ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Puttakkana Makkalu: ಪುಟ್ಟಕ್ಕನ ಮಕ್ಕಳು ಶೂಟಿಂಗ್ ನಡೆಯುವ ಮನೆಯ ತಿಂಗಳ ಬಾಡಿಗೆ ಎಷ್ಟು ಗೊತ್ತೇ?

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಇದನ್ನು ನೀವು ಗಮನಿಸಿರಬಹುದು. ಆದರೆ, ಶೂಟಿಂಗ್ ಹಳ್ಳಿಯಲ್ಲಿ ನಡೆಯುತ್ತಿಲ್ಲ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಶೂಟಿಂಗ್ ನಡೆಯುವುದು ಬೆಂಗಳೂರಿನ ತಾತಗುಣಿ, ಕನಕಪುರ ರಸ್ತೆಯ ಭೂಮಿಕಾ ಸ್ಟುಡಿಯೋದಲ್ಲಿ.

ಪುಟ್ಟಕ್ಕನ ಮಕ್ಕಳು ಶೂಟಿಂಗ್ ನಡೆಯುವ ಮನೆಯ ತಿಂಗಳ ಬಾಡಿಗೆ ಎಷ್ಟು?

Puttakkana Makkalu

Profile Vinay Bhat May 6, 2025 4:06 PM

ಒಂದು ಕಾಲದಲ್ಲಿ ಎಲ್ಲ ಚಾನೆಲ್​ಗಳ ಧಾರಾವಾಹಿಗಳಿಗೆ ಟಕ್ಕರ್ ಕೊಟ್ಟು ಟಿಆರ್​ಪಿಯಲ್ಲಿ ನಂಬರ್ ಸ್ಥಾನದಲ್ಲಿದ್ದು ಕಿರುತೆರೆ ಲೋಕವನ್ನು ಆಳುತ್ತಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಈಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಕಥೆ ಹಳ್ಳ ಹಿಡಿದು ಎಲ್ಲೆಲ್ಲೋ ಸಾಗುತ್ತಿದೆ. ಮೊದಲು 7:30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಅದಾದ ಮೇಲೆ 6:30ಕ್ಕೆ ಬದಲಾದಾಗ ಟಿಆರ್‌ಪಿ ಪಾತಾಳ ಮುಟ್ಟಿತ್ತು. ಕಳೆದ ವಾರ ಈ ಧಾರಾವಾಹಿಗೆ ಸಿಕ್ಕ ಟಿವಿಆರ್ ಕೇವಲ 4.2. ಸೀರಿಯಲ್​ನಲ್ಲಿ ಆದ ಪಾತ್ರಗಳ ಬದಲಾವಣೆ ದೊಡ್ಡ ಹೊಡೆತ ಬಿದ್ದಿತು.

ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ. ಆದರೆ, ಈ ಧಾರಾವಾಹಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಇದನ್ನು ನೀವು ಗಮನಿಸಿರಬಹುದು. ಆದರೆ, ಶೂಟಿಂಗ್ ಹಳ್ಳಿಯಲ್ಲಿ ನಡೆಯುತ್ತಿಲ್ಲ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಶೂಟಿಂಗ್ ನಡೆಯುವುದು ಬೆಂಗಳೂರಿನ ತಾತಗುಣಿ, ಕನಕಪುರ ರಸ್ತೆಯ ಭೂಮಿಕಾ ಸ್ಟುಡಿಯೋದಲ್ಲಿ.

ಕನ್ನಡದ ಹಿರಿಯ ಕಲಾವಿದರಾದ ಲಕ್ಷ್ಮೀ ನಾರಾಯಣ್‌ ಅವರು ಭೂಮಿಕಾ ಸ್ಟುಡಿಯೋದ ಮಾಲೀಕರಾಗಿದ್ದಾರೆ. ಈ ಸ್ಟುಡಿಯೋ ಸುಮಾರು ಹದಿನೆಂಟು ವರ್ಷಗಳ ಹಳೆಯದಾಗಿದ್ದು, ಆ ಕಾಲಕ್ಕೆ ಕೇವಲ ಒಂದೂವರೆ ಲಕ್ಷ ರೂಪಾಯಿಂದ ಪುಟ್ಟಕ್ಕನ ಮಕ್ಕಳು ಶೂಟಿಂಗ್‌ ಮನೆಯನ್ನು ನಿರ್ಮಿಸಲಾಗಿದೆ. ಕನ್ನಡದ ನೂರಾರು ಧಾರಾವಾಹಿಗಳು ಮತ್ತು ಸಿನಿಮಾಗಳ ಶೂಟಿಂಗ್‌, ಆಡ್‌ ಶೂಟಿಂಗ್‌ ಕೂಡ ಇಲ್ಲಿ ನಡೆಯುತ್ತದೆ. ಆ ಕಾಲಕ್ಕೆ ಈ ಮನೆಗೆ 25 ಸಾವಿರ ರೂಪಾಯಿ ತಿಂಗಳಿಗೆ ಬಾಡಿಗೆ ಬರುತ್ತಿತ್ತು. ಈಗ ಈ ಮನೆಯ ತಿಂಗಳ ಬಾಡಿಗೆ ಒಂದು ಲಕ್ಷಕ್ಕೂ ಅಧಿಕವಾಗಿದೆ. ಈ ವಿಚಾರವನ್ನು ಸ್ಟುಡಿಯೋ ಮಾಲೀಕರು ಇತ್ತೀಚೆಗೆ ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Karna Serial: ಕರ್ಣ ಧಾರಾವಾಹಿ ಬಗ್ಗೆ ಮೊದಲ ಬಾರಿ ಮಾತನಾಡಿದ ಭವ್ಯಾ ಗೌಡ: ಏನಂದ್ರು ನೋಡಿ

ಈ ಹಿಂದೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಮ್ಮನ ಕನಸನ್ನು ನನಸು ಮಾಡಿ ಸ್ನೇಹಾ ಐಎಎಸ್‌ ಪರೀಕ್ಷೆ ಬರೆದು ಡಿಸಿ ಆಗಿದ್ದಳು. ಸ್ನೇಹಾಳ ಈ ಸಾಧನೆಗೆ ಮನೆ ಮಂದಿ ಮಾತ್ರವಲ್ಲ ಊರವರೂ ಮೆಚ್ಚಿ ಕುಣಿದಾಡಿದ್ದರು. ಆದರೆ, ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಸ್ನೇಹಾ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಹೀಗೆ ಸ್ನೇಹಾ ಪಾತ್ರ ಕಣ್ಮುಚ್ಚುತ್ತಿದ್ದಂತೆ, ಕಿರುತೆರೆ ವೀಕ್ಷಕರಿಗೆ ಈ ಸಾವಿನ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇಲ್ಲಿಂದ ಈ ಧಾರಾವಾಹಿ ಲಯಕಳೆದುಕೊಂಡು ಸಾಗುತ್ತಿದೆ.