ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs PBKS: ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಂಜಾಬ್‌

ಪಂಜಾಬ್ ಮತ್ತು ಮುಂಬೈ ಇದುವರೆಗೆ ಪರಸ್ಪರ 32 ಐಪಿಎಲ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಮುಂಬೈ ತಂಡ 17 ಮತ್ತು ಪಂಜಾಬ್‌ 15 ಪಂದ್ಯಗಳನ್ನು ಗೆದ್ದಿದೆ. ಹಾಲಿ ಆವೃತ್ತಿಯಲ್ಲಿ ಒಂದು ಆಡಿದ ಒಂದು ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 7 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು. ಈ ಸೋಲಿಗೆ ಮುಂಬೈ ಸೇಡು ತೀರಿಸಲು ಕಾದು ಕುಳಿತಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಪಂಜಾಬ್‌

Profile Abhilash BC Jun 1, 2025 7:11 PM

ಅಹಮದಾಬಾದ್: ಐಪಿಎಲ್ 2025ರ(MI vs PBKS) ಎರಡನೇ ಕ್ವಾಲಿಫೈಯರ್(MI vs PBKS Qualifier 2) ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ತಂಡ ಬೌಲಿಂಗ್‌ ಆಯ್ದುಕೊಂಡಿದೆ. ಮುಂಬೈ ಮೊದಲು ಬ್ಯಾಟಿಂಗ್‌ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದ್ದು, ಜೂನ್‌ 3ರಂದು ಆರ್‌ಸಿಬಿ ವಿರುದ್ಧ ಅಹಮದಾಬಾದ್ ಕ್ರೀಡಾಂಗಣದಲ್ಲೇ ಟ್ರೋಫಿಗಾಗಿ ಸೆಣಸಾಡಲಿದೆ. ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.

ಮುಂಬೈ ತಂಡ 11ನೇ ಬಾರಿ ಪ್ಲೇ-ಆಫ್ ಆಡುತ್ತಿದ್ದು, 7ನೇ ಬಾರಿ ಫೈನಲ್‌ಗೇರುವ ತವಕದಲ್ಲಿದೆ. ಪಂಜಾಬ್ 2ನೇ ಬಾರಿ ಫೈನಲ್ ಗೇರುವ ಗುರಿ ಇಟ್ಟುಕೊಂಡಿದೆ. 2014ರಲ್ಲಿ ಫೈನಲ್‌ಗೇರಿದ್ದ ತಂಡ ಸೋಲನುಭವಿಸಿತ್ತು.

ಹೆಡ್-ಟು-ಹೆಡ್

ಪಂಜಾಬ್ ಮತ್ತು ಮುಂಬೈ ಇದುವರೆಗೆ ಪರಸ್ಪರ 32 ಐಪಿಎಲ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಮುಂಬೈ ತಂಡ 17 ಮತ್ತು ಪಂಜಾಬ್‌ 15 ಪಂದ್ಯಗಳನ್ನು ಗೆದ್ದಿದೆ. ಹಾಲಿ ಆವೃತ್ತಿಯಲ್ಲಿ ಒಂದು ಆಡಿದ ಒಂದು ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 7 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು. ಈ ಸೋಲಿಗೆ ಮುಂಬೈ ಸೇಡು ತೀರಿಸಲು ಕಾದು ಕುಳಿತಿದೆ.

ಮುಂಬೈ ಇಂಡಿಯನ್ಸ್‌ ಪ್ಲೇ ಆಫ್/ನಾಕೌಟ್‌ ಸಾಧನೆ

2010 - ಫೈನಲ್ (ಚೆನ್ನೈ ವಿರುದ್ಧ 22 ರನ್‌ಗಳಿಂದ ಸೋಲು)

2011 - ಎಲಿಮಿನೇಟರ್ (ಆರ್‌ಸಿಬಿ ವಿರುದ್ಧ 43 ರನ್‌ಗಳಿಂದ ಸೋಲು)

2012 - ಕ್ವಾಲಿಫೈಯರ್ 2 (ಚೆನ್ನೈ ವಿರುದ್ಧ 38 ರನ್‌ಗಳಿಂದ ಸೋಲು)

2013 - ಫೈನಲ್ಸ್ (ಚೆನ್ನೈ ವಿರುದ್ಧ 23 ರನ್‌ಗಳಿಂದ ಜಯ)

2014 - ಕ್ವಾಲಿಫೈಯರ್ 2 (ಚೆನ್ನೈ ವಿರುದ್ಧ 7 ವಿಕೆಟ್‌ಗಳಿಂದ ಸೋಲು)

2015 - ಫೈನಲ್ಸ್ (ಚೆನ್ನೈ ವಿರುದ್ಧ 41 ರನ್‌ಗಳಿಂದ ಜಯ)

2017 - ಫೈನಲ್ಸ್ (ರೈಸಿಂಗ್ ಪುಣೆ ವಿರುದ್ಧ 1 ರನ್‌ನಿಂದ ಜಯ)

2019 - ಫೈನಲ್ (ಚೆನ್ನೈ ವಿರುದ್ಧ 1 ರನ್‌ನಿಂದ ಜಯ)

2020 - ಫೈನಲ್ (ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್‌ ಜಯ)

2023 - ಎಲಿಮಿನೇಟರ್ (ಗುಜರಾತ್ ವಿರುದ್ಧ 62 ರನ್‌ ಸೋಲು)

2025- ಎಲಿಮಿನೇಟರ್ (ಗುಜರಾತ್ ವಿರುದ್ಧ 20 ರನ್‌ ಗೆಲುವು)

ಪಂಜಾಬ್‌ ಪ್ಲೇ ಆಫ್/ನಾಕೌಟ್‌ ಸಾಧನೆ

2008 - ಎಲಿಮಿನೇಟರ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 9 ವಿಕೆಟ್‌ಗಳ ಸೋಲು)

2014 - ಫೈನಲ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು)

2025- ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ 8 ವಿಕೆಟ್‌ಗಳ ಸೋಲು