Chitrasanthe Award: ಮೇ 18ರಂದು ʼಚಿತ್ರಸಂತೆʼ ಪ್ರಶಸ್ತಿ ಪ್ರದಾನ ಸಮಾರಂಭ
Chitrasanthe Award: ʼಚಿತ್ರಸಂತೆʼ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 18 ರಂದು ಹಲಸೂರಿನ Conrad ಹೋಟೆಲ್‌ನಲ್ಲಿ ಅದ್ಧೂ ರಿಯಾಗಿ ನಡೆಯಲಿದೆ ಎಂದು ʼಚಿತ್ರಸಂತೆʼ ಪತ್ರಿಕೆ ಸಂಪಾದಕ ಗಿರೀಶ್ ಗೌಡ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್ ಹಾಗೂ ಇತರರು ಪಾಲ್ಗೊಂಡಿದ್ದರು.


ಬೆಂಗಳೂರು: ಗಿರೀಶ್ ಗೌಡ ಅವರ ನೇತೃತ್ವದ ʼಚಿತ್ರಸಂತೆʼ ಪತ್ರಿಕೆ ಚಿತ್ರರಂಗದ ಅಚ್ಚುಮೆಚ್ಚಿನ ಪತ್ರಿಕೆ. ಕಳೆದ ಹದಿಮೂರು ವರ್ಷಗಳಿಂದ ಗಿರೀಶ್ ಗೌಡ ಅವರು ʼಚಿತ್ರಸಂತೆʼ ಪ್ರಶಸ್ತಿ (Chitrasanthe Award) ಪ್ರದಾನ ಸಮಾರಂಭವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈ ವರ್ಷದ ಪ್ರಶಸ್ತಿ ಸಮಾರಂಭ ಮೇ 18 ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ʼಚಿತ್ರಸಂತೆʼ ಪತ್ರಿಕೆ ಸಂಪಾದಕ ಗಿರೀಶ್ ಗೌಡ ಮಾಹಿತಿ ನೀಡಿದ್ದಾರೆ.
ನಮ್ಮʼಚಿತ್ರಸಂತೆʼ ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೆ ಹದಿಮೂರರ ಸಡಗರ. ಚಿತ್ರರಂಗದ ಗಣ್ಯರಿಗೆ ವಿವಿಧ ಆಯಾಮಗಳಲ್ಲಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುವುದು. ಈವರೆಗೂ ಸ್ಯಾಂಡಲ್‌ವುಡ್‌ನ ಅನೇಕ ಸೂಪರ್ ಸ್ಟಾರ್‌ಗಳು ನಮ್ಮ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಸ್ವೀಕರಿಸಿ ನಮ್ಮ ಸಂಸ್ಥೆಯ ಗೌರವ ಹೆಚ್ಚಿಸಿದ್ದಾರೆ. ಅವರಿಗೆ ನಾನು ಆಬಾರಿ. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ಮೇ 18ರಂದು ಹಲಸೂರಿನ Conrad ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. Conrad ಹೋಟೆಲ್ ಅವರು ನಮ್ಮ ಜತೆಗಿದ್ದಾರೆ. ಎ.ವಿ.ಆರ್ ಸಂಸ್ಥೆ ಕೂಡ ನಮ್ಮೊಂದಿಗಿದ್ದಾರೆ. ನಟಿ ರಾಗಿಣಿ ಹಾಗೂ ನಟ ರಾಜವರ್ಧನ್ ಅವರು ಸಾಥ್ ನೀಡಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಸಹ ತಮ್ಮೆಲ್ಲರ ಪ್ರೋತ್ಸಾಹ ನಮಗಿರಲಿ ಎಂದು ಗಿರೀಶ್ ಗೌಡ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Union Bank Recruitment 2025: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ 500 ಹುದ್ದೆ; ಹೀಗೆ ಅಪ್ಲೈ ಮಾಡಿ
ನಟಿ ರಾಗಿಣಿ ದ್ವಿವೇದಿ, ನಟ ರಾಜವರ್ಧನ್ ʼಚಿತ್ರಸಂತೆʼ ಪ್ರಶಸ್ತಿ ಸಮಾರಂಭ ಯಶಸ್ವಿಯಾಗಲಿ ಎಂದು ಹಾರೈಸಿದರು. ಪತ್ರಿಕಾಗೋಷ್ಠಿಯಲ್ಲಿ ನಟ ರಾಜವರ್ಧನ್, ಉತ್ಸವ್ ಮುಂತಾದವರು ಉಪಸ್ಥಿತರಿದ್ದರು.