Viral Video: ಮಸಾಲೆ ದೋಸೆಯನ್ನು ಹೀಗೂ ತಿನ್ನಬಹುದಾ? ನೀವು ಕೂಡ ಟ್ರೈ ಮಾಡಿ ನೋಡಿ
ಕಮಾಂಡರ್ ನವೀನ್ ಪಂಡಿತ ಮಸಾಲಾ ದೋಸೆಯನ್ನು ಕೈಗಳಿಂದ ತಿನ್ನುವ ಬದಲು ಫೋರ್ಕ್ ಮತ್ತು ಚಾಕು ಬಳಸಿ ತಿಂದಿದ್ದಾರೆ. ಅವರ ಈ ವಿಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಕೂಡ ಈ ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ.


ಸಾಮಾನ್ಯವಾಗಿ ಬಿಸಿ ಬಿಸಿ ಮಸಾಲಾ ದೋಸೆ ನಿಮ್ಮೆದುರಿಗೆ ಇಟ್ಟಾಗ ಏನು ಮಾಡುತ್ತೀರಿ? ನಿಧಾನಕ್ಕೆ ದೋಸೆಯನ್ನು ಸ್ವಲ್ಪ ಸ್ವಲ್ಪವೇ ಕೈಯಿಂದ ತೆಗೆದುಕೊಂಡು ತಿನ್ನುತ್ತೀರಿ ಅಲ್ವಾ? ಆದರೆ ಕಮಾಂಡರ್ ನವೀನ್ ಪಂಡಿತ ಮಸಾಲಾ ದೋಸೆಯನ್ನು ಕೈಗಳಿಂದ ತಿನ್ನುವ ಬದಲು ಫೋರ್ಕ್ ಮತ್ತು ಚಾಕುವನ್ನು ಬಳಸಿ ತಿಂದಿದ್ದಾರೆ. ಅವರ ಈ ವಿಶಿಷ್ಟ ವಿಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಕಮಾಂಡರ್ ನವೀನ್ ಮಸಾಲಾ ದೋಸೆ ತಿನ್ನುವ ತನ್ನ ವಿಶಿಷ್ಟ ವಿಧಾನವನ್ನು ಪ್ರದರ್ಶಿಸಿದ್ದಾರೆ. ಅವರು ಗರಿಗರಿಯಾದ ಮಸಾಲಾ ದೋಸೆಯನ್ನು ಫೋರ್ಕ್ ಮತ್ತು ಚಾಕು ಬಳಸಿ ಕತ್ತರಿಸಿದ್ದಾರೆ. ಹೀಗೆ ಕತ್ತರಿಸಿದ ದೋಸೆ ತುಂಡನ್ನು ಫೋರ್ಕ್‌ನಲ್ಲಿ ಚುಚ್ಚಿಕೊಂಡು ಅದನ್ನು ಚಟ್ನಿಗೆ ಅದ್ದಿ ಸವಿದಿದ್ದಾರೆ.
ಕಮಾಂಡರ್ ನವೀನ್ ಮಸಾಲಾ ದೋಸೆಯನ್ನು ತಿನ್ನುವ ಶೈಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೊ 4.3 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆಯಂತೆ.
ವಿಡಿಯೊ ನೋಡಿ...
"ಸರ್, ನಿಮ್ಮ ವಿರುದ್ಧ ಚೆನ್ನೈನಲ್ಲಿ ಎಫ್‌ಐಆರ್ ದಾಖಲಾಗಿದೆ" ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ, "ನಿಜವಾದ ಕೌಶಲ್ಯವೆಂದರೆ ಬಿಳಿ ಶರ್ಟ್ ಮೇಲೆ ಆಹಾರದ ಒಂದು ಹನಿ ಬೀಳದಂತೆ ತಿನ್ನುವುದು" ಎಂದು ಬರೆದಿದ್ದಾರೆ. "ಒಂದು ರೀತಿಯ, ಗಡಿರೇಖೆಯ OCD ಹೊಂದಿರುವ ವ್ಯಕ್ತಿತ್ವ ಇದು. ಈ ವಿಡಿಯೊ ನನಗೆ ತುಂಬಾ ತೃಪ್ತಿ ತಂದಿದೆ" ಎಂದು ಒಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪಾಕೆಟ್ ಮನಿಯನ್ನು ಭಾರತೀಯ ಸೇನೆಗೆ ನೀಡಿದ ಪುಟ್ಟ ಪೋರ; ಈ ಬಾಲಕನ ದೇಶಪ್ರೇಮಕ್ಕೆ ಸಾಟಿಯೇ ಇಲ್ಲ!
"ಅವರು ದೋಸೆ ತಿನ್ನುತ್ತಿಲ್ಲ, ಅದರ ತೆಳುವಾದ ಖಾರದ ಕ್ರೇಪ್ ಅನ್ನು ಹಿಸುಕಿದ ಆಲೂಗಡ್ಡೆಯಿಂದ ತುಂಬಿಸಿ, ಮಸಾಲೆ ರುಚಿಯ ಜೊತೆಗೆ ಬಡಿಸಲಾಗುತ್ತದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಸತ್ಯ... ನೀವು ಫೌಜ್ ಬಿಟ್ಟು ಹೋಗಬಹುದು. ಆದರೆ ಫೌಜ್ ಎಂದಿಗೂ ನಿಮ್ಮನ್ನು ಬಿಡುವುದಿಲ್ಲ" ಎಂದು ಒಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. "ಇದು ಎಲ್ಲರೂ ಕಲಿಯಬೇಕಾದ ಕೌಶಲ್ಯ... ಇದನ್ನು ಅಚ್ಚುಕಟ್ಟಾಗಿ ತಿನ್ನುವುದು ಎಂದು ಕರೆಯಲಾಗುತ್ತದೆ. ಬರ್ಗರ್ ವಿಡಿಯೊ ಮಾಡಲು ನಿಮ್ಮನ್ನು ವಿನಂತಿಸುತ್ತಿದ್ದೇನೆ" ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.