Multibagger Stocks: ಈ 2 ಸ್ಟಾಕ್ಸ್‌ಗಳಲ್ಲಿ ತಲಾ 1 ಲಕ್ಷ ರೂ. ಹೂಡಿಕೆಗೆ 5 ವರ್ಷದಲ್ಲಿ 50 ಲಕ್ಷ ರೂ. ಲಾಭ
Stock Market: ನೀವು ಈ ಎರಡು ಕಂಪನಿಗಳ ಷೇರುಗಳಲ್ಲಿ ಒಂದು ವೇಳೆ ಕೇವಲ 5 ವರ್ಷಗಳ ಹಿಂದೆ ತಲಾ 1 ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ 50 ಲಕ್ಷ ರೂ.ಗೆ ಬೆಳೆದಿರುತ್ತಿತ್ತು. ವಾರ್ಷಿಕ 118% ದರದಲ್ಲಿ ವೃದ್ಧಿಸುತ್ತಿತ್ತು. ಕೆಲವು ಕಂಪನಿಗಳ ಷೇರುಗಳೇ ಹಾಗೆ. ಅಲ್ಪಾವಧಿಯಲ್ಲಿಯೇ ಅದ್ಭುತ ರಿಟರ್ನ್ಸ್ ಕೊಡುತ್ತವೆ. ಈ ರೀತಿಯಾಗಿ 100%ಗೂ ಹೆಚ್ಚು ರಿಟರ್ನ್ ಕೊಡುವ ಷೇರುಗಳನ್ನು ಮಲ್ಟಿ ಬ್ಯಾಗರ್ ಸ್ಟಾಕ್ಸ್‌ಎಂದು ಕರೆಯುತ್ತಾರೆ. ಕುರಿತಾದ ವಿವರ ಇಲ್ಲಿದೆ.


- ಕೇಶವ ಪ್ರಸಾದ್ ಬಿ.
ಬೆಂಗಳೂರು: ನೀವು ಈ ಎರಡು ಕಂಪನಿಗಳ ಷೇರುಗಳಲ್ಲಿ ಒಂದು ವೇಳೆ ಕೇವಲ 5 ವರ್ಷಗಳ ಹಿಂದೆ ತಲಾ 1 ಲಕ್ಷ ರೂ. ಹೂಡಿಕೆ ಮಾಡಿರುತ್ತಿದ್ದರೆ 50 ಲಕ್ಷ ರೂ.ಗೆ ಬೆಳೆದಿರುತ್ತಿತ್ತು. ವಾರ್ಷಿಕ 118% ದರದಲ್ಲಿ ವೃದ್ಧಿಸುತ್ತಿತ್ತು. ಕೆಲವು ಕಂಪನಿಗಳ ಷೇರುಗಳೇ ಹಾಗೆ. ಅಲ್ಪಾವಧಿಯಲ್ಲಿಯೇ ಅದ್ಭುತ ರಿಟರ್ನ್ಸ್ ಕೊಡುತ್ತವೆ. ಈ ರೀತಿಯಾಗಿ 100%ಗೂ ಹೆಚ್ಚು ರಿಟರ್ನ್ ಕೊಡುವ ಷೇರುಗಳನ್ನು ಮಲ್ಟಿ ಬ್ಯಾಗರ್ ಸ್ಟಾಕ್ಸ್ (Multibagger Stocks) ಎಂದು ಕರೆಯುತ್ತಾರೆ. ಹೀಗಿದ್ದರೂ ಇಂಥ ಷೇರುಗಳನ್ನು ಗುರುತಿಸುವುದು ಬಹಳ ಕಷ್ಟ. ಕಳೆದ ಐದು ವರ್ಷಗಳಲ್ಲಿ 50 ಪಟ್ಟಿಗೂ ಹೆಚ್ಚು ಬೆಳೆದಿರುವ 2 ಷೇರುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.
ಸಿಜಿ ಪವರ್: ಷೇರಿನ ದರ: 617/-
2020ರಲ್ಲಿ ಈ ಷೇರಿನ ದರ: 8
ಸಿಜಿ ಪವರ್ ಕಂಪನಿಯ ಷೇರು ದರ ಕಳೆದ 5 ವರ್ಷಗಳಲ್ಲಿ 72 ಪಟ್ಟು ಬೆಳೆದಿದೆ. ಇದು 86 ವರ್ಷ ಹಳೆಯ ಎಂಜಿನಿಯರಿಂಗ್ ಗ್ರೂಪ್ ಆಗಿದ್ದು, ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಇಂಡಸ್ಟ್ರಿಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಎರಡು ಬಿಸಿನೆಸ್ ವಿಭಾಗಗಲ್ಲಿ ತೊಡಗಿಸಿಕೊಂಡಿದೆ. ಇಂಡಸ್ಟ್ರಿಯಲ್ ಸಿಸ್ಟಮ್ಸ್ ಮತ್ತು ಪವರ್ ಸಿಸ್ಟಮ್ಸ್. ಟ್ರಾಕ್ಷನ್ ಮೋಟಾರ್ಸ್, ಪ್ರೊಪಲ್ಸನ್ ಸಿಸ್ಟಮ್ಸ್, ಸಿಗ್ನಲಿಂಗ್ ರಿಲೇಸ್ ಇತ್ಯಾದಿಗಳನ್ನು ತಯಾರಿಸಿ ಭಾರತೀಯ ರೈಲ್ವೆಗೆ ಪೂರೈಸುತ್ತಿದೆ. ವಿದ್ಯುತ್, ರೈಲ್ವೆ ಮತ್ತು ಉದ್ದಿಮೆಗಳಿಗೆ ತನ್ನ ಉತ್ಪನ್ನಗಳನ್ನು ಒದಗಿಸುತ್ತಿದೆ.
ಇದಲ್ಲದೆ ಉದ್ದಿಮೆಗಳಿಗೆ ಬೇಕಾಗುವ ಇಂಡಕ್ಷನ್ ಮೋಟಾರ್‌ಗಳು, ಡ್ರೈವ್ಸ್, ಟ್ರಾನ್ಸ್‌ಫಾರ್ಮರ್, ಸ್ವಿಚ್ ಗೇರ್‌ಗಳು ಮೊದಲಾದವುಗಳನ್ನು ಉತ್ಪಾದಿಸುತ್ತದೆ. ಇಂಡಸ್ಟ್ರಿಯಲ್ ಮತ್ತು ಪವರ್ ಸೆಕ್ಟರ್‌ಗೆ ಇವುಗಳು ಬೇಕಾಗುತ್ತದೆ. ಇತ್ತೀಚೆಗೆ ಫ್ಯಾನ್ಸ್, ಪಂಪ್, ವಾಟರ್ ಹೀಟರ್‌ಗಳನ್ನೂ ಉತ್ಪಾದಿಸುತ್ತಿದೆ.
ಹತ್ತು ವರ್ಷಗಳ ಹಿಂದೆ ಸಿಜಿ ಪವರ್ ಸಂಸ್ಥೆಯ ಆದಾಯ ಭಾರಿ ಇಳಿಕೆಯಾಗಿತ್ತು. ಕಂಪನಿಯ ಲೆಕ್ಕಪತ್ರಗಳಲ್ಲಿ ಅಕ್ರಮಗಳು ಪತ್ತೆಯಾಗಿತ್ತು. ಬಳಿಕ 2020ರಲ್ಲಿ ಮುರುಗಪ್ಪ ಗ್ರೂಪ್, ಸಿಜಿ ಪವರ್ ಅನ್ನು ಸ್ವಾಧೀನ ಪಡಿಸಿಕೊಂಡಿತು. 700 ಕೋಟಿ ರುಪಾಯಿ ಬಂಡವಾಳವನ್ನು ಹಾಕಿತು. ನಿರ್ದೇಶಕರನ್ನು ನೇಮಿಸಿತು. ಬಳಿಕ ಸಿಜಿ ಪವರ್, ಪವರ್‌ಫುಲ್ ಆಗಿ ಬೆಳವಣಿಗೆ ದಾಖಲಿಸಿತು. ಕಂಪನಿಯ ಆದಾಯ 2023-24ರ ವೇಳೆಗೆ 8000 ಕೋಟಿ ರುಪಾಯಿಗೆ ವೃದ್ಧಿಸಿತು. ಇಂಡಸ್ಟ್ರಿಯಲ್ ಸೆಕ್ಟರ್‌ನಿಂದ 67% ಆದಾಯ ಸಿಕ್ಕಿದರೆ, ಪವರ್ ಸಿಸ್ಟಮ್ ವಲಯದಿಂದ 33% ಆದಾಯ ಲಭಿಸಿತು.
ಸಿಜಿ ಪವರ್‌ನ ಆರ್ಡರ್‌ಬುಕ್ ಚೆನ್ನಾಗಿದ್ದು, ಆದಾಯದಲ್ಲಿ ಉತ್ತಮ ಬೆಳವಣಿಗೆ ಹೊಂದಿದೆ. ಪವರ್ ಟ್ರಾನ್ಸ್‌ಫಾರ್ಮರ್ ಮಾರ್ಕೆಟ್‌ನಲ್ಲಿಒಳ್ಳೆಯ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದು ಕಂಪನಿಗೂ ಅನುಕೂಲಕರವಾಗಲಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE): ಷೇರಿನ ದರ: 5,931/-
2020ರಲ್ಲಿ ಷೇರಿನ ದರ 128
ಈ ಸುದ್ದಿಯನ್ನೂ ಓದಿ: Stock Market: ಜಿಗಿಯುತ್ತಿದೆ ಸೆನ್ಸೆಕ್ಸ್, ನಿಫ್ಟಿ; ಯಾವ ಸ್ಟಾಕ್ಸ್ ಖರೀದಿಸಿದ್ರೆ ಲಾಭ?
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಷೇರು ದರ ಕಳೆದ 5 ವರ್ಷಗಳಲ್ಲಿ 45 ಪಟ್ಟು ಬೆಳೆದಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ 1875ರಲ್ಲಿ ಸ್ಥಾಪನೆಯಾಯಿತು. ಭಾರತ ಮತ್ತು ಏಷ್ಯಾದಲ್ಲೇ ಅತ್ಯಂತ ಹಳೆಯ ಸ್ಟಾಕ್ ಎಕ್ಸ್‌ಚೇಂಜ್ ಎಂಬ ಖ್ಯಾತಿ ಬಿಎಸ್‌ಇಯದ್ದಾಗಿದೆ.
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಆದಾಯವು 2023-24ರಲ್ಲಿ 1,618 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ನಿವ್ವಳ ಲಾಭವು 410 ಕೋಟಿ ರುಪಾಯಿಗೆ ವೃದ್ಧಿಸಿದೆ. ಬಿಎಸ್‌ಇ ಬಹುತೇಕ ಸಾಲ ಮುಕ್ತ ಕಂಪನಿಯಾಗಿದೆ. ಉತ್ತಮ ಲಾಭ ಮತ್ತು ಆದಾಯ ಗಳಿಸುತ್ತಿದೆ. ಡಿವಿಡೆಂಡ್ ವಿತರಣೆ ಕೂಡ ಆರೋಗ್ಯಕರವಾಗಿದೆ.
ಈಗ ಸುದ್ದಿಯಲ್ಲಿರುವ ಷೇರುಗಳ ಬಗ್ಗೆ ನೋಡೋಣ. ಏ. 17ಕ್ಕೆ ಅಂತ್ಯವಾದ ವಾರದಲ್ಲಿ ಸೆನ್ಸೆಕ್ಸ್ 4.5% ಏರಿಕೆಯಾಗಿದೆ. ಈ ನಡುವೆ 7 ಪೆನ್ನಿ ಸ್ಟಾಕ್ಸ್‌ಗಳು 10%ರಿಂದ 24% ತನಕ ಏರಿಕೆಯಾಗಿದೆ. ಅವುಗಳ ಬಗ್ಗೆ ತಿಳಿಯೋಣ. ಇವುಗಳ ಮಾರುಕಟ್ಟೆ ಮೌಲ್ಯ 1,000 ಕೋಟಿ ರೂ.ಗೆ ಕೆಳಗಿದೆ. ಷೇರಿನ ದರ 20 ರೂ.ಗಿಂತ ಕೆಳಗಿದೆ.
- ವಾರಿಮನ್ ಗ್ಲೋಬಲ್ ಎಂಟರ್‌ಪ್ರೈಸಸ್:
ವಾರದ ಗಳಿಕೆ: 24% | ಮಾರುಕಟ್ಟೆ ದರ: Rs 12.40
- ಈಸ್ಟ್ ವೆಸ್ಟ್ ಫ್ರೈಟ್
ವಾರದ ಗಳಿಕೆ: 21% | ಮಾರುಕಟ್ಟೆ ದರ: Rs 6.39
- ಯುವರಾಜ್ ಹೈಜಿನ್ ಪ್ರಾಡಕ್ಟ್
ವಾರದ ಗಳಿಕೆ: 16% | ಮಾರುಕಟ್ಟೆ ದರ: Rs 14.60
- ಕೆಸಿಎಲ್ ಇನ್ ಫ್ರಾ ಪ್ರಾಜೆಕ್ಟ್ಸ್
ವಾರದ ಗಳಿಕೆ: 16% | ಮಾರುಕಟ್ಟೆ ದರ: Rs 1.63
- ಎಸ್‌ಬಿಸಿ ಎಕ್ಸ್‌ಪೋರ್ಟ್ಸ್
ವಾರದ ಗಳಿಕೆ: 14% | ಮಾರುಕಟ್ಟೆ ದರ: Rs 14.75
- ಜಿಎಸಿಎಂ ಟೆಕ್ನಾಲಜೀಸ್ :
ವಾರದ ಗಳಿಕೆ: 13% | ಮಾರುಕಟ್ಟೆ ದರ: Rs 1.07