ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೈದರಾಬಾದ್‌ ಪಂದ್ಯಕ್ಕೆ ನಾಯಕ ಪಾಟೀದಾರ್‌ ಫಿಟ್‌; ಕೋಚ್‌ ಆ್ಯಂಡಿ ಫ್ಲವರ್‌

ಟೂರ್ನಿಯಲ್ಲಿ ಆರ್‌ಸಿಬಿ ಪಂದ್ಯಗಳನ್ನಾಡದೆ ಸುಮಾರು 20 ದಿನಗಳು ಕಳೆದಿವೆ. ಆರ್‌ಸಿಬಿ ತನ್ನ ಕೊನೆಯ ಪಂದ್ಯವನ್ನು ಮೇ 3 ರಂದು ಆಡಿತ್ತು. ಈ ವಿರಾಮ ತಂಡದ ಪ್ರದರ್ಶನಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ ತಂಡ ಇನ್ನಷ್ಟು ಚೇತರಿಸಿಕೊಂಡಿದೆ. ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಇನ್ನು ಫಿಟ್‌ ಆಗಿದ್ದಾರೆ ಎಂದು ಆ್ಯಂಡಿ ಫ್ಲವರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ ಪಂದ್ಯಕ್ಕೆ ನಾಯಕ ಪಾಟೀದಾರ್‌ ಫಿಟ್‌; ಆ್ಯಂಡಿ ಫ್ಲವರ್‌

Profile Abhilash BC May 23, 2025 10:25 AM

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿ 2025ರ ಪ್ಲೇಅಫ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಲೀಗ್‌ ಹಂತದಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿವೆ. ಇಂದು ಸನ್‌ರೈಸರ್ಸ್‌ ಹೈದರಾಬಾದ್‌ (RCB vs SRH) ವಿರುದ್ದ ಆರ್‌ಸಿಬಿ ಕಣಕ್ಕಿಳಿಯಲಿದೆ. ತಂಡದ ನಾಯಕ ರಜತ್‌ ಪಾಟೀದಾರ್‌ (Rajat Patidar) ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೋಚ್‌ ಆ್ಯಂಡಿ ಫ್ಲವರ್‌ ಖಚಿತಪಡಿಸಿದ್ದಾರೆ.

ಮೇ 3ರಂದು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧದ ಪಂದ್ಯದ ವೇಳೆ ಪಾಟೀದಾರ್‌ ಬಲಗೈ ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಕನಿಷ್ಠ 3 ಪಂದ್ಯಗಳಿಂದ ಹೊರಬೀಳುವ ಆತಂಕದಲ್ಲಿದ್ದರು. ಆದರೆ ಐಪಿಎಲ್‌ ಸ್ಥಗಿತಗೊಂಡ ಮತ್ತು ಕೆಕೆಆರ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಅವರಿಗೆ ಚೇತರಿಸಿಕೊಳ್ಳಲು ಸಮಯ ದೊರೆಯಿತು. ಇದೀಗ ಅವರು ಸಂಪೂರ್ಣ ಫಿಟ್‌ ಆಗಿದ್ದಾರೆ.

20 ದಿನಗಳ ನಂತರ ಆರ್‌ಸಿಬಿ ಕಣಕ್ಕೆ

ಟೂರ್ನಿಯಲ್ಲಿ ಆರ್‌ಸಿಬಿ ಪಂದ್ಯಗಳನ್ನಾಡದೆ ಸುಮಾರು 20 ದಿನಗಳು ಕಳೆದಿವೆ. ಆರ್‌ಸಿಬಿ ತನ್ನ ಕೊನೆಯ ಪಂದ್ಯವನ್ನು ಮೇ 3 ರಂದು ಆಡಿತ್ತು. ಈ ವಿರಾಮ ತಂಡದ ಪ್ರದರ್ಶನಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ ತಂಡ ಇನ್ನಷ್ಟು ಚೇತರಿಸಿಕೊಂಡಿದೆ. ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಇನ್ನು ಫಿಟ್‌ ಆಗಿದ್ದು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ಮುಂದುವರೆಸಲಿದ್ದಾರೆ ಎಂದು ಆ್ಯಂಡಿ ಫ್ಲವರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2025: ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದ ಮಿಚೆಲ್‌ ಮಾರ್ಷ್‌

ಗಾಯದಿಂದಾಗಿ ಈ ಬಾರಿ ಐಪಿಎಲ್‌ನಿಂದಲೇ ಹೊರಬಿದ್ದಿರುವ ದೇವದತ್‌ ಪಡಿಕ್ಕಲ್‌ ಸ್ಥಾನಕ್ಕೆ ಆಯ್ಕೆಯಾಗಿರುವ ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್‌ ಅಗರ್ವಾಲ್‌ ಈ ಪಂದ್ಯದಲ್ಲಿ ಕಣಕಿಳಿಯುವ ಸಾಧ್ಯತೆ ಇದೆ.