Deepika Padukone: ಪ್ರಭಾಸ್ ಜೊತೆ ನಟಿಸಲು ಭಾರಿ ಮೊತ್ತದ ಸಂಭಾವನೆ ಪಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ಕ್ವಿನ್ ದೀಪಿಕಾ ಪಡುಕೋಣೆ ಸದ್ಯ ತಾಯ್ತನದ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಈ ನಡುವೆ ಮತ್ತೆ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರದಲ್ಲಿ ನಟಿಸಲು ದೀಪಿಕಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಇದೀಗ ನಟಿ ದೀಪಿಕಾ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಜೊತೆಗೆ ಸ್ಪಿರಿಟ್ ಸಿನಿಮಾದಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾಕ್ಕಾಗಿ ಇವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.



ದೀಪಿಕಾ ಪಡುಕೋಣೆ 2024ರಲ್ಲಿ ಕಲ್ಕಿ 2898 ಎಡಿ ಚಿತ್ರದಲ್ಲಿ ಪ್ರಭಾಸ್ ಜೊತೆಯಲ್ಲಿ ನಟಿಸಿದ್ದರು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದ ಸಕ್ಸಸ್ ಅನ್ನು ಸಹ ತಂದುಕೊಟ್ಟಿತ್ತು. ಇದೀಗ ಮತ್ತೆ ಪ್ರಭಾಸ್ ಜೊತೆ ಸ್ಪಿರಿಟ್ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅಭಿನಯಿಸಲು ನಟಿ ದೀಪಿಕಾ ಪಡುಕೋಣೆ ಅವರಿಗೆ ದುಬಾರಿ ಮೊತ್ತದ ಸಂಭಾವನೆ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತೀಚಿನ ಒಂದು ವರದಿಯ ಪ್ರಕಾರ ನಟಿ ದೀಪಿಕಾ ಪಡುಕೋಣೆ ಸ್ಪಿರಿಟ್ ಸಿನಿಮಾದಲ್ಲಿ ಅಭಿನಯಿಸಲು ತಮ್ಮ ಪತಿ ರಣವೀರ್ ಸಿಂಗ್ಗಿಂತಲೂ ಅಧಿಕ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಂದಾಜು 20 ಕೋಟಿ ರೂಪಾಯಿ ಸಂಭಾವನೆಯನ್ನು ನಟಿ ದೀಪಿಕಾ ಪಡುಕೋಣೆ ಪಡೆಯುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಮಹಿಳಾ ನಟಿಯೊಬ್ಬರಿಗೆ ನೀಡಲಾಗುವ ದೊಡ್ಡ ಮೊತ್ತದ ಚೆಕ್ ಇವರ ಕೈ ಸೇರುತ್ತಿದೆ ಎನ್ನಲಾಗುತ್ತಿದೆ.

ಬಾಲಿವುಡ್ನಲ್ಲಿ ನಾಯಕ ನಟರಂತೆ ನಟಿಯರಿಗೂ ನೇಮ್ ಫೇಮ್ ತುಂಬಾ ಇರಲಿದೆ. ಹೀಗಾಗಿ ಸಕ್ಸಸ್ ಸಿನಿಮಾ ನೀಡಿದ್ದವರು ಕಾಲ ಕ್ರಮೇಣ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ತಾರೆ. ಅಂತೆಯೇ ನಟ ದೀಪಿಕಾ ಪಡುಕೋಣೆ ಕೂಡ ಪದ್ಮಾವತ್', ಪಿಕು, ಯೇ ಜವಾನಿ ಹೈ ದಿವಾನಿ, ಚನೈ ಎಕ್ಸ್ ಪ್ರೆಸ್ ಸೇರಿದಂತೆ ಇತರ ಹಲವು ಯಶಸ್ವಿ ಚಿತ್ರಗಳೊಂದಿಗೆ ನಿರಂತರವಾಗಿ ಯಶಸ್ಸು ಪಡೆದಿದ್ದು ಅವರ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್, ಕತ್ರಿನಾ ಕೈಫ್, ಕರಿನಾ ಕಪೂರ್ ಅವರಂತಹ ನಟಿಯರು ತಮ್ಮ ಸಿನಿಮಾ ಯಶಸ್ವಿಯಾದಂತೆ ಮುಂದಿನ ಸಿನಿಮಾದಲ್ಲಿ ನಟಿಸುವಾಗ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಅಂತೆಯೇ ನಟಿ ದೀಪಿಕಾ ಕೂಡ ತಮ್ಮ ಮಗುವಿನ ಆರೈಕೆ ಬಳಿಕ ಮತ್ತೆ ಸಿನಿ ಪಯಣ ಆರಂಭಿಸಿದ್ದು ಸುಮಾರು 20 ಕೋಟಿ ರೂಪಾಯಿಯ ದುಬಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ. ದೀಪಿಕಾ ಯಾವ ಪಾತ್ರ ಅಭಿನಯಿಸ್ತಾರೆ ಎಂಬ ಮಾಹಿತಿಯನ್ನು ಸದ್ಯ ಗೌಪ್ಯವಾಗಿ ಇಡಲಾಗಿದೆ. ಟಿ ಸೀರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು 2025 ಕೊನೆಯಲ್ಲಿ ಈ ಸಿನಿಮಾ ತೆರೆ ಕಾಣುವ ನಿರೀಕ್ಷೆ ಇದೆ.