ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಪೊಲೀಸ್‌ ಚೌಕಿ ಪಾತ್ರ

1874ರಲ್ಲಿ ಟೋಕಿಯೋದಲ್ಲಿ ಮೊದಲ ‘ಗಸ್ತು ಪೋಸ್ಟ್’ ಸ್ಥಾಪಿತವಾಯಿತು. ಇವು ಆರಂಭದಲ್ಲಿ ಕೇವಲ ಚೌಕಿಗಳಂತಿದ್ದರೂ, ಕ್ರಮೇಣ ಇವು ಪೊಲೀಸ್ ಅಧಿಕಾರಿ ಮತ್ತು ಸಾರ್ವಜನಿಕರ ನಡುವಣ ಸಂಪರ್ಕ ಬಿಂದುವಾಗಿ ಬೆಳೆದವು. 1918ರ ವೇಳೆಗೆ ಈ ಗಸ್ತು ಚೌಕಿಗಳು ಕೊಬಾನ್ ಎಂಬ ಹೆಸರನ್ನು ಪಡೆದವು. 20ನೇ ಶತಮಾನದಲ್ಲಿ ನಗರೀಕರಣ ಹೆಚ್ಚಾದಂತೆ, ಕೊಬಾನ್‌ಗಳ ಸಂಖ್ಯೆ ಕೂಡಾ ಹೆಚ್ಚುತ್ತಾ ಬಂದಿತು

ಪೊಲೀಸ್‌ ಚೌಕಿ ಪಾತ್ರ

ಸಂಪಾದಕರ ಸದ್ಯಶೋಧನೆ

ಜಪಾನಿನಲ್ಲಿ ಓಡಾಡುವಾಗ ಸಣ್ಣ ಸಣ್ಣ ಪೊಲೀಸ್ ಚೌಕಿಗಳು ಕಾಣಸಿಗುತ್ತವೆ. ಇವಕ್ಕೆ ಅವರು ‘ಕೊಬಾನ್’ (KMban) ಎಂದು ಕರೆಯುತ್ತಾರೆ. ಕೊಬಾನ್‌ಗಳನ್ನು ನಗರ ಮತ್ತು ಗ್ರಾಮಾಂತರ ಎರಡೂ ಭಾಗಗಳಲ್ಲಿ ನೋಡಬಹುದು. ಇವು ಜಪಾನಿನ ಕಾನೂನು ಮತ್ತು ಸುವ್ಯವಸ್ಥಿತ ಸಮಾಜ ವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೊಬಾನ್ ಅಂದರೆ ಗಸ್ತುಕೇಂದ್ರ ಎಂದರ್ಥ. ಸರಳವಾಗಿ ಹೇಳಬೇಕೆಂದರೆ, ಕೊಬಾನ್ ಎನ್ನುವುದು ಸ್ಥಳೀಯ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಸಣ್ಣ ಪೊಲೀಸ್ ಠಾಣೆ. ಸಾರ್ವಜನಿಕರ ಸಹಾಯಕ್ಕೆ ಸಿದ್ಧವಿರುವ ಪೊಲೀಸ್ ಅಧಿಕಾರಿ ಅಥವಾ ಅಧಿಕಾರಿ ತಂಡವೊಂದನ್ನು ಒಳಗೊಂಡಿರುವ ಒಂದು ವ್ಯವಸ್ಥೆ. ಕೊಬಾನ್‌ಗಳ ಆಧುನಿಕ ರೂಪವು ಮೆಜಿ ಯುಗದಲ್ಲಿ (1868-1912) ಆರಂಭವಾಯಿತು.

1874ರಲ್ಲಿ ಟೋಕಿಯೋದಲ್ಲಿ ಮೊದಲ ‘ಗಸ್ತು ಪೋಸ್ಟ್’ ಸ್ಥಾಪಿತವಾಯಿತು. ಇವು ಆರಂಭದಲ್ಲಿ ಕೇವಲ ಚೌಕಿಗಳಂತಿದ್ದರೂ, ಕ್ರಮೇಣ ಇವು ಪೊಲೀಸ್ ಅಧಿಕಾರಿ ಮತ್ತು ಸಾರ್ವಜನಿಕರ ನಡುವಣ ಸಂಪರ್ಕ ಬಿಂದುವಾಗಿ ಬೆಳೆದವು. 1918ರ ವೇಳೆಗೆ ಈ ಗಸ್ತು ಚೌಕಿಗಳು ಕೊಬಾನ್ ಎಂಬ ಹೆಸರನ್ನು ಪಡೆದವು. 20ನೇ ಶತಮಾನದಲ್ಲಿ ನಗರೀಕರಣ ಹೆಚ್ಚಾದಂತೆ, ಕೊಬಾನ್‌ಗಳ ಸಂಖ್ಯೆ ಕೂಡಾ ಹೆಚ್ಚುತ್ತಾ ಬಂದಿತು. ಕೊಬಾನ್ ಎರಡು ಅಥವಾ ಮೂರು ಕೊಠಡಿಗಳಿರುವ, ಸರಳ ವಿನ್ಯಾಸದ ಚೌಕಿ. ಕೆಲವೊಮ್ಮೆ ಎರಡೂ ಮಹಡಿಗಳಿದ್ದರೂ ಇವು ಬಹುಮಟ್ಟಿಗೆ ಪುಟಾಣಿಯಾಗಿಯೇ ಇರುತ್ತವೆ.

ಇದನ್ನೂ ಓದಿ: Singer Prithvi Bhat: ಮಗಳನ್ನು ವಶೀಕರಣ ಮಾಡಿ ಮದ್ವೆ ಮಾಡಿಸಿದ್ದಾರೆ... ಗಾಯಕಿ ಪೃಥ್ವಿ ಭಟ್‌ ತಂದೆ ಆಡಿಯೊ ವೈರಲ್‌

ಬಹುತೇಕ ಕೊಬಾನ್‌ಗಳಲ್ಲಿ ಹಗಲಿರುಳೂ ಪೊಲೀಸ್ ಅಧಿಕಾರಿ ಅಥವಾ ಕೆಲವು ಸಿಬ್ಬಂದಿ ಇರುತ್ತಾರೆ. ಒಂದೇ ಪೊಲೀಸ್ ಠಾಣೆಯಲ್ಲಿ ಹತ್ತಾರು ಪೊಲೀಸ್ ಸಿಬ್ಬಂದಿ ಇರುವ ಬದಲು, ಐದಾರು ಕೊಬಾನ್‌ಗಳನ್ನು ಸೇರಿಸಿ ಹತ್ತಾರು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಸಾಧಾರಣ ಕೊಬಾನ್‌ನೊಳಗೆ ಪೊಲೀಸ್ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ, ದೂರು ದಾಖಲಿಸುವ ವಿಭಾಗ, ಸೈಕಲ್ ಅಥವಾ ಗಸ್ತು ವಾಹನ ಸ್ಟ್ಯಾಂಡ್, ಜಿಪಿಎಸ್ ನಕ್ಷೆ, ಸ್ಥಳೀಯ ಮಾರ್ಗಸೂಚಿ ಸೌಲಭ್ಯಗಳಿರುತ್ತವೆ.

ಕೊಬಾನ್‌ನಲ್ಲಿರುವ ಪೊಲೀಸ್ ಅಧಿಕಾರಿಗಳು ಸಾಮಾನ್ಯವಾಗಿ ಬಹುಮುಖ ಕೆಲಸಗಳನ್ನು ನಿರ್ವಹಿಸುತ್ತಾರೆ. ಅವರು ಕೇವಲ ಅಪರಾಧ ನಿಯಂತ್ರಣಕ್ಕಾಗಿ ಮಾತ್ರ ಅಲ್ಲ, ನಾಗರಿಕ ಸೇವೆ ಗಳಿಗಾಗಿ ಸಹ ಲಭ್ಯ. ಅಧಿಕಾರಿಗಳು ನಿಯತವಾಗಿ ಕಾಲ್ನಡಿಗೆಯಲ್ಲಿ ಅಥವಾ ಸೈಕಲ್‌ನಲ್ಲಿ ಗಸ್ತು ಹಾಕುತ್ತಾರೆ. ಈ ಮೂಲಕ ಸ್ಥಳೀಯ ಜನರೊಂದಿಗೆ ಸಂಬಂಧ ಬೆಳೆಸುತ್ತಾರೆ ಮತ್ತು ಸಂಶಯಾಸ್ಪದ ಚಟುವಟಿಕೆಗಳನ್ನು ಗಮನಿಸುತ್ತಾರೆ.

ಕೊಬಾನ್ ಅಧಿಕಾರಿಗಳು ದಿನಕ್ಕೆ ಅನೇಕ ಬಾರಿ ದಾರಿ ಕೇಳುವವರಿಗೆ ಸಹಾಯ ಮಾಡುತ್ತಾರೆ. ಅವರು ಸ್ಥಳೀಯ ನಕ್ಷೆಗಳು, ಸಾರ್ವಜನಿಕ ಸಾರಿಗೆ ವಿವರಗಳನ್ನು ತಿಳಿಸುತ್ತಾರೆ. ತೊಂದರೆಗೊಳಗಾದ ಪ್ರವಾಸಿಗರಿಗೂ ಸಹಾಯ ಮಾಡುತ್ತಾರೆ. ಕಾಣೆಯಾದ ವಸ್ತುಗಳು ಅಥವಾ ಸೈಕಲ, ಮೊಬೈಲ, ದಾಖಲೆಪತ್ರಗಳನ್ನು ಕೊಬಾನ್‌ಗೆ ಒಪ್ಪಿಸಲಾಗುತ್ತವೆ. ಅಧಿಕೃತ ಪ್ರಕ್ರಿಯೆಯ ಮೂಲಕ ಈ ವಸ್ತು ಗಳನ್ನು ಹಿಂಪಡೆಯಲು ಸಹಾಯ ಮಾಡುತ್ತಾರೆ. ಸಣ್ಣ ಮಟ್ಟದ ಅಪಘಾತ, ತಕರಾರು ಅಥವಾ ತಪ್ಪಿತಸ್ಥರ ವರದಿಯನ್ನು ಕೂಡ ಕೊಬಾನ್‌ನಲ್ಲಿ ಮಾಡಬಹುದು.

ತುರ್ತು ಪರಿಸ್ಥಿತಿಗಳಲ್ಲಿ ಅವರು ತಕ್ಷಣದ ಕ್ರಮ ಕೈಗೊಳ್ಳುತ್ತಾರೆ. ಅಧಿಕಾರಿಗಳು ಸ್ಥಳೀಯ ನಿವಾಸಿಗಳ ಮನೆಗಳಿಗೆ ಕಾಲಕಾಲಕ್ಕೆ ಭೇಟಿ ನೀಡುತ್ತಾರೆ. ಈ ಮೂಲಕ ಅವರು ಪಾರಿವಾರಿಕ ಪರಿಸ್ಥಿತಿ, ಹಿರಿಯ ನಾಗರಿಕರು, ಮಕ್ಕಳ ಸುರಕ್ಷತೆ ಮೊದಲಾದ ವಿಚಾರಗಳನ್ನು ಅರಿತುಕೊಳ್ಳುತ್ತಾರೆ. ಕೊಬಾನ್ ವ್ಯವಸ್ಥೆಯು ಅನೇಕ ಕಾರಣಗಳಿಂದ ವಿಶಿಷ್ಟವಾಗಿದೆ. ಸಾರ್ವಜನಿಕರಿಗೆ ತ್ವರಿತ ಪ್ರತಿಕ್ರಿಯೆ ಮತ್ತು ಸಹಾಯ ಸಿಗುತ್ತದೆ.

ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಮನೆಗಳನ್ನು, ಅಲ್ಲಿನ ನಿವಾಸಿಗಳನ್ನು ಪರಿಚಯ ವಾಗಿರಿಸಿಕೊಂಡಿರುತ್ತಾರೆ. ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸದಾ ಧೈರ್ಯ,ಭರವಸೆ, ಸಹಾನು ಭೂತಿ ಮತ್ತು ಸ್ನೇಹಪೂರ್ಣ ವರ್ತನೆಯ ಅನುಭವವಾಗುತ್ತದೆ. ಕೊಬಾನ್ ಮಾದರಿ ಯನ್ನು ಅನೇಕ ದೇಶಗಳು ಅಧ್ಯಯನ ಮಾಡಿ ತಮ್ಮದೇ ಆದ ಪರಿಸ್ಥಿತಿಗೆ ಅನುಗುಣವಾಗಿ ಅನುಸರಿಸುತ್ತಿವೆ.

ಉದಾಹರಣೆಗೆ, ಸಿಂಗಾಪುರ, ಲಂಡನ್ ಮತ್ತು ಬ್ರೆಜಿಲ್‌ನಲ್ಲಿ ಸಮುದಾಯ ಪೊಲೀಸ್ ಕೇಂದ್ರಗಳು ಈಗಾಗಲೇ ತಲೆಯೆತ್ತಿವೆ. ಕೊಬಾನ್‌ಗಳು ಮಕ್ಕಳಿಗೆ ಅತ್ಯಂತ ವಿಶ್ವಾಸಾರ್ಹ ಸ್ಥಳಗಳಾಗಿವೆ. ಐದು ವರ್ಷದ ಮಗು ತಾನು ದಾರಿ ತಪ್ಪಿದರೆ, ತನ್ನ ಆಟಿಕೆ ಅಥವಾ ಬ್ಯಾಗ್ ಕಳೆದುಕೊಂಡರು ಸಹ, ಮೊದಲು ತಲುಪುವ ಸ್ಥಳವೇ ಕೊಬಾನ್. ಪೊಲೀಸರು ಆ ಮಕ್ಕಳಿಗೆ ತಾಳ್ಮೆಯಿಂದ ಪರಿಹಾರ ನೀಡುತ್ತಾರೆ, ಸಂಬಂಽಕರಿಗೆ ಸಂಪರ್ಕಿಸುತ್ತಾರೆ. ಮಹಿಳೆಯರು ಕೂಡ ತಮ್ಮ ಅಪಾಯದ ಸಮಯದಲ್ಲಿ ಮೊರೆ ಹೋಗುವುದು ಕೊಬಾನ್‌ಗೆ.