AI: ಎ ಐ ಹೊರಟಿದೆ ಎಲ್ಲಿಗೆ ?
ವಿದೇಶಗಳಲ್ಲಿ ಇದರ ಇಂಗ್ಲೀಷ್ ವರ್ಷನ್ ಕೇಳಿದವರಿಗೆ ಮೋದಿಯವರು ಸೊಗಸಾದ ಇಂಗ್ಲಿಷ್ ನಲ್ಲಿ ಮಾತನಾಡುತ್ತಿರುವುದು ಕಂಡುಬಂತು. ಈ ರೀತಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವುದು ಹೊಸತಲ್ಲ. ಆದರೆ ಈ ಪಾಡ್ ಕ್ಯಾಸ್ಟ್ ನಲ್ಲಿ ಉಪಯೋಗಿಸಿದ ಕೃತಕ ಬುದ್ಧಿ ಮತ್ತೆ ಆಧರಿಸಿದ ತಂತ್ರಜ್ಞಾನ ಮೇಲ್ಮಟ್ಟದ್ದಾಗಿತ್ತು.


ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಸಂಶೋ ಧನೆಗಳು ನಡೆಯುತ್ತಿವೆ. ಈ ಎಲ್ಲಾ ಸಂಶೋಧನೆಗಳ ಫಲ ಹೇಗೆ ಜನಸಾಮಾನ್ಯರನ್ನು ಮುಟ್ಟುತ್ತಿದೆ ಎನ್ನಲು ಈ ಪಾಡ್‌ಕಾಸ್ಟ್ ಒಂದು ಉತ್ತಮ ಸಾಕ್ಷಿಯಾಗಿದೆ.
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಅಮೆರಿಕಾದ ಪಾಡ್ ಕ್ಯಾಸ್ಟರ್ ಲೆಕ್ಸ್ ಫಿಡ್ಮನ್ ಅವರೊಂದಿಗೆ ಮಾತನಾಡಿದರು; ಫೀಡ್ ಮನ್ ಅವರು ಇಂಗ್ಲೀಷ್ ನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋದಿಯವರು ಹಿಂದಿಯಲ್ಲಿ ಉತ್ತರಿಸುತ್ತಿದ್ದರು!ಆದರೆ ಭಾರತದಲ್ಲಿ ಈ ಪಾಡ್ ಕ್ಯಾಸ್ಟ್ ಅನ್ನು ವೀಕ್ಷಿಸಿದ ಜನರಿಗೆ ಫೀಡ್ಮನ್ ಸೊಗಸಾದ ಹಿಂದಿಯಲ್ಲಿ ಪ್ರಶ್ನೆ ಕೇಳುವುದು ಕಾಣಿಸಿತು! ವಿದೇಶಗಳಲ್ಲಿ ಇದರ ಇಂಗ್ಲೀಷ್ ವರ್ಷನ್ ಕೇಳಿದವರಿಗೆ ಮೋದಿಯವರು ಸೊಗಸಾದ ಇಂಗ್ಲಿಷ್ ನಲ್ಲಿ ಮಾತನಾಡುತ್ತಿರುವುದು ಕಂಡುಬಂತು. ಈ ರೀತಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವುದು ಹೊಸತಲ್ಲ. ಆದರೆ ಈ ಪಾಡ್ ಕ್ಯಾಸ್ಟ್ ನಲ್ಲಿ ಉಪಯೋಗಿಸಿದ ಕೃತಕ ಬುದ್ಧಿ ಮತ್ತೆ ಆಧರಿಸಿದ ತಂತ್ರಜ್ಞಾನ ಮೇಲ್ಮಟ್ಟದ್ದಾಗಿತ್ತು.
ಇಲ್ಲಿ ಮೋದಿಯವರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದನ್ನು ಕೇಳಿದಾಗ ಸ್ವತಃ ಮೋದಿ ಯವರೇ ಇದನ್ನು ಮಾತನಾಡುತ್ತಿರುವಂತೆ ಅನ್ನಿಸಿತು. ಇದು ಕೇವಲ ಭಾಷಾಂತರ ಆಗಿರಲಿಲ್ಲ. ಮೋದಿಯವರ ಮೂಲ ಹಿಂದಿ ಭಾಷೆಯ “ಭಾವ" ಇಲ್ಲಿ ಕೇಳುಗರು ಅನುಭವಿಸಬಹುದಾಗಿತ್ತು. ಧ್ವನಿಯ ಏರಿಳಿತ ಮತ್ತು ಆಗಾಗ್ಗೆ ಮೋದಿಯವರು ಸ್ವಲ್ಪ ನಿಲ್ಲಿಸುತ್ತಿದ್ದು ಕೂಡ ಯಥಾವತ್ತಾಗಿ ಇಂಗ್ಲಿಷ್ ನಲ್ಲಿ ಕಂಡುಬಂತು.
ಇದನ್ನೂ ಓದಿ: Air India: ವಿಮಾನದಲ್ಲಿ ಪ್ರಯಾಣಿಕನ ನಿಗೂಢ ಸಾವು, ಪಕ್ಕದಲ್ಲಿ ಕುಳಿತವರಿಗೂ ಗೊತ್ತಾಗಲಿಲ್ಲ! ಏನಿದು ಘಟನೆ?
ಇದಕ್ಕಾಗಿ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನ್ಯೂಯಾರ್ಕ್‌ನ “ಇಲವೆನ್ ಲ್ಯಾಬ್ಸ್" ಎಂಬ ಸಂಸ್ಥೆಯ ಸಹಾಯ ಪಡೆಯಲಾಗಿತ್ತು. ಜಗತ್ತಿನಾದ್ಯಂತ 11 ಪ್ರಮುಖ ಭಾಷೆ ಗಳಲ್ಲಿ ಈ ಪಾಡ್ ಕ್ಯಾಸ್ಟ್ ಪ್ರಸಾರ ಆಯಿತು. ಈ ಪಾಡ್ ಕ್ಯಾಸ್ಟ್ ಅನ್ನು ಸ್ವತಹ ಡೊನಾಲ್ಡ್ ಟ್ರಂಪ್ ತಾವೇ ಇತ್ತೀಚಿಗೆ ಪ್ರಾರಂಭಿಸಿರುವ “ಟ್ರುತ್" ಎಂಬ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರಂಗೆ ಅಪ್ಲೋಡ್ ಮಾಡಿದ್ದಾರೆ!
ಸಂದರ್ಶನದಲ್ಲಿ ಮೋದಿಯವರು ಚೀನಾದ ಬಗ್ಗೆ ಆಡಿರುವ ಒಂದೆರಡು ಒಳ್ಳೆಯ ಮಾತಿನಿಂದಾಗಿ ಚೀನಾದಲ್ಲೂ ಈ ಪಾಡ್ ಕ್ಯಾಸ್ಟ್ ಜನಪ್ರಿಯವಾಗಿದೆ. ಈಗಾಗಲೇ ಇಂತಹ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಳಸುತ್ತಿವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿರುವ ಇಂಡಿಯಾ ಟಿವಿ ಅವರ “ಆಪ್ ಕಾ ಅದಾಲತ್" ಎಂಬ ಕಾರ್ಯ ಕ್ರಮವು ಈಗ ಡಬ್ ಆಗಿ ಕನ್ನಡ, ತೆಲುಗು ಮುಂತಾದ ಭಾಷೆಗಳಲ್ಲೂ ಪ್ರಸಾರ ಆಗುತ್ತಿದೆ. ಒಂದೆರಡು ತಿಂಗಳ ಹಿಂದೆ ರಿಪಬ್ಲಿಕ್ ಟಿವಿ ಯ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿಯವರು ಕೃತಕ ಬುದ್ಧಿಮತ್ತೆಯ ಈ ತಂತ್ರಜ್ಞಾನ ಉಪಯೋಗಿಸಿ ಇತರ ಭಾರತೀಯ ಭಾಷಿಕರನ್ನು ತಲುಪುವಂತೆ ಅವರಿಗೆ ಸಲಹೆ ನೀಡಿದ್ದರು.
ಕಳೆದ ಡಿಸೆಂಬರ್ ನಲ್ಲಿ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದ ಯೂಟ್ಯೂ ಬ್ ನವರು ಕೂಡ ಈ ಡಬ್ಬಿಂಗ್ ಆಪ್ಶನ್ ಅನ್ನು ಅಳವಡಿಸಿದ್ದಾರೆ. ಅಂದರೆ ಈಗ ಕನ್ನಡ ಭಾಷೆಯ ಯೂಟ್ಯೂಬರ್ ಗಳು ತಮ್ಮ ವಿಡಿಯೋವನ್ನು ಅಪ್ಲೋಡ್ ಮಾಡುವಾಗ ಈ ಡಬ್ಬಿಂಗ್ ಆಪ್ಷನ್ ಅನ್ನು “ಎನೇಬಲ್" ಮಾಡಿದರೆ ಇನ್ನೂ ಹಲವಾರು ಭಾಷೆಯವರಿಗೆ ತಮ್ಮ ವಿಡಿಯೋ ತಲುಪಲು ಸಾಧ್ಯವಾಗುತ್ತದೆ. ಅವರ ವಿಡಿಯೋದ ವೀಕ್ಷಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ!
ಭಾಷಣಿ: ನಮ್ಮ ಕೇಂದ್ರ ಸರ್ಕಾರದವರು “ಭಾಷಣಿ" ಎಂಬ ಒಂದು ಆಪ್ ಅಭಿವೃದ್ಧಿಪಡಿಸಿದ್ದಾರೆ. ಇದು ಕೇಂದ್ರ ಸರ್ಕಾರದವರೇ ಕೃತಕ ಬುದ್ಧಿಮತ್ತೆ ಆಧರಿಸಿ ಅಭಿವೃದ್ಧಿ ಪಡಿಸಿದ್ದು, ಸುರಕ್ಷಿತ ಮತ್ತು ಉಚಿತ. ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
ಬ್ಯಾಂಕಿಗೆ ಹೋದಾಗ, ಅಲ್ಲಿ ಕನ್ನಡ ಅರ್ಥವಾಗದ ಸಿಬ್ಬಂದಿ ಇರುತ್ತಾರೆ ಎಂದು ಭಾವಿಸಿ. ಈ ಆಪ್ ಮೂಲಕ ನೀವು ಅವರೊಡನೆ ನಿರಾಯಾಸವಾಗಿ ಚಾಟ್ ಮಾಡಬಹುದು. ನೀವು ಕನ್ನಡದಲ್ಲಿ ಮಾತನಾಡಿದದನ್ನು ಅವರಿಗೆ ಹಿಂದಿಯಲ್ಲಿ ಹೇಳುವ ಈ ಆಪ್ ಅವರು ಹಿಂದಿಯಲ್ಲಿ ಮಾತನಾಡಿ ದುದನ್ನು ನಿಮಗೆ ಕನ್ನಡದಲ್ಲಿ ಹೇಳುತ್ತದೆ! ತಮಿಳುನಾಡಿಗೆ ಪ್ರವಾಸ ಹೋದಾಗ, ಅಲ್ಲಿನ ಆಟೊ ಡ್ರೈವರ್ ಜತೆ, ಈ ಆಪ್ ಬಳಸಿ ಸುಲಲಿತವಾಗಿ ಸಂಭಾಷಣೆ ಮಾಡಬಹುದು. ಕೃತಕ ಬುದ್ಧಿಮತ್ತೆಯು ಜನಸಾಮಾನ್ಯರಿಗೆ ಹೇಗೆ ಸಹಾಯ ಮಾಡಬಲ್ಲದು ಎಂಬುದಕ್ಕೆ ಇದು ಒಂದು ಪುಟ್ಟ ಉದಾಹರಣೆ.