Viral News: ಮದುವೆ ಮನೆಯಲ್ಲಿ ಜಗಳ; ತಪ್ಪಿಸಲು ಹೋಗಿ ದಾರುಣ ಅಂತ್ಯ ಕಂಡ ಯುವಕ
ಮದುವೆ ಮೆರವಣಿಗೆ ವೇಳೆ ಯುವಕರ ನಡುವೆ ಡಿಜೆ ಸಾಂಗ್ ಆಯ್ಕೆ ಮಾಡುವ ವಿಚಾರಕ್ಕೆ ಜಗಳ ನಡೆದಿದ್ದು, ಆ ವೇಳೆ ಇಬ್ಬರು ಯುವಕರು ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಈ ಘಟನೆಯಲ್ಲಿ ಮೋಹಿತ್ ಯಾದವ್ (17)ಯುವಕ ಸಾವನಪ್ಪಿದ್ದು, ಇನ್ನೊಬ್ಬನಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಇದೀಗ ವೈರಲ್(Viral News) ಆಗಿದೆ.


ಲಖನೌ: ಶುಭ ಕಾರ್ಯಕ್ಕೆ ನೂರೆಂಟು ವಿಘ್ನ ಎಂಬಂತೆ ಮದುವೆಯಂತಹ ಶುಭ ಸಮಾರಂಭ ನಡೆಯುವಾಗ ಜಗಳ, ಗಲಾಟೆ ನಡೆಯುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಊಟ ಸರಿ ಇಲ್ಲವೆಂದು ಜಗಳ, ವರದಕ್ಷಿಣೆಗೆ ಕಾರು ನೀಡಲಿಲ್ಲವೆಂದು ಜಗಳ ಹೀಗೆ ಹಲವಾರು ವಿಡಿಯೊಗಳು ಸೋಶಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಜಗಳ ನಡೆದಿದ್ದು, ಈ ವೇಳೆ ದುರಂತ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ನಡೆದ ಜಗಳದಿಂದ ತಪ್ಪಿಸಿಕೊಳ್ಳುವಾಗ ಬಾವಿಗೆ ಬಿದ್ದು ಹದಿಹರೆಯದ ಯುವಕನೊಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಇದೀಗ ವೈರಲ್(Viral News) ಆಗಿದೆ.
ಮೃತ ಯುವಕನನ್ನು ಮೋಹಿತ್ ಯಾದವ್ (17) ಎಂದು ಗುರುತಿಸಲಾಗಿದೆ.ಇತ್ತೀಚೆಗೆ ಪೋಖ್ರಾ ಚೈನ್ಪುರದಿಂದ ಸರ್ದಿಹಾ ಗ್ರಾಮದಲ್ಲಿರುವ ರಾಮ್ಸನೆಹ್ ವಿಶ್ವಕರ್ಮ ಅವರ ನಿವಾಸಕ್ಕೆ ಮದುವೆ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಡಿಜೆ ನುಡಿಸಬೇಕಾದ ಹಾಡುಗಳ ಆಯ್ಕೆಗೆ ಸಂಬಂಧಿಸಿದಂತೆ ಮದುವೆಗೆ ಬಂದಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಇದು ಮೂವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಮದುವೆ ಮನೆಯ ಸದಸ್ಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಾಗ್ವಾದದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ಯಾದವ್ ಮತ್ತು ಇನ್ನೊಬ್ಬ ವ್ಯಕ್ತಿ ಕತ್ತಲೆಯಲ್ಲಿ ಹತ್ತಿರದ ಬಾವಿಗೆ ಬಿದ್ದಿದ್ದಾರೆ. ಇದರಿಂದ ಮೋಹಿತ್ ಯಾದವ್ ಮೃತಪಟ್ಟಿದ್ದರೆ, ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ನಂತರ ಅವನನ್ನು ಬಾವಿಯಿಂದ ಹೊರಗೆ ತೆಗೆಯಲಾಗಿದೆ. ಮಾಹಿತಿ ತಿಳಿದ ನಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಗಾಯಗೊಂಡ ಯುವಕನಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಹಿಂದೆ ಕೂಡ ಇಂತಹದೊಂದು ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿತ್ತು. ರಾತ್ರಿ ಮದುವೆ ಸಮಾರಂಭದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಏಳು ಮಹಿಳೆಯರು ಮತ್ತು ಆರು ಹುಡುಗಿಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 10 ವರ್ಷದ ಬಾಲಕಿ ಮತ್ತು ಒಂದು ವರ್ಷದ ಮಗು ಸೇರಿತ್ತು ಎಂದು ವರದಿಯಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಆನೆ ಮರಿಗೂ ಬರ್ತ್ ಡೇ ಭಾಗ್ಯ! ಕ್ಯೂಟ್ ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ
ಕುಶಿನಗರದ ನೆಬುವಾ ನೌರಂಗಿಯಾದಲ್ಲಿ ಮದುವೆಗೆ ಬಂದ ಮಹಿಳೆಯರು ಮತ್ತು ಮಕ್ಕಳು ಹಳೆಯ ಬಾವಿಯನ್ನು ಮುಚ್ಚಿ ಕಾಂಕ್ರೇಟ್ ಮಾಡಲಾದ ಜಾಗದ ಮೇಲೆ ಕುಳಿತಿದ್ದರು. ಅವರ ಕುಳಿತಿದ್ದ ಸ್ಲ್ಯಾಬ್ ಕುಸಿದಿದೆ. ಇದರಿಂದ ಅವರೆಲ್ಲರೂ ಬಾವಿಗೆ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ 13 ಮಂದಿ ದುರಂತ ಅಂತ್ಯವನ್ನು ಕಂಡಿದ್ದರು.