Physical Assault: ಮಹಿಳೆ ಮೇಲೆ ಅತ್ಯಾಚಾರ; ಸೆಲ್ಫಿ ತೆಗೆದು ಮತ್ತೆ ಬರುತ್ತೇನೆಂದು ಬರೆದಿಟ್ಟು ಪರಾರಿಯಾದ ಕಾಮುಕ
ಕೊಂಧ್ವಾದಲ್ಲಿ ಐಷಾರಾಮಿ ಸೊಸೈಟಿಯಲ್ಲಿ ಕೊರಿಯರ್ ಡೆಲಿವರಿ ಬಾಯ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮೂಲಗಳ ಪ್ರಕಾರ, ಆರೋಪಿಯು ಮಹಿಳೆಯ ಮುಖದ ಮೇಲೆ ಏನೋ ಸಿಂಪಡಿಸಿ ನಂತರ ಅತ್ಯಾಚಾರ ಎಸಗಿದ್ದಾನೆ.


ಪುಣೆ: ಕೊಂಧ್ವಾದಲ್ಲಿ ಐಷಾರಾಮಿ ಸೊಸೈಟಿಯಲ್ಲಿ ಕೊರಿಯರ್ ಡೆಲಿವರಿ ಬಾಯ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Physical Assault) ಎಸಗಿದ್ದಾನೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮೂಲಗಳ ಪ್ರಕಾರ, ಆರೋಪಿಯು ಮಹಿಳೆಯ ಮುಖದ ಮೇಲೆ ಏನೋ ಸಿಂಪಡಿಸಿ ನಂತರ ಅತ್ಯಾಚಾರ ಎಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ 7.30 ರ ಸುಮಾರಿಗೆ ಆರೋಪಿ ವ್ಯಕ್ತಿ ಕೊರಿಯರ್ ಡೆಲಿವರಿ ಬಾಯ್ ರೂಪದಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳಾ ಸೊಸೈಟಿಗೆ ಪ್ರವೇಶಿಸಿದ್ದಾನೆ. ಮಹಿಳೆ ತನಗೆ ಕೊರಿಯರ್ ಇಲ್ಲ ಎಂದು ಹೇಳಿದಾಗಲೂ, "ಸಹಿ ಅಗತ್ಯವಿದೆ" ಎಂದು ಒತ್ತಾಯಿಸಿದ್ದಾನೆ. ಮಹಿಳೆ ಸುರಕ್ಷತಾ ಬಾಗಿಲು ತೆರೆದು ಕೊರಿಯರ್‌ಗಾಗಿ ಪಿನ್ ಪಡೆಯಲು ತನ್ನ ಮನೆಯೊಳಗೆ ಹೋದಾಗ, ಆ ವ್ಯಕ್ತಿ ಬಾಗಿಲು ಮುಚ್ಚಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆಸುವ ಮುನ್ನ ಅವನು ಆಕೆಯ ಮುಖದ ಮೇಲೆ ಏನೋ ಸಿಂಪಡಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಇದನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ, ಅವನು ಆ ಮಹಿಳೆಯ ಫೋನ್ ಬಳಸಿ ಸೆಲ್ಫಿ ತೆಗೆದುಕೊಂಡು ಅದರ ಮೇಲೆ "ನಾನು ಹಿಂತಿರುಗುತ್ತೇನೆ ಎಂದು ಬರೆದಿದ್ದಾನೆ. ಪುಣೆ ನಗರದ ಕೊಂಧ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಬಿಎನ್ಎಸ್ ಸೆಕ್ಷನ್ 64, 77 ಮತ್ತು 351(2) ರ ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ. ನಿನ್ನೆ ಸಂಜೆ 7:30 ರ ಸುಮಾರಿಗೆ, ಬ್ಯಾಂಕ್ ಲಕೋಟೆಯೊಂದಿಗೆ ಡೆಲಿವರಿ ಬಾಯ್ ಒಬ್ಬ ಮಹಿಳೆಯ ಫ್ಲಾಟ್‌ಗೆ ಪ್ರವೇಶಿಸಿದನು. ಕೊರಿಯರ್‌ಗಾಗಿ ಪಿನ್ ಪಡೆಯಲು ಅವಳು ತನ್ನ ಮನೆಯೊಳಗೆ ಹೋದಾಗ, ಅವನು ಬಾಗಿಲು ಮುಚ್ಚಿ ಅತ್ಯಾಚಾರ ನಡೆಸಿದ್ದಾನೆ.
ಈ ಸುದ್ದಿಯನ್ನೂ ಓದಿ: Physical Assault: ಕೋಲ್ಕತ್ತಾ ಅತ್ಯಾಚಾರ ಆರೋಪಿ ಮನೋಜಿತ್ ಮಿಶ್ರಾ ವಕೀಲ ಸದಸ್ಯತ್ವ ರದ್ದು
ಅಪರಾಧ ವಿಭಾಗದ ಐದು ಮತ್ತು ಐದು ವಲಯ ತಂಡಗಳು ಸೇರಿದಂತೆ ಒಟ್ಟು 10 ತಂಡಗಳು ಪ್ರಕರಣದ ಮೇಲೆ ಕೆಲಸ ಮಾಡುತ್ತಿದೆ. ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಪುಣೆ ನಗರದ 5 ನೇ ವಲಯ ಡಿಸಿಪಿ ರಾಜ್‌ಕುಮಾರ್ ಶಿಂಧೆ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಪುಣೆಯಲ್ಲಿ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ, 17 ವರ್ಷದ ಬಾಲಕಿಯ ಮೇಲೆ ಮೋಟಾರ್‌ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರ ಬೆಳಗಿನ ಜಾವ 4.15 ರ ಸುಮಾರಿಗೆ ದೌಂಡ್ ಪ್ರದೇಶದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.