ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saregamapa Kannada: 13 ಸ್ಪರ್ಧಿಗಳು; ಒಂದೇ ಸಿಂಹಾಸನ: ಫಿನಾಲೆ ತಲುಪುವ ಆ ಮೊದಲ ಸ್ಪರ್ಧಿ ಯಾರು? ಯಾರಿಗೆ ಸಿಗಲಿದೆ 'ಟಿಕೆಟ್ ಟು ಫಿನಾಲೆ'?

ಸರಿಗಮಪದ ಈ ಸೀಸನ್ ವಿಭಿನ್ನ ಕಾನ್ಸೆಪ್ಸ್‌ನಿಂದ ಗಮನ ಸೆಳೆಯುತ್ತಿದೆ. ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಜನಪ್ರಿಯ ನಿರೂಪಕಿ ಅನುಶ್ರೀ ಶೋದ ದೊಡ್ಡ ಆಕರ್ಷಣೆ. ಸರಿಗಮಪದ ಈ ಸೀಸನ್ ಟಿಕೆಟ್ ಟು ಫಿನಾಲೆ ಯಾರಿಗೆ ಸಿಗಲಿದೆ? ಎಂಬ ಪ್ರಶ್ನೆಗೆ ಮೇ 17 ಮತ್ತು 18ರಂದು ಉತ್ತರ ಸಿಗಲಿದೆ.

ಸರಿಗಮಪ ಟಿಕೆಟ್ ಟು ಫಿನಾಲೆ ಯಾರ ಕೈ ಸೇರಲಿದೆ?

Sarigamapa ticket to finale

Profile Pushpa Kumari May 15, 2025 6:01 PM

ಬೆಂಗಳೂರು: ಕನ್ನಡದ ಟಿ.ವಿ. ಇತಿಹಾಸದಲ್ಲಿ ಅತೀಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸರಿಗಮಪ (Sarigamapa). ಈ ರಿಯಾಲಿಟಿ ಶೋಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಸರಿಗಮಪ ಕಾರ್ಯಕ್ರಮದಿಂದ ಎಷ್ಟೋ ಜನರು ಬದುಕು ಕಟ್ಟಿಕೊಂಡಿದ್ದಾರೆ. ಜತೆಗೆ ಈ ವೇದಿಕೆಯ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. 6 ವರ್ಷದಿಂದ 60 ವರ್ಷ ವಯೋಮಿತಿಯ ಸ್ಪರ್ಧಿಗಳು ಭಾಗವಹಿಸುತ್ತಿರುವ ಸರಿಗಮಪದ ಈ ಸೀಸನ್ ವಿಭಿನ್ನ ಕಾನ್ಸೆ ಮತ್ತಷ್ಟು ಇಂಟ್ರಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಅಷ್ಟೇ ಅಲ್ಲದೇ ತೀರ್ಪುಗಾರರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್, ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಜನಪ್ರಿಯ ನಿರೂಪಕಿ ಅನುಶ್ರೀ ಈ ಆವೃತ್ತಿಯಲ್ಲಿ ಗಮನ ಸೆಳೆದಿದ್ದಾರೆ.

ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆ ಜನರ ಕುತೂಹಲ ಹೆಚ್ಚಾಗುವುದರ ಜತೆಗೆ ಸ್ಪರ್ಧೆಯೂ ಮತ್ತಷ್ಟು ಕಠಿಣವಾಗುತ್ತಿದೆ. ಈ ವಾರ ನಡೆಯಲಿರುವ 'ಟಿಕೆಟ್ ಟು ಫಿನಾಲೆ'ಯಲ್ಲಿ 13 ಸ್ಪರ್ಧಿಗಳು- ಬಾಳು ಬೆಳಗುಂದಿ, ಭೂಮಿಕಾ, ದ್ಯಾಮೇಶ, ಕಾರ್ತಿಕ್, ಲಹರಿ, ಮನೋಜ್, ಅಮೋಘ ವರ್ಷ, ರಶ್ಮಿ ಡಿ., ಸುಧೀಕ್ಷಾ, ದೀಪಕ್, ಆಗಮ ಶಾಸ್ತ್ರಿ, ಶಿವಾನಿ, ಮತ್ತು ಆರಾಧ್ಯ ರಾವ್ ನಡುವೆ ಸ್ಪರ್ಧೆ ನಡೆಯಲಿದೆ. ಇನ್ನು ಡೈರೆಕ್ಟ್ ಆಗಿ ಫಿನಾಲೆಗೆ ಟಿಕೆಟ್ ಪಡೆಯಲಿರುವ ಆ ಒಬ್ಬ ಲಕ್ಕಿ ಸ್ಪರ್ಧಿ ಯಾರು ಎಂದು ಕಾದು ನೋಡಬೇಕಾಗಿದೆ.

ಇದನ್ನು ಓದಿ: Zee Kannada: ಝೀ ಕನ್ನಡದಲ್ಲಿ ಹಾಡು, ಗೇಮ್, ಸಿನಿಮಾ; ಇದು ಭರ್ಜರಿ ಮನರಂಜನೆಯ ಮಹಾ ಧಮಾಕ

ಅಷ್ಟೇ ಅಲ್ಲದೇ, ಈ ವಾರ ನಡೆಯಲಿರುವ ಟಿಕೆಟ್ ಟು ಫಿನಾಲೆ ಎಪಿಸೋಡ್‌ಗೆ ಮತ್ತಷ್ಟು ರಂಗು ನೀಡಲು ಕನ್ನಡ ಚಿತ್ರ ರಂಗದ ಖ್ಯಾತ ನಟ ಶರಣ್ ಮತ್ತು ನಾಯಕಿ ಅದಿತಿ ಪ್ರಭುದೇವ ಅವರು ಎಂಟ್ರಿ ನೀಡಲಿದ್ದಾರೆ. ಶರಣ್ ಅವರ ಕಾಮಿಡಿ, ಅದಿತಿ ಪ್ರಭುದೇವ ಅವರ ಚಾರ್ಮ್ 'ಟಿಕೆಟ್ ಟು ಫಿನಾಲೆ' ಎಪಿಸೋಡ್‌ನ ಕಲರ್ ಫುಲ್ ಮಾಡೋದು ಅಲ್ಲದೇ ಸ್ಪರ್ಧಿಗಳ ಹುಮ್ಮಸ್ಸನ್ನು ಹೆಚ್ಚಿಸಲಿದೆ. ಕಠಿಣ ಸ್ಪರ್ಧೆಯ ನಡುವೆ 'ಟಿಕೆಟ್ ಟು ಫಿನಾಲೆ' ಯಾರಿಗೆ ಸಿಗಲಿದೆ ಎನ್ನುವ ಪ್ರಶ್ನೆಗೆ ಮೇ 17 ಮತ್ತು 18ರಂದು ಉತ್ತರ ಸಿಗಲಿದೆ.