Tumkur News: ಉಸಿರಾಟದ ತೊಂದರೆ: ನವಜಾತ ಮಗುವಿಗೆ ಯಶಸ್ವಿ ಚಿಕಿತ್ಸೆ
ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾಕ್ಟರ್ ನವೀನ್ ಕುಮಾರ್ ಎಸ್.ಆರ್. ಅತಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು, ಕಳೆದ 26 ದಿನಗಳಿಂದ ಈ ಮಗುವಿಗೆ ಚಿಕಿತ್ಸೆ ನೀಡಿರುವುದು ನಮ್ಮ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಡಿ ಎಂ ಗೌಡ ತಿಳಿಸಿದರು


ಶಿರಾ: ಶಿರಾ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಧಿ ಪೂರ್ವ ಹೆರಿಗೆಯಿಂದ ಜನಿಸಿದ ನವಜಾತ ಮಗುವಿನ ತೂಕ ಒಂದು ಕೆಜಿ ಇರುವುದರ ಜೊತೆಗೆ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಈ ಮಗುವನ್ನು ನಮ್ಮ ಆಸ್ಪತ್ರೆಯ ಎಸ್. ಎನ್. ಸಿ. ಯು ಘಟಕಕ್ಕೆ ದಾಖಲಿಸಿಸಿ- ಪ್ಯಾಪ್ ಸಹಾಯದೊಂದಿಗೆ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದ ನಂತರ ಮಗು 400 ಗ್ರಾಂ ತೂಕ ಹೆಚ್ಚಾಗಿ ಆರೋಗ್ಯದಿಂದಿದೆ. ಸಾಮಾನ್ಯವಾಗಿ ಒಂದು ಕೆಜಿ 500 ಗ್ರಾಂ ಗಿಂತಲೂ ಕಡಿಮೆ ತೂಕವಿರುವ ಮಗುವನ್ನು ಅತ್ಯುನ್ನತ ಸೌಲಭ್ಯ ಇರುವ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ನಮ್ಮ ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾಕ್ಟರ್ ನವೀನ್ ಕುಮಾರ್ ಎಸ್.ಆರ್. ಅತಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು, ಕಳೆದ 26 ದಿನಗಳಿಂದ ಈ ಮಗುವಿಗೆ ಚಿಕಿತ್ಸೆ ನೀಡಿರುವುದು ನಮ್ಮ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಇತಿಹಾಸ ಸೃಷ್ಟಿಸಿದೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಡಿ ಎಂ ಗೌಡ ತಿಳಿಸಿದರು.
ಇದನ್ನೂ ಓದಿ: Tumkur News: ಭಾಷೆಯ ಹೆಸರಿನಲ್ಲಿ ಸಾಮರಸ್ಯ ಮೂಡಿಸಬೇಕು: ಎಸ್.ರಾಜೇಂದ್ರ ಕುಮಾರ್
ಡಾಕ್ಟರ್ ನವೀನ್ ಕುಮಾರ್ ಎಸ್ಆರ್ ಮಾತನಾಡಿ ಈ ಸಾಧನೆಗೆ ನಮ್ಮ ಹಿರಿಯ ವೈದ್ಯರಾದ ಡಾ. ಡಿ ಎಂ ಗೌಡ, ಡಾಕ್ಟರ್ ಭಾರತಿ ಅವರುಗಳ ಮಾರ್ಗದರ್ಶನ ಹಾಗೂ ನಮ್ಮ ಆಸ್ಪತ್ರೆಯ ಸುಶ್ರೂಶಾ ಧಿಕಾರಿಗಳಾದ ಭಾಗ್ಯಲಕ್ಷ್ಮಿ, ಪವಿತ್ರ ಬಾಯಿ, ಶ್ವೇತಾ, ವೀಣಾ, ರಂಜಿತ ಈ, ಆಪ್ತ , ಕಾವ್ಯ ಪ್ರಿಯಾಂಕ ರಂಜಿತ ಎ ವೀಣಾಶ್ರೀ,ಛಾಯಾ, ಆಪ್ತಸಮಾಲೋಚಕರಾದ ಶಾರದ ಇವರುಗಳು ಕ್ರಿಯಾತ್ಮಕ ಚಿಕಿತ್ಸೆಯಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.

ಮಗುವಿನ ತಾಯಿ ರುಬಿಯಾ ಬಾನು ಮಾತನಾಡಿ ಒಂದು ಕೆಜಿ ತೂಕವಿರುವ ನನ್ನ ಹೆಣ್ಣು ಮಗು ವನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಚಿಕಿತ್ಸೆ ನೀಡುವುದರ ಮೂಲಕ ಬದುಕಿಸಿದ್ದಾರೆ. ನಾವು ಬಡವರಾಗಿದ್ದ ಕಾರಣ ಲಕ್ಷಾಂತರ ರೂಪಾಯಿ ಗಳನ್ನು ಖರ್ಚು ಮಾಡಿ ಚಿಕಿತ್ಸೆ ಕೊಡಿಸುವ ಚೈತನ್ಯ ನಮಗಿರಲಿಲ್ಲ ಎಂದು ತಿಳಿಸಿದರು.