ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಚಿಂತಾಮಣಿ ಬಂದ್ ಯಶಸ್ವಿ: ದಲಿತ ಮುಖಂಡರನ್ನು ಬಂಧಿಸಿ ಬಿಡುಗಡೆಗೊಳಿಸಿದ ಪೊಲೀಸರು

ನಗರದ ವಿವಾದಿತ ಸರ್ಕಾರಿ ಬಾಲಕರ ಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದ,ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋ ರಾತ್ರಿ ತಾಲೂಕು ಆಡಳಿತ ತೆರವು ಗೊಳಿಸಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ನಡೆ ವಿರುದ್ಧ ದಲಿತಪರ ಸಂಘಟ ನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಚಿಂತಾಮಣಿ ಬಂದ್ ಗೆ ಕರೆ ನೀಡಿದರು

ನಗರದಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್

Profile Ashok Nayak May 23, 2025 10:37 AM

ರಸ್ತೆ ತಡೆದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಲಿತ ಸಂಘಟನೆಗಳ ಪದಾಧಿಕಾರಿಗಳು

ಚಿಂತಾಮಣಿ : ನಗರದ ವಿವಾದಿತ ಸರ್ಕಾರಿ ಬಾಲಕರ ಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದ,ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋ ರಾತ್ರಿ ತಾಲೂಕು ಆಡಳಿತ ತೆರವು ಗೊಳಿಸಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ನಡೆ ವಿರುದ್ಧ ದಲಿತಪರ ಸಂಘಟ ನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಚಿಂತಾಮಣಿ ಬಂದ್ ಗೆ ಕರೆ ನೀಡಿದರು. ಬೆಳಗ್ಗೆ ಎಂಟು ಗಂಟೆಗೆ ಚಿಂತಾಮಣಿ ನಗರದ ಜೋಡಿ ರಸ್ತೆ,ಬಾಗೇಪಲ್ಲಿ ರಸ್ತೆ, ಬೆಂಗಳೂರು ರಸ್ತೆ, ಕೋಲಾರ ರಸ್ತೆ, ಸೇರಿದಂತೆ ವಿವಿಧ ಪ್ರಮುಖ ವೃತ್ತಗಳಲ್ಲಿ ಕೆಲ ಅಂಗಡಿ ಮುಗ್ಗಟ್ಟುಗಳನ್ನು ತೆಗೆದಿದ್ದು ದಲಿತ ಮುಖಂಡರುಗಳು ಹಾಗೂ ಪದಾಧಿಕಾರಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಜೈ ಭೀಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಅಂಗಡಿ ಗಳನ್ನು ಬಂದು ಮಾಡಿಸಿ ಚಿಂತಾಮಣಿ ಬಂದ್ ಗೆ ಸಹಕರಿಸಿ ಎಂದು ಹೇಳುತ್ತಿದ್ದರು.

ಇನ್ನೂ ಪೊಲೀಸರು ತಮ್ಮ ದ್ವಿಚಕ್ರ ವಾಹನಗಳಲ್ಲಿ ನಗರದ ರೌಂಡ್ಸ್ ಹೊಡೆಯುತ್ತಿದ್ದ ದಲಿತ ಮುಖಂಡರಾದ ಎಂ ವಿ ರಾಮಪ್ಪ, ಸಂತೋಷ್,ಜನಾರ್ಧನ್, ವೆಂಕಟರವಣಪ್ಪ,ನರಸಿಂಹಪ್ಪ, ರವರನ್ನು ಬಂಧಿಸಿ ಕೆಂಚರ್ಲಹಳ್ಳಿ, ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ಕರೆದೊ ಯಿದ್ದು ಮಾಹಿತಿ ದಲಿತ ಸಂಘಟನೆಗಳಿಗೆ ಸಿಕ್ಕಿದ ತಕ್ಷಣ ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಮುಂಭಾಗದ ವಿನೋಬ ಕಾಲೋನಿ,ತಪ್ಪತೇಶ್ವರ ಕಾಲೋನಿ ವ್ಯಾಪ್ತಿಯಲ್ಲಿ ಬರುವ ಮುಖ್ಯ ರಸ್ತೆಯಲ್ಲಿ ಪೊಲೀಸರ ಜೀಪಿಗೆ ಅಡ್ಡ ಕೂತು ಸಚಿವರ ಹಾಗೂ ಪೋಲೀಸರ ವಿರುದ್ಧ ಧಿಕ್ಕಾರ ಗಳನ್ನು ಕೂಗುತ್ತಾ ಬಂಧಿಸುವವರನ್ನು ಬಿಡುಗಡೆಗೊಳಿಸುವವರೆಗೂ ರಸ್ತೆಯಿಂದ ಹಿಂಜರಿಯು ವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.    

ಇದನ್ನೂ ಓದಿ: Chikkaballapur News: 31 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ರವರಿಂದ ಭೂಮಿ ಪೂಜೆ

ಅಡಿಷನಲ್ ಎಸ್ ಪಿ ಜಗನ್ನಾಥ್ ರೈ, ಡಿವೈಎಸ್ಪಿ ಮುರುಳಿಧರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆ ಕ್ಟರ್ ಹಾಗೂ ಜಿಲ್ಲೆಯ ವಿವಿಧ ಠಾಣೆಯ ಇನ್ಸ್ಪೆಕ್ಟರ್ ಗಳು ರಸ್ತೆ ತಡೆದು ಪ್ರತಿಭಟನೆ ಮಾಡದಂತೆ ಹೇಳಿದರು ಕ್ಯಾರೆ ಎನ್ನದ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಸಚಿವರ ವಿರುದ್ಧ ದಿಕ್ಕಾರ ಗಳನ್ನು ಕೂಗುತ್ತಾ ಪ್ರತಿಭಟಿಸಿದರು.

ಸುಮಾರು 2 ಗಂಟೆಗಳ ಕಾಲ ಪ್ರತಿಭಟಿಸಿದ ನಂತರ ಬಂದಿಸಿದ್ದ ದಲಿತ ಮುಖಂಡರನ್ನು ಬಿಡುಗಡೆ ಗೊಳಿಸಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.

ನಗರದಲ್ಲಿ ಎಂದಿನಂತೆ ವಾಹನಗಳು ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದವು.ಆದರೆ ನಗರದಲ್ಲಿ ಹಲವು ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡುವುದರ ಮೂಲಕ ಚಿಂತಾ ಮಣಿ ಬಂದ್ ಗೆ ಸಹಕರಿಸಿದರು.

ದಲಿತ ಮುಖಂಡರಾದ ಕವ್ವಾಲಿ ವೆಂಕಟರವಣಪ್ಪ,ವಕೀಲರಾದ ಗೋಪಿ,ಜನಾ ರವರು ಮಾತನಾಡಿ ಸಚಿವರ ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ರಾತೋರಾತ್ರಿ ಕಳ್ಳರಂತೆ ಬಾಬಾಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ತೆರವುಗೊಳಿಸಿ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು.

ರಾಜ್ಯದ ಮುಖ್ಯಮಂತ್ರಿಗಳ ಬಾಯಲ್ಲಿ ಮಾತ್ರ ಅಂಬೇಡ್ಕರ್ ಎಂಬ ಪದಗಳು ಬರುತ್ತವೆ ಆದರೆ ಅವರಿಗೆ ಮನಸ್ಸಿನಲ್ಲಿ ಅಂಬೇಡ್ಕರ್ ರವರ ಬಗ್ಗೆ ಯಾವುದೇ ಪ್ರೀತಿ ವಿಶ್ವಾಸವಿಲ್ಲ. ಈ ಕ್ಷೇತ್ರದ ಸಚಿವರು ಅಂಬೇಡ್ಕರ್ ವಿರೋಧಿ ಧೋರಣೆ ಮಾಡುತ್ತಿದ್ದರು ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.ಮುಂದಿನ ದಿನಗಳಲ್ಲಿ ಎಲ್ಲಾ ದಲಿತರು ಸಚಿವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದ ಅವರು ಯಾವ ಸ್ಥಳದಿಂದ ಅಂಬೇಡ್ಕರ್ ರವರ ಪ್ರತಿಮೆಯನ್ನು ತೆರವು ಮಾಡಲಾಗಿದೆ ಅದೇ ಸ್ಥಳದಲ್ಲೇ ಮತ್ತೆ ಪುನಃ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡದೆ ಇದ್ದರೆ ನಮ್ಮ ಹೋರಾಟಗಳು ರಾಜ್ಯ ಮಟ್ಟದಲ್ಲಿ ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.