Viral Video: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಿಯತಮೆ; ವಿಡಿಯೊ ವೈರಲ್
ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನನ್ನು ತೀವ್ರವಾಗಿ ಥಳಿಸಿದ ಘಟನೆ ನಡೆದಿದೆ. ಆಕೆಯ ಥಳಿತದಿಂದ ಆತನ 13 ಮೂಳೆ ಮುರಿತಗಳಾಗಿದ್ದು, ಕಳೆದ 17 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಚಂಢೀಗಡ: ಸಂಬಂಧದಲ್ಲಿ ಬ್ರೇಕ್‍ಅಪ್, ಡಿವೋರ್ಸ್ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗಿರುವಾಗ ಪ್ರೀತಿಯಲ್ಲಿ ಮೋಸ ಹೋದವರಲ್ಲಿ ಕೆಲವರು ಜೀವ ಕಳೆದುಕೊಳ್ಳುತ್ತಾರೆ. ಇಲ್ಲವಾದರೆ ಮೋಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಇದೀಗ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬಳು ತನ್ನನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನನ್ನು ತೀವ್ರವಾಗಿ ಥಳಿಸಿದ್ದಾಳೆ. ಆಕೆಯ ಥಳಿತದಿಂದ ಆತನ 13 ಮೂಳೆ ಮುರಿತಗಳಾಗಿದ್ದು, ಕಳೆದ 17 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಗುಲ್ಶನ್ ಪ್ರಿಯತಮೆಯಿಂದ ಥಳಿತಕ್ಕೊಳಗಾದ ವ್ಯಕ್ತಿ. ಆಕೆ ಈ ಹಿಂದೆ ನೀಡಿದ್ದ 21.5 ಲಕ್ಷ ರೂ.ಗಳನ್ನು ಹಿಂದಿರುಗಿಸುವ ನೆಪದಲ್ಲಿ ತನ್ನ ಮನೆಗೆ ಆತನನ್ನು ಕರೆಸಿಕೊಂಡಿದ್ದಳು. ಮನೆಗೆ ಬಂದ ಆತನ ಮೇಲೆ ಮಹಿಳೆಯ ಕುಟುಂಬ ಸದಸ್ಯರು ಹಲ್ಲೆ ನಡೆಸಿದ್ದಾರೆ. ಜತೆಗೆ ಮಹಿಳೆ ತನ್ನನ್ನು ಮದುವೆಯಾಗುವಂತೆ ಕೇಳಿದಾಗ ನಿರಾಕರಿಸಿದ್ದೇನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಕ್ರೂರವಾಗಿ ಥಳಿಸಿದ್ದಾಳೆ ಎಂದು ಗುಲ್ಶನ್ ಹೇಳಿದ್ದಾನೆ.
ಗೆಳತಿಯಿಂದ ಹಲ್ಲೆಗೊಳಗಾದ ವ್ಯಕ್ತಿಯ ವಿಡಿಯೊ ಇಲ್ಲಿದೆ ನೋಡಿ...
हरियाणा के फरीदाबाद में बॉयफ्रेंड के हाथ-पैर तुड़वाए:गर्लफ्रेंड के रिश्तेदारों ने पीटा, शादी से इनकार किया था, 13 फ्रेक्चर आए, 17 दिन से अस्पताल में@police_haryana @FBDPolice pic.twitter.com/l6zi0XoqOH
— Anuj Tomar, Journalist (@THAKURANUJTOMAR) April 15, 2025
ಹಲ್ಲೆಗೊಳಗಾದ ಗುಲ್ಶನ್‍ನ ಎರಡೂ ಕೈಗಳು ಮತ್ತು ಕಾಲುಗಳಿಗೆ ಪ್ಲಾಸ್ಟರ್ ಕಟ್ಟಲಾಗಿದೆ. ಪ್ರಸ್ತುತ ಅವನು ಫರಿದಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ವಿಚಾರವೇನೆಂದರೆ ಗುಲ್ಶನ್ ಹಾಗೂ ಮಹಿಳೆ ವಿವಾಹಿತರಾಗಿದ್ದು, ಮಹಿಳೆಗೆ 10 ವರ್ಷದ ಮಗಳು ಇದ್ದರೆ, ಹಲ್ಲೆಗೊಳಗಾದ ಗೆಳೆಯ ಗುಲ್ಶನ್‌ಗೆ ಕೂಡ ಮೂರು ಮಕ್ಕಳಿದ್ದಾರೆ.
ಗುಲ್ಶನ್‍ನ ಮೊಬೈಲ್ ಅಂಗಡಿಗೆ ಮಹಿಳೆ ಆಗಾಗ್ಗೆ ಭೇಟಿ ನೀಡುವುದರೊಂದಿಗೆ ಅವರ ಪ್ರೇಮಕಥೆ 2019ರಲ್ಲಿ ಶುರುವಾಗಿತ್ತು. ಗುಲ್ಶನ್ ಮತ್ತು ಮಹಿಳೆ ತಮ್ಮ ಹಿಂದಿನ ಸಂಗಾತಿಗಳಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎನ್ನಲಾಗಿದೆ. ಗುಲ್ಶನ್ ತನ್ನ ಹೆಂಡತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಮಹಿಳೆ ಮತ್ತು ಆಕೆಯ ಪತಿಯೊಂದಿಗಿನ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗುಲ್ಶನ್ ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ದೂರಿನ ಆಧಾರದ ಮೇಲೆ ಪೊಲೀಸರು 5 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿ, ಮಹಿಳೆಯರ ಮಧ್ಯೆ ಮಾರಾಮಾರಿ; ವಿಡಿಯೊ ಇಲ್ಲಿದೆ
ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಅಂಗ ಕತ್ತರಿಸಿದ ಗೆಳತಿ!
ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರಿಯತಮನ ಮೇಲೆ ಮಹಿಳೆಯರು ಹಲ್ಲೆ ಮಾಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನನ್ನು ಮದುವೆಯಾಗಲು ನಿರಾಕರಿಸಿದ ಗೆಳೆಯನ ಮೇಲೆ ಹಲ್ಲೆ ನಡೆಸಿ ಆತನ ಖಾಸಗಿ ಭಾಗಗಳನ್ನು ಕತ್ತರಿಸಿದ ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು ಮತ್ತು ಆಕೆಯ ಬಳಿಯಿಂದ ರಕ್ತಸಿಕ್ತ ಚಾಕುವನ್ನು ವಶಪಡಿಸಿಕೊಂಡು, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.