Shine Tom Chacko: ನಟ ಶೈನ್ ಟಾಮ್ ಗೆ ಕೊನೆಯ ಎಚ್ಚರಿಕೆ ನೀಡಿದ ಕೇರಳ ಫಿಲ್ಮ್ ಫೆಡರೇಷನ್
ನಟ ಶೈನ್ ಟಾಮ್ ಚಾಕೊಗೆ(Shine Tom Chacko) ಮಾದಕವಸ್ತು ಸೇವನೆ ಮತ್ತು ಅಸಭ್ಯ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ, ಕೇರಳ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ (FEFKA) ಸಂಸ್ಥೆ ನಟನಿಗೆ ಕೊನೆಯ ಎಚ್ಚರಿಕೆ ನೀಡಿದೆ. ನಟ ಶೈನ್ ಟಾಮ್ ಚಾಕೊ ಸಿನಿಮಾ ಸೆಟ್‌ನಲ್ಲಿ ಮಾದಕವಸ್ತು ಸೇವಿಸುತ್ತಾರೆ ಹಾಗೂ ಸಹನಟಿಯ ರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ’ ಎಂದು ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದ್ದರು.


ತಿರುವನಂತಪುರಂ: ಶೈನ್ ಟಾಮ್ ಚಾಕೊ(Shine Tom Chacko) ಮಲಯಾಳಂ ಹಾಗೂ ತಮಿಳು ಚಿತ್ರರಂಗದ ಪ್ರಸಿದ್ದ ನಟ. ಖಳನಾಯಕನಾಗಿ ಹೆಚ್ಚಾಗಿ ನಟಿಸಿರುವ ಶೈನ್ ಟಾಮ್ ಮಲಯಾಳಂ ಹಾಗೂ ತಮಿಳಿನ ಸ್ಟಾರ್ ನಟ ರೊಂದಿಗೆ ನಟಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡಿರುವ ಅಜಿತ್ ಕುಮಾರ್ ನಟನೆಯ ' ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲೂ ನಟಿಸಿ ಫೇಮ್ ಗಿಟ್ಟಿಸಿಕೊಂಡಿದ್ದರು. ಈಗ ಇದೇ ನಟನ ವಿರುದ್ಧ ಡ್ರಗ್ಸ್ ಪ್ರಕರಣ ದಾಖಲಾಗಿದ್ದು ನಟನ ವಿರುದ್ದ ಮಾದಕ ವಸ್ತುಗಳ ಸೇವನೆ ಮತ್ತು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ನಟ ಶೈನ್ ಟಾಮ್ ಚಾಕೊಗೆ ಮಾದಕವಸ್ತು ಸೇವನೆ ಮತ್ತು ಅಸಭ್ಯ ವರ್ತನೆಯ ಆರೋಪದ ಹಿನ್ನೆಲೆಯಲ್ಲಿ, ಕೇರಳ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ (FEFKA) ಸಂಸ್ಥೆ ನಟನಿಗೆ ಕೊನೆಯ ಎಚ್ಚರಿಕೆ ನೀಡಿದೆ. ನಟ ಶೈನ್ ಟಾಮ್ ಚಾಕೊ ಸಿನಿಮಾ ಸೆಟ್‌ನಲ್ಲಿ ಮಾದಕವಸ್ತು ಸೇವಿಸುತ್ತಾರೆ ಹಾಗೂ ಸಹನಟಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ’ ಎಂದು ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಮಲಯಾಳಂ ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದ್ದರು. ಈ ಕುರಿತು ತನಿಖೆಗೂ ಆದೇಶಿಸಲಾಗಿತ್ತು. ಈ ನಿಟ್ಟಿನಲ್ಲಿ, ಶೈನ್ ಟಾಮ್ ಚಾಕೋ ಉಳಿದುಕೊಂಡಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅವರು ಪೊಲೀಸರ ಕೈಗೆ ಸಿಗದೇ ಪರಾರಿ ಆಗಿದ್ದರು. ಆ ಬಳಿಕ ತನಿಖೆ ನಡೆಸಿ ನಟನನ್ನು ಬಂಧಿಸಲಾಗಿತ್ತು.
ಇದೀಗ ನಟನ ಡ್ರಗ್ಸ್ ವಿಚಾರವನ್ನು ಮಲಯಾಳಂ ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಿದ್ದು ಅಂತಿಮ ಎಚ್ಚರಿಕೆ ನೀಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಫಿಲ್ಮ್ ಪ್ರಧಾನ ಕಾರ್ಯದರ್ಶಿ ಬಿ ಉಣ್ಣಿಕೃಷ್ಣನ್ ನಟನಿಗೆ ಈಗಾಗಲೇ ಕೊನೆಯ ಎಚ್ಚರಿಕೆ ನೀಡಲಾಗಿದೆ. ಅವರು ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಅವರು ಕೊನೆಯ ಬಾರಿ ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ. ಚಾಕೊಗೆ ಡ್ರಗ್ಸ್ ಸೇವನೆ ನಿಲ್ಲಿಸಲು ವೃತ್ತಿಪರ ನೆರವಿನ ಅಗತ್ಯವಿದೆ ಎಂದು ಸಂಘಟನೆಯ ಸದಸ್ಯರು ಅವರ ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: Shine Tom Chacko: ಹೋಟೆಲ್ ಕಿಟಕಿಯಿಂದ ಜಿಗಿದು ಎಸ್ಕೇಪ್ ಆಗಿದ್ದ ಮಲಯಾಳಂ ನಟ ಅರೆಸ್ಟ್- ವಿಡಿಯೋ ವೈರಲ್
ಕಲಾವಿದರ ಸಂಘ ಕರೆದಿದ್ದ ಆಂತರಿಕ ಸಭೆಯಲ್ಲಿ ಶೈನ್ ಟಾಮ್ ಚಾಕೊ, ನಟಿಗೆ ಕ್ಷಮೆ ಕೇಳಿದ್ದಾರೆ. ಮುಂದೆ ಇಂಥಹಾ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇಂತಹ ಅಭ್ಯಾಸಗಳಿಗೆ ತಿದ್ದಿಕೊಳ್ಳಲು ಅವಕಾಶ ನೀಡಬೇಕು, ಅದು ಮಾನವೀಯವಾದ ಪಥ. ಆದರೆ ಈ ಮಾನವೀಯತೆ ದುರ್ಬಲತೆ ಎಂದು ಭಾವಿಸಬಾರದು ಎಂದು ಫಿಲ್ಮ್ ಪ್ರಧಾನ ಕಾರ್ಯದರ್ಶಿ ಬಿ ಉಣ್ಣಿಕೃಷ್ಣನ್ ಹೇಳಿದ್ದಾರೆ.
ಶೈನ್ ಟಾಮ್ ಚಾಕೋ ವಿರುದ್ಧ ಮಾದಕ ವಸ್ತು ಬಳಕೆ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. 2015 ರಲ್ಲಿಯೇ ಕೊಕೇನ್ ಹೊಂದಿದ ಆರೋಪದಡಿ ಈ ಮೊದಲೇ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಚಾಕೊ ಹೆಸರು ಕೇಳಿಬಂದಿದೆ. ಶೈನ್ ಟಾಮ್ ಚಾಕೊ 15 ವರ್ಷಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯ ವಾಗಿದ್ದಾರೆ. 75ಕ್ಕೂ ಅಧಿಕ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ತೆಲುಗಿನ ದಸರಾ, ಡಾಕು ದೇವರ, ರಾಬಿನ್‌ಹುಡ್, ತಮಿಳಿನ ಗುಡ್ ಬ್ಯಾಡ್ ಅಗ್ಲಿ ಸಿನಿಮಾಗಳಲ್ಲೂ ನಟಿಸಿ ಖ್ಯಾತಿ ಗಳಿಸಿದ್ದಾರೆ.