Kaggere Prakash Column: ಸೈನಿಕರ ಕಥೆಗಳು
ನಮ್ಮ ದೇಶದ ಸೈನ್ಯ ಕಂಟೋನ್ಮೆಂಟ್‌ಗಳು (ದಂಡು ಪ್ರದೇಶ) ಹೆಚ್ಚಾಗಿ ಉತ್ತರ ಭಾರತದಲ್ಲೇ ವ್ಯಾಪಿಸಿ ಕೊಂಡಿವೆ. ಕರ್ನಾಟಕದ ಬೆಂಗಳೂರು, ಬೆಳಗಾವಿ ನಗರ ಪ್ರದೇಶಗಳಲ್ಲಿ ಮಿಲಿಟರಿ ತರಬೇತಿ ಕೇಂದ್ರಗಳೂ ಹೊರವಲಯದಲ್ಲೇ ಇವೆ. ಆ ವಿಶಾಲ ಸೇನಾನೆಲೆಗಳಿಗೆ ಸುರಕ್ಷತಾ ಕಾರಣಗಳಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುವುದಿಲ್ಲ.


ಕಗ್ಗೆರೆ ಪ್ರಕಾಶ್
ಕನ್ನಡದಲ್ಲಿ ಸೈನಿಕರ ಕಥೆ ಹೇಳುವ ಪುಸ್ತಕಗಳು ವಿರಳ. ಇಂಥ ಕೊರತೆಯನ್ನು ನೀಗಿಸುವಲ್ಲಿ ಸ್ವತಃ ಸೈನಿಕರೂ ಆಗಿದ್ದ ಬೈಂದೂರು ಚಂದ್ರಶೇಖರ ನಾವಡ ಅವರ ‘ಕಂಟೋನ್ಮೆಂಟ್ ಕಥೆಗಳು’ ಪುಸ್ತಕ ಯಶಸ್ವಿಯಾಗಿದೆ. ಇಲ್ಲಿ ಸೈನಿಕರ ವೈವಿಧ್ಯಮಯ ಬದುಕನ್ನು ಚಿತ್ರಿಸುವ 15 ಕಥೆಗಳಿವೆ. ಇವೆಲ್ಲವೂ ಲೇಖಕರ ಅನುಭವ ತೆಕ್ಕೆಗೆ ಸಿಕ್ಕಿ ಬರೆದ ಕಥೆಗಳಾಗಿದ್ದರಿಂದ ಭಾವ-ಬಂಧ ಹರಳು ಕಟ್ಟಿಕೊಂಡು ಬಂದಿವೆ. 22 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಬ್ಯಾಂಕ್ ಉದ್ಯೋಗಿಯಾಗಿ ರುವ ನಾವಡರು ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ. ‘ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್’, ‘ಸೈನಿಕನ ಆಂತರ್ಯದ ಪಿಸುನುಡಿ’ ಕೃತಿಗಳನ್ನೂ ರಚಿಸಿದ್ದಾರೆ.
ಇದನ್ನೂ ಓದಿ: Book Release: ಮಾ.16 ರಂದು ಡಿವಿಜಿ ಬಳಗ ಪ್ರತಿಷ್ಠಾನದಿಂದ ಎರಡು ಪುಸ್ತಕಗಳ ಲೋಕಾರ್ಪಣೆ
ಸೇನೆ ಮತ್ತು ಸೈನಿಕರ ಬದುಕಿನ ಕುರಿತ ಇವರ ಬರಹಗಳು ಅಧಿಕೃತವಾಗಿ ವಸ್ತುನಿಷ್ಠತೆಗೆ ಹೆಸರಾಗಿವೆ. ಕಂಟೋನ್ಮೆಂಟ್‌ನ ಸೈನಿಕರ ಬದುಕಿನ ಮೇಲೆ ಬೆಳಕು ಚೆಲುವ ಇಲ್ಲಿನ ಕಥೆಗಳು ಅವರ ಮನದ ತುಮುಲಗಳನ್ನು ಅನಾವರಣ ಮಾಡುತ್ತವೆ. ನೋವು, ಹತಾಶೆ, ಅಪಮಾನ, ಕೋಪ ಎಲ್ಲವನ್ನೂ ವಿಷಕಂಠನಂತೆ ನುಂಗಿ ದೇಶದ ಹಿತ ಕಾಯುವ ಸೈನಿಕರ ಇಲ್ಲಿನ ಕಥೆಗಳು ನಮ್ಮಲ್ಲಿ ಹೆಮ್ಮೆ ಮೂಡಿಸುತ್ತವೆ.
ನಮ್ಮ ದೇಶದ ಸೈನ್ಯ ಕಂಟೋನ್ಮೆಂಟ್‌ಗಳು (ದಂಡು ಪ್ರದೇಶ) ಹೆಚ್ಚಾಗಿ ಉತ್ತರ ಭಾರತದಲ್ಲೇ ವ್ಯಾಪಿಸಿಕೊಂಡಿವೆ. ಕರ್ನಾಟಕದ ಬೆಂಗಳೂರು, ಬೆಳಗಾವಿ ನಗರ ಪ್ರದೇಶಗಳಲ್ಲಿ ಮಿಲಿಟರಿ ತರಬೇತಿ ಕೇಂದ್ರಗಳೂ ಹೊರವಲಯದಲ್ಲೇ ಇವೆ. ಆ ವಿಶಾಲ ಸೇನಾನೆಲೆಗಳಿಗೆ ಸುರಕ್ಷತಾ ಕಾರಣಗಳಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುವುದಿಲ್ಲ.
ಹೀಗಾಗಿ ಕಂಟೋನ್ಮೆಂಟ್‌ನ ಎತ್ತರದ ಗೋಡೆಗಳ ನಡುವೆ ಬದುಕು ಸವೆಸುವ ಸೈನಿಕರ ಬದುಕಿನ ವಾಸ್ತವ ಚಿತ್ರಣವೂ, ಅವರೊಂದಿಗಿನ ಮುಖಾಮುಖಿಯೂ ನಾಗರಿಕರಿಗೆ ಅಪರೂಪವೇ. ಸೇನೆ ಮತ್ತು ಸೈನಿಕರ ಬದುಕಿನ ಮಾಹಿತಿಯುಳ್ಳ ಸಾಹಿತ್ಯವೂ ಕನ್ನಡದಲ್ಲಿ ವಿರಳವೇ. ಈ ನಿಟ್ಟಿನಲ್ಲಿ ಇಲ್ಲಿನ ‘ಕಂಟೋನ್ಮೆಂಟ್ ಕಥೆಗಳು’ ದಾಖಲಾರ್ಹವಾಗಿವೆ.