Don 3: ರಣವೀರ್ ಸಿಂಗ್ ಅಭಿನಯದ 'ಡಾನ್ 3' ಚಿತ್ರೀಕರಣಕ್ಕೆ ಡೇಟ್ ಫಿಕ್ಸ್
ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಸಾಲು ಸಾಲು ಸಿನಿಮಾ ಆಫರ್ ಬರುತ್ತಿದೆ. ಅದಾಗ್ಯೂ ಅವರು ಸಿನಿಮಾಕ್ಕೆ ಆದ್ಯತೆ ನೀಡುವ ಜತೆಗೆ ಫ್ಯಾಮಿಲಿಗೂ ಕೂಡ ಸಾಕಷ್ಟು ಸಮಯ ನೀಡುತ್ತಿದ್ದಾರೆ. ಹೀಗಾಗಿ ಮಗಳ ಆರೈಕೆಗಾಗಿ ಪತ್ನಿ ದೀಪಿಕಾಗೆ ಸಾಥ್ ನೀಡುತ್ತಿದ್ದಾರೆ. ಈ ನಡುವೆ ತಮ್ಮ ಮುಂಬರುವ ಸಿನಿಮಾಗಾಗಿ ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ʼಡಾನ್ 3ʼ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಅಭಿನಯಿಸ್ತಾರಾ ಎಂಬ ಅನೇಕ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ.

Ranveer Singh, Vikrant Massey


ʼಡಾನ್ 3ʼ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಅಭಿನಯಿಸಲಿದ್ದು ಶೂಟಿಂಗ್ ಯಾವಾಗ ಆಗುತ್ತೆ ಎಂದು ಕಾದುಕುಳಿತ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ʼಡಾನ್ 3ʼ ಸಿನಿಮಾದ ಮುಹೂರ್ತ ಫಿಕ್ಸ್ ಆಗಿದ್ದು, ಈ ವಿಚಾರ ಅವರ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ.

ಕಳೆದ ವರ್ಷ ಚಿತ್ರೀಕರಣ ಆರಂಭವಾಗಬೇಕಿದ್ದ ʼಡಾನ್ 3ʼ ಸಿನಿಮಾವು ಹಲವಾರು ಕಾರಣಗಳಿಂದ ವಿಳಂಬವಾಗಿತ್ತು. ಅಂದುಕೊಂಡಂತೆ ಆಗಿದ್ದರೆ ʼಡಾನ್ 3ʼ ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುತ್ತಿತ್ತು. ನಟಿ ಕಿಯಾರಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ತದ ನಂತರ ಅವರು ಪ್ರಗ್ನೆಂಟ್ ಎಂಬ ಕಾರಣಕ್ಕೆ ಈ ಸಿನಿಮಾದಿಂದ ದೂರ ಉಳಿಯಬೇಕಾಯಿತು. ಬಳಿಕ ಚಿತ್ರ ತಂಡ ಕೃತಿ ಸೋನನ್ ಆಯ್ಕೆ ಮಾಡಿಕೊಂಡು ʼಡಾನ್ 3ʼ ಚಿತ್ರಿಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ʼಡಾನ್ 3ʼ ಸಿನಿಮಾ ನಿರ್ದೇಶಕ ಫರ್ಹಾನ್ ಅಖ್ತರ್ ʼ120 ಬಹದ್ದೂರ್ʼ ಸಿನಿಮಾದ ನಿರ್ಮಾಪಕರಾಗಿದ್ದು ಆ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದರು. ಹೀಗಾಗಿ ʼಬಹದ್ದೂರ್ʼ ಮುಗಿಸಿ ʼಡಾನ್ 3ʼ ಶೂಟಿಂಗ್ನಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದರು. ಈ ನಡುವೆ ನಟ ರಣವೀರ್ ಸಿಂಗ್ ಕೂಡ ʼಧುರಂದರ್ʼ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ʼಡಾನ್ 3ʼ ಚಿತ್ರೀಕರಣ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಆರಂಭ ಮಾಡಲು ಚಿತ್ರತಂಡ ನಿರ್ಧಾರ ಕೈಗೊಂಡಿದೆ.

ʼದಿಲ್ ಧಡಕ್ನೆ ದೋʼ ನಂತರ ರಣವೀರ್ ಮತ್ತು ವಿಕ್ರಾಂತ್ ಮೆಸ್ಸಿ ಮತ್ತೆ ʼಡಾನ್ 3ʼ ಸಿನಿಮಾ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ʼಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಮುಂದೆ ವಿಕ್ರಾಂತ್ ಮಾಸ್ ಆಗಿ ಅಬ್ಬರಿಸಲಿದ್ದಾರೆ. ನಟ ವಿಕ್ರಾಂತ್ ಅವರು ಸದ್ಯಕ್ಕೆ ʼದೋಸ್ತಾನಾ 2ʼ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಈ ಚಿತ್ರೀಕರಣ ಪೂರ್ಣವಾದ ಬಳಿಕ ʼಡಾನ್ 3ʼ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ʼಡಾನ್ 3ʼ ಸಿನಿಮಾದ ಶೂಟಿಂಗ್ ಸೆಪ್ಟಂಬರ್ನಲ್ಲಿ ಆರಂಭವಾಗಲಿದ್ದು ಮೊದಲ ಹಂತದಲ್ಲಿ ಯಾವೆಲ್ಲ ಸಿಕ್ವೇನ್ಸ್ಗಳು ಶೂಟ್ ಆಗಲಿದೆ, ಇದರಲ್ಲಿ ಇಬ್ಬರು ನಟರು ಭಾಗಿಯಾಗ್ತಾರಾ? ಎಂಬ ಬಗ್ಗೆ ಸಿನಿಮಾ ತಂಡ ಯಾವುದೆ ಮಾಹಿತಿ ನೀಡಿಲ್ಲ. ನಟ ನಟಿಯರ ಬಗ್ಗೆ ಸಿನಿಮಾ ತಂಡ ಗೌಪ್ಯತೆ ಕಾಯ್ದಿಟ್ಟುಕೊಂಡಿದೆ. ಚಿತ್ರಕ್ಕೆ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಬರಲಿದೆ.