ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿ, ಮಹಿಳೆಯರ ಮಧ್ಯೆ ಮಾರಾಮಾರಿ; ವಿಡಿಯೊ ಇಲ್ಲಿದೆ

ಮಥುರಾದ ಬರ್ಸಾನಾದ ಪ್ರಸಿದ್ಧ ರಾಧಾರಾಣಿ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಹಿಳೆಯರ ನಡುವೆ ಜಗಳ ನಡೆದಿದೆ. ಅವರ ಜಗಳವನ್ನು ನೋಡುಗರೊಬ್ಬರು ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.

ದೇವಾಲಯದಲ್ಲಿ ಜಡೆ ಜಗಳ; ಕೊನೆಗೆ ಆಗಿದ್ದೇನು?

Profile pavithra Apr 16, 2025 3:59 PM

ಲಖನೌ: ಸಣ್ಣ ಪುಟ್ಟ ಕಾರಣಕ್ಕೆ ಮಹಿಳೆಯರು ಜುಟ್ಟು ಹಿಡಿದುಕೊಂಡು ಜಗಳವಾಡುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತದೆ. ಅದೇ ರೀತಿ ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದ ಬರ್ಸಾನಾದ ಪ್ರಸಿದ್ಧ ರಾಧಾರಾಣಿ ದೇವಸ್ಥಾನದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಮತ್ತು ಭಕ್ತೆಯರ ನಡುವೆ ಜಗಳ ನಡೆದಿದೆ. ಅವರ ಜಗಳವನ್ನು ನೋಡುಗರೊಬ್ಬರು ರೆಕಾರ್ಡ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ. ಮಹಿಳಾ ಭದ್ರತಾ ಸಿಬ್ಬಂದಿ ಭಕ್ತೆಯರನ್ನು ಮತ್ತೊಂದು ಗೇಟ್‍ನಿಂದ ದೇವಾಲಯಕ್ಕೆ ಪ್ರವೇಶಿಸಲು ಮನವಿ ನಂತರ ಈ ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಪುರುಷ ಭದ್ರತಾ ಸಿಬ್ಬಂದಿ ಹರಸಾಹಸಪಟ್ಟು ಇವರ ಜಗಳವನ್ನು ತಡೆದ ಬಳಿಕ ಭಕ್ತೆಯರು ಜಗಳವನ್ನು ನಿಲ್ಲಿಸಿ ದೇವಾಲಯದ ಒಳಗೆ ಹೋಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ದೇವಾಲಯದಲ್ಲಿ ಭಕ್ತೆಯರು ಮತ್ತು ಮಹಿಳಾ ಭದ್ರತಾ ಸಿಬ್ಬಂದಿ ನಡುವೆ ಜಗಳ ನಡೆದಿರುವುದು ಕಂಡು ಬಂದಿದೆ. ಭಕ್ತರು ದೇವಾಲಯದ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊಡೆಯುವುದು ವಿಡಿಯೊದಲ್ಲಿ ಸೆರೆಯಾಗಿದೆ. ಗಲಾಟೆ ದೊಡ್ಡದಾಗುತ್ತಿದ್ದಂತೆ ಪುರುಷ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಭಕ್ತರು ಮತ್ತು ಮಹಿಳಾ ಭದ್ರತಾ ಸಿಬ್ಬಂದಿಯ ಜಗಳವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರ ಜಗಳ ನಿಲ್ಲಲಿಲ್ಲ. ಕೊನೆಗೆ ಭದ್ರತಾ ಸಿಬ್ಬಂದಿಯೊಬ್ಬರು ಕೋಪದಿಂದ ಮಹಿಳೆಯನ್ನು ನೆಲಕ್ಕೆ ತಳ್ಳಿದ್ದಾರೆ. ನಂತರ ಭಕ್ತರು ಜಗಳವನ್ನು ನಿಲ್ಲಿಸಿ ದೇವಾಲಯದ ಒಳಗೆ ಹೋಗಿದ್ದಾರೆ.

ಮಹಿಳೆಯರು ಹಾಗೂ ಭದ್ರತಾ ಸಿಬ್ಬಂದಿಯ ನಡುವಿನ ಜಗಳದ ವಿಡಿಯೊ ಇಲ್ಲಿದೆ ನೋಡಿ...



ಶನಿವಾರ (ಏಪ್ರಿಲ್ 12) ಭಕ್ತರು ದೇವಾಲಯವನ್ನು ಪ್ರವೇಶಿಸುವಾಗ ಈ ಘಟನೆ ನಡೆದಿದೆ. ಗಾರ್ಡ್ ಮತ್ತು ಮಹಿಳೆಯರು ಹೊಡೆದಾಡುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಪೊಲೀಸರು ಗಮನಕ್ಕೆ ಬಂದಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ವೈರಲ್ ವಿಡಿಯೊ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಒಂದಲ್ಲ ಎರಡಲ್ಲ, ಬರೋಬ್ಬರಿ 100 ಸಿಗರೇಟ್‌ ಬಳಸಿ ತಯಾರಿಸಿದ ಡ್ರೆಸ್‌ ನೋಡಿ ಶಾಕ್‌ ಆದ ನೆಟ್ಟಿಗರು

ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಮಹಿಳೆಯರು ಧಾರ್ಮಿಕ ಸ್ಥಳಗಳಲ್ಲಿ ಸೆಕ್ಯುರಿಟಿ ಗಾರ್ಡ್‍ಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಸೌದಿ ಅರೇಬಿಯಾದ ಮದೀನಾದಲ್ಲಿರುವ ಮಸೀದಿ ಅನ್-ನಬಾವಿಯೊಳಗೆ ಹೋಗಲೆತ್ನಿಸಿದ ಮಹಿಳೆಯೊಬ್ಬಳು ತಡೆಯಲು ಪ್ರಯತ್ನಿಸಿದ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ನಡೆದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಹಿಳೆ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುವುದು ನಂತರ ಭದ್ರತಾ ಸಿಬ್ಬಂದಿ ಮಹಿಳೆಗೆ ಕಪಾಳಮೋಕ್ಷ ಮಾಡಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಈ ವೈರಲ್ ಆದ ವಿಡಿಯೊ ಪವಿತ್ರ ಸ್ಥಳದಲ್ಲಿನ ಭದ್ರತಾ ಪ್ರೋಟೋಕಾಲ್‍ಗಳ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿತ್ತು.