Viral Video: ಅರಶಿನ ಶಾಸ್ತ್ರದ ವೇಳೆ ಕುಸಿದುಬಿದ್ದು ವಧು ಸಾವು; ಹೃದಯ ವಿದ್ರಾವಕ ವಿಡಿಯೊ ವೈರಲ್!
ಉತ್ತರಪ್ರದೇಶದ ಬದೌನ್‍ನಲ್ಲಿ ಅರಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ 22 ವರ್ಷದ ವಧು ಹೃದಯಾಘಾತದಿಂದ ಸಾವನಪ್ಪಿದ್ದಾಳೆ. ಇದರಿಂದ ಮದುವೆ ಮನೆ ಶೋಕದಲ್ಲಿ ಮುಳುಗಿದೆ. ಸಮಾರಂಭದ ಸಮಯದಲ್ಲಿ ವಧು ನೃತ್ಯ ಮಾಡಿದ್ದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿವೆ.


ಲಖನೌ: ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಮಗಳ ಮದುವೆ ಸಂದರ್ಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಅಪ್ಪ ಕುಸಿದು ಬಿದ್ದು ಸಾವು, ಆಟ ಆಡುತ್ತಿರುವಾಗಲೇ ಅಂಗಳದಲ್ಲಿ ಕುಸಿದು ಬಿದ್ದು ಬಾಲಕ ಸಾವು ಹೀಗೆ ಹತ್ತಾರು ಪ್ರಕರಣಗಳು ಕಿವಿ ಮೇಲೆ ಬೀಳುತ್ತಲೆ ಇರುತ್ತವೆ.ಇದೀಗ ಉತ್ತರಪ್ರದೇಶದ ಬದೌನ್‍ನಲ್ಲಿ ಅರಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ 22 ವರ್ಷದ ವಧು ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣವಾದ ಘಟನೆಯೊಂದು ನಡೆದಿದೆ.ಖುಷಿಯಿಂದ ಇರಬೇಕಾದ ಮದುವೆಮನೆ ದುಃಖದಿಂದ ಮಡುಗಟ್ಟಿದೆ. ಸಮಾರಂಭದ ಸಮಯದಲ್ಲಿ ವಧು ನೃತ್ಯ ಮಾಡಿದ್ದ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿವೆ.
ಬದೌನ್ ಜಿಲ್ಲೆಯ ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೂರ್ಪುರ್ ಪಿನೋನಿ ಗ್ರಾಮದಲ್ಲಿ ಭಾನುವಾರ (ಮೇ 04) ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅರಶಿನ ಶಾಸ್ತ್ರದ ನಂತರ ವಧು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾಳೆ. ತಕ್ಷಣ ಎಲ್ಲರೂ ಸೇರಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಆಕೆ ಹೃದಯಾಘಾಯದಿಂದ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
#बदायूं में शादी से पहले दुल्हन की मौत से खुशियां मातम में बदली,हल्दी रस्म के बाद दुल्हन की हार्ट अटैक से अचानक मौत,दुल्हन की मौत के बाद परिवार में मचा कोहराम,कल रात दुल्हन की हुई थी मौत,आज आनी थी बारात,इस्लामनगर थाना क्षेत्र के नूरपुर पिनौनी गांव का मामला,#budaun #breakingnews pic.twitter.com/ROCm0KPZXO
— SAMACHAR NEWS INDIAI BADAUN (@ajaypal99859865) May 5, 2025
ವಧುವನ್ನು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ (ಡೋಲಿ) ಕಳುಹಿಸುವ ಬದಲು, ಅವಳ ದೇಹವನ್ನು ಅವಳ ಅಂತ್ಯಕ್ರಿಯೆಯ ವಿಧಿಗಳಿಗಾಗಿ ಸಾಗಿಸಲಾಯಿತು. ಮದುವೆಯ ಕನಸು ರಾತ್ರೋರಾತ್ರಿ ದುಸ್ವಪ್ನವಾಗಿ ಮಾರ್ಪಟ್ಟಿದೆ.ವಧುವಿನ ಹಠಾತ್ ಸಾವು ಅವಳ ಕುಟುಂಬವನ್ನು ಆಘಾತಕ್ಕೀಡುಮಾಡಿದೆ. ಆಘಾತ ಮತ್ತು ದುಃಖದಿಂದ ಅವಳ ತಾಯಿ ಪ್ರಜ್ಞಾಹೀನಳಾಗಿದ್ದಾಳೆ.
ಇಂತಹ ಆಘಾತಕಾರಿ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮಧ್ಯಪ್ರದೇಶದ ಶಿಯೋಪುರ್ ನಗರದಲ್ಲಿ ರಾತ್ರಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುವಾಗ ವರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿರುವುದಾಗಿ ವರದಿಯಾಗಿತ್ತು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾವನ್ನಪ್ಪಿದ ವರನನ್ನು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ (NSUI) ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಜಾಟ್ ಎಂದು ಗುರುತಿಸಲಾಗಿದೆ. ಸ್ಥಳೀಯ ಆಸ್ಪತ್ರೆಗೆ ತಲುಪಿದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಭೀಕರ ದಾಳಿ ಮಾಡಿದ ಶ್ವಾನ; ಶಾಕಿಂಗ್ ವಿಡಿಯೊ ವೈರಲ್!
ವರದಿ ಪ್ರಕಾರ, ಮದುವೆ ಮೆರವಣಿಗೆಯ ವೇಳೆ ನಗರದ ಜಾಟ್ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ ಪ್ರದೀಪ್ ಜಾಟ್ ಕುದುರೆ ಸವಾರಿ ಮಾಡುವಾಗ ಆತ ಕುದುರೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ವರನನ್ನು ಶಿಯೋಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.