Samantha Ruth Prabhu: ಸಮಂತಾ ಜೊತೆ ಡೇಟಿಂಗ್ ರೂಮರ್ಸ್ ನಡುವೆಯೇ ನಿರ್ಮಾಪಕ ರಾಜ್ ನಿಡಿಮೋರು ಪತ್ನಿಯಿಂದ ಪೋಸ್ಟ್
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ರಾಜ್ ಆಂಡ್ ಡಿಕೆ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಪರಸ್ಪರ ಪ್ರೀತಿಸುತಿದ್ದಾರೆ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಇತ್ತೀಚೆಗೆ ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಅವರ ಇತ್ತೀಚಿನ ಕೆಲವು ಫೋಟೋ ಮತ್ತು ಆಗಾಗ್ಗೆ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.


ಹೈದರಾಬಾದ್: ನಟಿ ಸಮಂತಾ ರುತು ಪ್ರಭು (actress Samantha Ruth Prabhu) ಮತ್ತು ರಾಜ್ ಆಂಡ್ ಡಿಕೆ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಕೆಲವು ದಿನಗಳಿಂದ ಜೋರಾಗಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ನಟಿ ಹಲವು ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದರು. ಆದರೆ ಇದೀಗ ರಾಜ್ ನಿಡಿಮೋರು ಅವರ ಮಾಜಿ ಪತ್ನಿ (Raj Nidimoru ex wife Shhyamali De) ಒಂದು ರಹಸ್ಯಮಯವಾದ ಪತ್ರವೊಂದನ್ನು ಬರೆದಿದ್ದು, ಸಮಯ ಎಲ್ಲವನ್ನೂ ಬಹಿರಂಗಪಡಿಸುತ್ತದೆ... ಎಂದು ಹೇಳಿದ್ದಾರೆ. ಇದು ಈಗ ನಟಿಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ಆಂಡ್ ಡಿಕೆ ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಪರಸ್ಪರ ಪ್ರೀತಿಸುತಿದ್ದಾರೆ, ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿಗಳು ಇತ್ತೀಚೆಗೆ ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಅವರ ಇತ್ತೀಚಿನ ಕೆಲವು ಫೋಟೋ ಮತ್ತು ಆಗಾಗ್ಗೆ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ. ಜೊತೆಗೆ ಇಬ್ಬರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಈ ನಡುವೆ ಇದೀಗ ರಾಜ್ ಅವರ ಮಾಜಿ ಪತ್ನಿ ಶ್ಯಾಮಲಿ ದೇ ಇನ್ಸ್ಟಾಗ್ರಾಮ್ನಲ್ಲಿ ರಹಸ್ಯಮಯವಾದ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇದು ಈಗ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಶ್ಯಾಮಿಲಿ ಅವರು ಯಾರ ಹೆಸರನ್ನು ಹೇಳದಿದ್ದರೂ ಅದು ರಾಜ್ ಮತ್ತು ಸಮಂತಾ ಬಗ್ಗೆಯೇ ಹೇಳಿರುವುದು ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಶ್ಯಾಮಿಲಿ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ನಲ್ಲಿ “Time exposes, Karma corrects, The Universe Humbles" (ಸಮಯ ಎಲ್ಲವನ್ನೂ ಬಯಲು ಮಾಡುತ್ತದೆ, ಕರ್ಮವನ್ನು ಸರಿಪಡಿಸುತ್ತದೆ, ವಿಶ್ವವು ವಿನಮ್ರವಾಗುತ್ತದೆ) ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಅವರು "ಒಳ್ಳೆಯ ಕರ್ಮವನ್ನು ಮಾಡಿ, ಜನರಿಗೆ ಸಹಾಯ ಮಾಡಿ ಮತ್ತು ಜನರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಿ ಎಂದು ಬರೆದಿದ್ದರು.

ಇದು ಅವರು ಸಮಂತಾ ಮತ್ತು ರಾಜ್ ಗೆ ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಹೀಗಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Israeli Strike: ಮುಂದುವರಿದ ಹಮಾಸ್-ಇಸ್ರೇಲ್ ಸಂಘರ್ಷ; 30 ಜನ ಬಲಿ
ರಾಜ್ ಮತ್ತು ಸಮಂತಾ ಡೇಟಿಂಗ್ ವದಂತಿ
ರಾಜ್ ನಿಡಿಮೋರು ಮತ್ತು ಸಮಂತಾ ಋತು ಪ್ರಭು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ನಟಿಯ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಗಳು ಆನ್ಲೈನ್ನಲ್ಲಿ ಭಾರಿ ಸಂಚಲನವನ್ನು ಮೂಡಿಸಿದೆ. ಒಂದು ಚಿತ್ರದಲ್ಲಿ ಚಿತ್ರದ ಬ್ಯಾನರ್ ಮುಂದೆ ರಾಜ್ ಮತ್ತು ಉಳಿದವರೊಂದಿಗೆ ಸಮಂತಾ ಪೋಸ್ ನೀಡುತ್ತಿರುವುದು ಕಂಡು ಬಂದಿದ್ದು, ಇನ್ನೊಂದರಲ್ಲಿ ಸಮಂತಾ ಅವರು ರಾಜ್ ಅವರ ಭುಜದ ಮೇಲೆ ತಲೆಯಿಟ್ಟು ವಿಮಾನದಲ್ಲಿ ತೆಗೆದುಕೊಂಡ ಸೆಲ್ಫಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ರಾಜ್ ಮಾಜಿ ಪತ್ನಿ ಯಾರು?
ರಾಜ್ ನಿಡಿಮೋರು ಮತ್ತು ಶ್ಯಾಮಲಿ 2015 ರಲ್ಲಿ ವಿವಾಹವಾಗಿದ್ದು, 2022 ರಲ್ಲಿ ಬೇರ್ಪಟ್ಟರು. ಶ್ಯಾಮಲಿ ಅವರು ಮನೋವಿಜ್ಞಾನ ಪದವೀಧರೆ ಮತ್ತು ರಾಕೇಶ್ ಓಂಪ್ರಕಾಶ್ ಮೆಹ್ರಾ ಮತ್ತು ವಿಶಾಲ್ ಭಾರದ್ವಾಜ್ ಅವರೊಂದಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.