ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: 16 ವರ್ಷದ ಬಾಲಕನನ್ನು ಲಾಡ್ಜ್‌ಗೆ ಕರೆದೊಯ್ದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಶಿಕ್ಷಕಿ

Crime News: 16 ವರ್ಷದ ಬಾಲಕನ್ನು ಹೊಟೇಲ್‌ಗೆ ಕರೆದೊಯ್ದು ಮದ್ಯ ಕುಡಿಸಿ ಆತನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದ 40 ವರ್ಷದ ಶಿಕ್ಷಕಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಸುದ್ದಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಶಿಕ್ಷಕಿಯ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕಿ

ಸಾಂದರ್ಭಿಕ ಚಿತ್ರ.

Profile Ramesh B Jul 2, 2025 9:42 PM

ಮುಂಬೈ: ಮಹಾರಾಷ್ಟ್ರದಲ್ಲಿ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯೊಬ್ಬನನ್ನು 5 ಸ್ಟಾರ್‌ ಹೋಟೆಲ್‌ಗೆ ಕರೆದೊಯ್ದು ವರ್ಷಗಳ ಕಾಲ ಲೈಂಗಿಕ ದೌರ್ಜಜ್ಯ ಎಸಗಿರುವುದು ಬೆಳಕಿಗೆ ಬಂದಿದೆ (Crime News). ಇದೀಗ ʼಕಾಮುಕ ಶಿಕ್ಷಕಿʼ ಪೊಲೀಸರ ಅತಿಥಿಯಾಗಿದ್ದಾಳೆ. ಮುಂಬೈಯ ಪ್ರತಿಷ್ಠಿತ ಶಾಲೆಯೊಂದರ 40 ವರ್ಷದ, ಇಂಗ್ಲಿಷ್‌ ಶಿಕ್ಷಕಿ ಕಳೆದೊಂದು ವರ್ಷದಿಂದ 16 ವರ್ಷದ ಬಾಲಕನ್ನು ಹೊಟೇಲ್‌ಗೆ ಕರೆದೊಯ್ದು ಮದ್ಯಪಾನ ಮಾಡಿಸಿ ಲೈಂಗಿಕವಾಗಿ ಪೀಡಿಸಿದ್ದಾಳೆ (Physical Abuse). ಸದ್ಯ ಆಕೆಯನ್ನು ಪೊಲೀಸರು ಪೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ.

40 ವರ್ಷದ ವಿವಾಹಿತ ಶಿಕ್ಷಕಿಗೆ ಮಕ್ಕಳೂ ಇದ್ದಾರೆ. ಆದರೂ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾಳೆ. 11ನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತ ವಿದ್ಯಾರ್ಥಿಗೆ ಆಕೆ ಈ ಹಿಂದೆ ಪಾಠ ಮಾಡುತ್ತಿದ್ದಳು. 2023ರ ಡಿಸೆಂಬರ್‌ನಲ್ಲಿ ಪ್ರೌಢಶಾಲಾ ವಾರ್ಷಿಕೋತ್ಸವಕ್ಕಾಗಿ ತಯಾರಿ ನಡೆಸುತ್ತಿದ್ದ ವೇಳೆ ಆಕೆ ಅವನತ್ತ ಆಕರ್ಷಿತಳಾಗಿದ್ದಳು ಮತ್ತು 2024ರ ಜನವರಿಯಲ್ಲಿ ಮೊದಲ ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದಳು ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಅಪ್ರಾಪ್ತನಿಗೆ ನೈತಿಕ ಬೆಂಬಲ ನೀಡುವ ನೆಪದಲ್ಲಿ ಆಕೆ ಐಷಾರಾಮಿ ಹೊಟೇಲ್‌ಗಳಿಗೆ ಕರೆದೊಯ್ದು ಲೈಂಗಿಕವಾಗಿ ಆತನ ಮೇಲೆ ದೌರ್ಜನ್ಯ ಎಸಗುತ್ತಿದ್ದಳು. ಅದಕ್ಕೂ ಮೊದಲು ಆತನಿಗೆ ಮದ್ಯ ಕುಡಿಸುತ್ತಿದ್ದಳು. ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಆತಂಕ ನಿವಾರಕ ಮಾತ್ರೆ ನೀಡುತ್ತಿದ್ದಳು ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ: ದೈಹಿಕ ಸಂಪರ್ಕ ಬೆಳೆಸುವಂತೆ ಯುವತಿಯಿಂದ ಕಿರುಕುಳ; 20 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಘಟನೆ ವಿವರ

ಮೊದಲ ಬಾರಿ ಲೈಂಗಿಕ ಸಂಪರ್ಕ ನಡೆಸಿದ ಬಳಿಕ ಬಾಲಕ ಮಾಸಿಕವಾಗಿ ಕುಗ್ಗಿಹೋಗಿದ್ದ. ಇದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ ಆತ ಶಿಕ್ಷಕಿಯನ್ನು ದೂರ ಮಾಡಿದ್ದ. ಆಕೆಗೆ ಸಿಗದಂತೆ ಓಡಾಡಲು ಆರಂಭಿಸಿದ್ದ. ಇದರಿಂದ ಹತಾಸಳಾದ ಶಿಕ್ಷಕಿ ತನ್ನ ಸ್ನೇಹಿತೆಯನ್ನು ಮಧ್ಯಸ್ಥಿಕೆವಹಿಸುವಂತೆ ಕೇಳಿಕೊಂಡಿದ್ದಳು. ಅದರಂತೆ ಸ್ನೇಹಿತೆ ಬಾಲಕನ ಬಳಿ ತೆರಳಿ ವಯಸ್ಸಾದ ಮಹಿಳೆ ಮತ್ತು ಹದಿಹರೆಯದ ಹುಡುಗರ ನಡುವಿನ ಸಂಬಂಧದಲ್ಲಿ ಯಾವುದೇ ತಪ್ಪಿಲ್ಲ, ಇದು ಸಾಮಾನ್ಯ ಎಂದು ಮನವೊಲಿಸಿದ್ದಳು.

ʼʼಶಿಕ್ಷಕಿ ಮತ್ತು ಬಾಲಕದ್ದು ಉತ್ತಮ ಜೋಡಿ ಎಂದೆಲ್ಲ ಹೇಳಿ ಆಕೆಯ ಸ್ನೇಹಿತೆ ಆತನ ಮನಸ್ಸು ಬದಲಾಯಿಸಿದ್ದಳು. ಕೊನೆಗೆ ಬಾಲಕ ಶಿಕ್ಷಕಿಯನ್ನು ಭೇಟಿಯಾಗಲು ಒಪ್ಪಿಕೊಂಡಿದ್ದ. ಬಳಿಕ ಶಿಕ್ಷಕಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ಕಿರುಕುಳ ನೀಡಿದ್ದಾಳೆʼʼ ಎಂದು ಪೊಲೀಸರು ವಿವರಿಸಿದ್ದಾರೆ. ಈ ಘಟನೆಯ ಬಳಿಕ ಆತ ಆತಂಕದಿಂದ ಬಳಲುತ್ತಿದ್ದ. ಇದಕ್ಕಾಗಿ ಶಿಕ್ಷಕಿ ಆತಂಕ ನಿವಾರಕ ಮಾತ್ರೆಗಳನ್ನೂ ನೀಡಿದ್ದಳು. ಸದ್ಯ ಈ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿಕ್ಷಕಿಗೆ ನೆರವಾದ ಸ್ನೇಹಿತೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ʼʼಈ ಘಟನೆಯ ಬಳಿಕ ಶಿಕ್ಷಕಿ ಆತನಿಗೆ ಇಷ್ಟವಿಲ್ಲದಿದ್ದರೂ ನಿರಂತರವಾಗಿ ದಕ್ಷಿಣ ಮುಂಬೈಯ ವಿವಿಧ ಪಂಚತಾರಾ ಹೊಟೇಲ್‌ಗಳಿಗೆ ಮತ್ತು ವಿಮಾನ ನಿಲ್ದಾಣದ ಬಳಿಗೆ ಕರೆದೊಯ್ಯಲು ಪ್ರಾರಂಭಿಸಿದಳು ಮತ್ತು ಏಕಾಂತದಲ್ಲಿ ಆತನಿಗೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡತೊಡಗಿದಳು. ಲೈಂಗಿಕ ಸಂಪರ್ಕಕ್ಕೆ ಮೊದಲು ಆತನಿಗೆ ಮದ್ಯ ಕುಡಿಸುತ್ತಿದ್ದಳುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕನ ವರ್ತನೆಯಲ್ಲಾದ ಬದಲಾವಣೆ ಗಮನಿಸಿದ ಮನೆಯವರು ವಿಚಾರಿಸಿದಾಗ ಆತ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಹೀಗಾಗಿ ಮನೆಯವರು ಪೊಲೀಸ್‌ ಠಾಣೆ ಮೆಟ್ಟಿಲೇರಿದರು. ಸದ್ಯ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.