ಪ್ರಕ್ರಿಯೆಯು ಕನಿಷ್ಠ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುತ್ತದೆ.

ಮ್ಯಾಟರ್ ಅತ್ತಿಬೆಲೆಯಲ್ಲಿ ಹೊಸ ಎಕ್ಸ್‌ಪೀರಿಯನ್ಸ್ ಹಬ್ ಉದ್ಘಾಟನೆ: ಕರ್ನಾಟಕದ ವಿದ್ಯುತ್ ಭವಿಷ್ಯಕ್ಕೆ ಹೊಸ ಶಕ್ತಿ

ಮ್ಯಾಟರ್ ಅತ್ತಿಬೆಲೆಯಲ್ಲಿ ಹೊಸ ಎಕ್ಸ್‌ಪೀರಿಯನ್ಸ್ ಹಬ್ ಉದ್ಘಾಟನೆ

ಅತ್ತಿಬೆಲೆ, ಆನೆಕಲ್, ಬೆಂಗಳೂರಿನಲ್ಲಿರುವ ಈ ಮ್ಯಾಟರ್ ಎಕ್ಸ್‌ಪೀರಿಯನ್ಸ್ ಹಬ್ ಭವಿಷ್ಯದ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನಗಳನ್ನು ಅನುಭವಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಕೇಂದ್ರವಾಗಿದೆ. ಇಲ್ಲಿ ಭೇಟಿ ನೀಡುವವರು ಎರಾ (AERA) – ಭಾರತದ ಮೊದಲ ಗಿಯರ್ ಹೊಂದಿದ ಎಲೆಕ್ಟ್ರಿಕ್ ಮೋಟಾರ್‌ ಬೈಕ್‌ ಅನ್ನು ನೇರವಾಗಿ ಅನುಭವಿಸಬಹುದು.

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ನಾವು ಯಾರನ್ನೂ ವಿಭಜಿಸುವುದಿಲ್ಲ ಎಂದ ಡಿ.ಕೆ. ಶಿವಕುಮಾರ್‌

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ; ಡಿಸಿಎಂ ಡಿಕೆಶಿ ಹೇಳಿದ್ದೇನು?

DK Shivakumar: ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಭಿನ್ನಮತವಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ʼನಾವು ಯಾರನ್ನೂ ವಿಭಜಿಸುವುದಿಲ್ಲ. ಈ ವಿಚಾರ ಆ ಸಮಾಜಕ್ಕೆ ಹಾಗೂ ಜನರಿಗೆ ಬಿಡುತ್ತೇವೆ. ಆ ಸಮುದಾಯದ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Kantara: Chapter 1: ನೀವು ದೈವಗಳ ಅನುಕರಣೆ ಮಾಡೋದು ಸರೀನಾ?; ಕಾಂತಾರ-1 ಚಿತ್ರತಂಡದ ವಿರುದ್ಧ ನೆಟ್ಟಿಗರ ಆಕ್ರೋಶ

ನೀವು ದೈವಗಳ ಅನುಕರಣೆ ಮಾಡೋದು ಸರೀನಾ?; ಕಾಂತಾರ ವಿರುದ್ಧ ಆಕ್ರೋಶ

Sandalwood News: ಒಂದೆಡೆ ಕಾಂತಾರ ಚಿತ್ರತಂಡ ದೈವಗಳನ್ನು ಅನುಕರಿಸಬಾರದು ಎಂದು ಎಚ್ಚರಿಕೆ ನೀಡಿದ್ದರೆ, ಮತ್ತೊಂದೆಡೆ ಚಿತ್ರತಂಡದ ವಿರುದ್ಧ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಿನಿಮಾದಲ್ಲಿ ನೀವು ದೈವಗಳನ್ನು ಅನುಕರಿಸಿದರೆ ಸರಿ, ಪ್ರೇಕ್ಷಕರು ತಮ್ಮ ಖುಷಿಗಾಗಿ ದೈವಗಳನ್ನು ಅನುಕರಣೆ ಮಾಡಿದರೆ ತಪ್ಪಾ? ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲೊಂದು ಭಯಾನಕ ಘಟನೆ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಉಬರ್ ಕ್ಯಾಬ್ ಡ್ರೈವರ್; ವಿಡಿಯೊ ಇಲ್ಲಿದೆ

ಬೆಂಗಳೂರು ಕ್ಯಾಬ್‌ನಲ್ಲಾದ ಕಹಿ ಅನುಭವ ಹಂಚಿಕೊಂಡ ಇನ್‌ಫ್ಲುಯೆನ್ಸರ್‌

ಸಿಲಿಕಾನ್ ಸಿಟಿ ಬೆಂಗಳೂರು ಮಹಿಳೆಯರಿಗೆ, ಯುವತಿಯರಿಗೆ ಎಷ್ಟು ಸೇಫ್ ಎಂಬ ಯಕ್ಷಪ್ರಶ್ನೆ ಆಗಾಗ ಎದುರಾಗುತ್ತಲೇ ಇರುತ್ತದೆ. ಇದೀಗ ನಗರದಲ್ಲಿ ಅಂತಹದ್ದೊಂದು ಭಯಾನಕ ಕೃತ್ಯ ನಡೆದಿದೆ. ಕ್ಯಾಬ್‌ನಲ್ಲಿ ಯುವತಿ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿರುವ ಯುವತಿ ರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಅವರನ್ನು ಹಂಚಿಕೊಂಡಿದ್ದಾರೆ.

Dearness Allowance: ಬಾಕಿ ತುಟ್ಟಿಭತ್ಯೆ ಬಿಡುಗಡೆ ಮಾಡಿ; ಸಿಎಂಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ

ಬಾಕಿ ತುಟ್ಟಿಭತ್ಯೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ

DA arrears: ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಆದ್ದರಿಂದ, ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೂ ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಲು ಕ್ರಮ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಕೋರಿದ್ದಾರೆ.

Loading...