Chikkaballapur News: ರೈತರ ಸಮಸ್ಯೆ ಕೇಳುವವರೇ ಇಲ್ಲ: ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಸಿಬ್ಬಂದಿ ಕೊರತೆಯ ಕಾರಣ ಕೇಳಿ ಕೇಳಿ ರೈತರು ರೋಸಿ ಹೋಗಿದ್ದಾರೆ. ಇತ್ತೀಚೆಗೆ ಭಾರಿ ಮಳೆ ಸುರಿದ ಹಿನ್ನೆಲೆ ಸರಿಯಾದ ಬೆಳೆ ಹಾನಿ ಅಂದಾಜನ್ನೇ ಮಾಡಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೊರಗುತ್ತಿಗೆ ಮೇಲಿರುವ ನೌಕರರು ಸೇರಿದಂತೆ ಇಲಾಖೆ ನೌಕರರು ಸರಿಯಾಗಿ ಸ್ಪಂದಿಸುತ್ತಿಲ್ಲ. ಬಿತ್ತನೆ, ರಸಗೊಬ್ಬರ, ಬೆಳೆ ನಿರ್ವಹಣೆ ಹೀಗೆ ಹಲವು ವಿಷಯಗಳಲ್ಲಿ ರೈತರಿಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ


ಬಾಗೇಪಲ್ಲಿ: ಬಿತ್ತನೆ, ವಿಮೆ, ಬೆಳೆ ಪರಿಹಾರ, ರಸಗೊಬ್ಬರ, ವಿದ್ಯಾನಿಧಿ, ಕಿಸಾನ್ ಸಮ್ಮಾನ್, ಯಂತ್ರ ಧಾರೆ ಹೀಗೆ ನಾನಾ ಯೋಜನೆಗಳು ಕೃಷಿ ಇಲಾಖೆಯಲ್ಲಿ ರೂಪುಗೊಂಡಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಬೇಕಾದ ಸಿಬ್ಬಂದಿಯೇ ಕೃಷಿ ಇಲಾಖೆ ಕಚೇರಿಗಳಲ್ಲಿ ಇಲ್ಲ. ಹೀಗಾಗಿ ಸರಕಾರ ಯೋಜನೆಗಳನ್ನು ರೂಪಿಸಿದರೂ ಅವು ರೈತರಿಗೆ ತಲುಪುತ್ತಿಲ್ಲ. ಸಿಬ್ಬಂದಿ ಕೊರತೆಯ ಕಾರಣ ಕೇಳಿ ಕೇಳಿ ರೈತರು ರೋಸಿ ಹೋಗಿದ್ದಾರೆ. ಇತ್ತೀಚೆಗೆ ಭಾರಿ ಮಳೆ ಸುರಿದ ಹಿನ್ನೆಲೆ ಸರಿಯಾದ ಬೆಳೆ ಹಾನಿ ಅಂದಾಜನ್ನೇ ಮಾಡಿಲ್ಲ. ಇದರಿಂದ ಸಾಕಷ್ಟು ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೊರಗುತ್ತಿಗೆ ಮೇಲಿರುವ ನೌಕರರು ಸೇರಿದಂತೆ ಇಲಾಖೆ ನೌಕರರು ಸರಿಯಾಗಿ ಸ್ಪಂದಿಸು ತ್ತಿಲ್ಲ. ಬಿತ್ತನೆ, ರಸಗೊಬ್ಬರ, ಬೆಳೆ ನಿರ್ವಹಣೆ ಹೀಗೆ ಹಲವು ವಿಷಯಗಳಲ್ಲಿ ರೈತರಿಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ.
ಖಾಲಿ ಇರುವ ಕೃಷಿ ಅಧಿಕಾರಿ, ಸಿಬ್ಬಂದಿಯನ್ನು ಭರ್ತಿ ಮಾಡದಿದ್ದರೆ ಕಚೇರಿ ಮುಂದೆ ಅನಿರ್ದಿಷ್ಟ ಕಾಲ ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Chip-Based E-Passports: ಚಿಪ್ ಆಧಾರಿತ ಇ-ಪಾಸ್‌ಪೋರ್ಟ್ ಪರಿಚಯಿಸಿದ ಭಾರತ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ
ಬಾಗೇಪಲ್ಲಿ ಹಾಗೂ ಚೇಳೂರು ತಾಲ್ಲೂಕುಗಳ ಪೈಕಿ ಕಸಬಾ, ಪಾತಪಾಳ್ಯ, ಗೂಳೂರು, ಮಿಟ್ಟೇಮರಿ, ಚೇಳೂರು ಹೋಬಳಿ ಕೇಂದ್ರ ಇವೆ. ಈ ಪೈಕಿ 23 ಕೃಷಿ ಸಹಕಾರ ಕೇಂದ್ರ ಇವೆ. 39,592 ಮಂದಿ ರೈತರ ಪೈಕಿ, 6,086 ದೊಡ್ಡ ರೈತರು, 23,773 ಮಂದಿ ಸಣ್ಣ ರೈತರು ಇದ್ದಾರೆ.
160 ಬಾವಿ, 4,345 ಕೊಳವೆಬಾವಿ ಇವೆ. 18 ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 23, ಬಿತ್ತನೆ ಬೀಜ ವಿತರಕರು 19, ರಸಗೊಬ್ಬರ ಕೇಂದ್ರಗಳು 17, ಕೀಟನಾಶಕ ವಿತರಕರು 33 ಹಾಗೂ ರೈತ ಸಂಪರ್ಕ ಕೇಂದ್ರ 5 ಹಾಗೂ ಮಳೆ ಮಾಪನ ಕೇಂದ್ರ 5 ಇವೆ.
ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಮಂಜೂರಾದ 32 ಹುದ್ದೆಗಳ ಪೈಕಿ 4 ಭರ್ತಿಯಾಗಿದ್ದು, ಉಳಿದಂತೆ 28 ಹುದ್ದೆ ಖಾಲಿ ಇವೆ. ತಾಲ್ಲೂಕು ಸಹಾಯಕ ಕೃಷಿ ನಿದೇರ್ಶಕ, ತಾಂತ್ರಿಕ ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಬೆರಳಚ್ಚುಗಾರರು ಒಬ್ಬರ ಪೈಕಿ ಕೇವಲ 4 ಮಂದಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಖಾಲಿ ಹುದ್ದೆಗಳ ವಿವರ: ಕೃಷಿ ಇಲಾಖೆ ಕಚೇರಿಯಲ್ಲಿ ತಾಂತ್ರಿಕ ಅಧಿಕಾರಿ 1, ಅಧೀಕ್ಷಕ 1, ಪ್ರಥಮ ದರ್ಜೆ ಸಹಾಯಕ 1, ದ್ವಿತೀಯ ದರ್ಜೆ ಸಹಾಯಕ 1, ವಾಹನ ಚಾಲಕ 1, ಬೆರಳಚ್ಚುಗಾರ 1 ಹಾಗೂ ಡಿ.ಗುಂಪು 3 ಖಾಲಿ ಹುದ್ದೆ ಇವೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿ ಹುದ್ದೆ: ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 2 ಹುದ್ದೆ, ಪಾತಪಾಳ್ಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 2 ಹುದ್ದೆ, ಗೂಳೂರಿನಲ್ಲಿ ಕೃಷಿ ಅಧಿಕಾರಿ 2, ಸಹಾಯಕ ಕೃಷಿ ಅಧಿಕಾರಿ 3, ಮಿಟ್ಟೇಮರಿಯಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 2 ಹಾಗೂ ಚೇಳೂರು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ 1, ಸಹಾಯಕ ಕೃಷಿ ಅಧಿಕಾರಿ 3 ಹುದ್ದೆ ಖಾಲಿ ಇವೆ.
ಸರ್ಕಾರ ಕೃಷಿ ಇಲಾಖೆಗೆ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವಾದರೆ ಕೃಷಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
*
ರೈತ ಈ ಹಿಂದೆ ಬಿತ್ತನೆ ಬೀಜ ಪಡೆಯಲು ಸೊಸೈಟಿಗಳ ಮುಂದೆ ಗಂಟೆಗಟ್ಟಲೆ ಊಟ ತಿಂಡಿ ಇಲ್ಲದೇ ಪರದಾಡಿದ್ದೇವೆ. ಈ ಬಾರಿ ಅಗತ್ಯ ಇರುವಷ್ಟು ಬಿತ್ತನೆಬೀಜ ರೈತರಿಗೆ ವಿತರಿಸಬೇಕು.. -ಡಿ.ಟಿ.ಮುನಿಸ್ವಾಮಿ ಪ್ರಾಂತ ರೈತ ಸಂಘದ ಸಂಚಾಲಕ