Temple Robbery: ಮೈಸೂರು ಚಾಮುಂಡೇಶ್ವರಿ ದೇವಾಲಯದಿಂದ ತಾಳಿ ಕಳವು; ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆ
Mysore News: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇತ್ತೀಚೆಗೆ ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಗಾಯತ್ರಿಪುರಂನಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ವ್ಯಕ್ತಿಯೊಬ್ಬ ಗರ್ಭಗುಡಿಗೆ ನುಗ್ಗಿ ಮಾಂಗಲ್ಯ ಸರ ಕಳವು ಮಾಡಿದ್ದಾನೆ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysore News) ಇತ್ತೀಚೆಗೆ ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಇದೀಗ ದೇವಸ್ಥಾನವನ್ನೂ ಬಿಡದ ಕಳ್ಳನೊಬ್ಬ ದೇವಿಯ ಮಾಂಗಲ್ಯ ಸರವನ್ನು ಹೊತ್ತೊಯ್ದಿದ್ದಾನೆ. ಮೈಸೂರಿನ ಗಾಯತ್ರಿಪುರಂನಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ (Chamundeshwari Temple) ಭಕ್ತನ ಸೋಗಿನಲ್ಲಿ ಬಂದ ಕಳ್ಳನೊಬ್ಬ ದೇವಿ ವಿಗ್ರಹದ ಕೊರಳಲ್ಲಿದ್ದ ತಾಳಿಯನ್ನು ಕದ್ದೊಯ್ದಿದ್ದಾನೆ. ಈ ಘಟನೆಯ ವಿಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು(Temple Robbery), ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕೈ ಮುಗಿಯುವ ಸೋಗಿನಲ್ಲಿ ಬಂದ ಕಳ್ಳ ಗರ್ಭಗುಡಿಯೊಳಗೆ ನುಗ್ಗಿ ದೇವಿ ಮೈಮೇಲಿದ್ದ ಚಿನ್ನದ ತಾಳಿಯನ್ನೇ ಎಗರಿಸಿದ್ದಾನೆ. ಈ ವೇಳೆ ದೇಗುಲದಲ್ಲಿ ಯಾರೂ ಇರಲಿಲ್ಲ. ಅರ್ಚಕರು ಆಷಾಢ ಮಾಸದ ಎರಡನೇ ಶುಕ್ರವಾರಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರು ದೇವಸ್ಥಾನದ ಬೀಗ ತೆರೆದು ನೀರು ತರಲು ಹೋಗಿದ್ದ ವೇಳೆ ಕಳವು ಮಾಡಲಾಗಿದೆ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಸರ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಅದಾಗ್ಯೂ ಕಳ್ಳನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆತನ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Tumkur News: ವಿವಿಧ ಪ್ರಕರಣಗಳಲ್ಲಿ 170 ಕಳ್ಳರ ಬಂಧನ, 5.61 ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಕಳವು ಮಾಲು ವಶಕ್ಕೆ
ವಿಡಿಯೊದಲ್ಲಿ ಏನಿದೆ?
ದೇವಿಗೆ ಕೈ ಮುಗಿಯುವ ಸೋಗಿನಲ್ಲಿ ಮಧ್ಯ ವಯಸ್ಕ ವ್ಯಕ್ತಿ ದೇವಸ್ಥಾನಕ್ಕೆ ಬರುತ್ತಾನೆ. ಈ ವೇಳೆ ಅಲ್ಲಿ ಯಾರೂ ಇಲ್ಲದಿರುವುದು ಆತನ ಗಮನಕ್ಕೆ ಬಂದಿತ್ತು. ನಂತರ ಮುಖಕ್ಕೆ ಟವೆಲ್ ಸುತ್ತಿ ಸೀದಾ ಗರ್ಭಗುಡಿಗೆ ನುಗ್ಗಿ ದೇವಿಯ ಕೊರಳಿನಲ್ಲಿದ್ದ ಚಿನ್ನದ ತಾಳಿಯನ್ನು ಕದ್ದು ಓಡಿದ್ದಾನೆ. ನಜರಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕೆನರಾ ಬ್ಯಾಂಕ್‌ನಿಂದ 53 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಇತ್ತೀಚೆಗೆ ಭಾರಿ ದರೋಡೆ ನಡೆದಿದ್ದು, 58 ಕೆಜಿ 975 ಗ್ರಾಂ ಚಿನ್ನಾಭರಣ, 5.20 ಲಕ್ಷ ರೂ. ನಗದು ಕಳವಾಗಿತ್ತು. ಮೇ 25ರಂದು ಬ್ಯಾಂಕ್‌ನಲ್ಲಿ ಅಂದಾಜು 53 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. 6ರಿಂದ 8 ಕಳ್ಳರು ಕೃತ್ಯ ಎಸಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಎರಡು ದಿನಗಳ ಕಾಲ ಹೊಂಚು ಹಾಕಿ ಕಳ್ಳತನ ಮಾಡಲಾಗಿದ್ದು, ಕಳ್ಳರು ಪಕ್ಕಾ ಮಾಸ್ಟರ್ ಪ್ಲ್ಯಾನ್ ಮಾಡಿಯೇ ಕೈಚಳಕ ತೋರಿದ್ದರು. ಲಾಕರ್ ತೆಗೆಯಲು ನಕಲಿ ಕೀ ಬಳಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಪ್ರವೇಶ ದ್ವಾರದ ಬೀಗ ಒಡೆದು ಬ್ಯಾಂಕ್ ಒಳಗೆ ನುಗ್ಗಿ, ಸೈರನ್ ಆಫ್ ಮಾಡಿ ಚಿನ್ನಾಭರಣ ಇಟ್ಟಿದ್ದ ಒಂದು ಲಾಕರ್ ಮಾತ್ರ ಓಪನ್ ಮಾಡಿ ಕದಿಯಲಾಗಿತ್ತು. ಕಳ್ಳತನದ ವೇಳೆ ಕಿಟಕಿ ಸರಳು ಮುರಿದಿದ್ದು, ಕಪ್ಪು ಬಣ್ಣದ ಬೊಂಬೆಗೆ ಪೂಜೆ ಮಾಡಿರುವುದು ಬೆಳಕಿಗೆ ಬಂದಿತ್ತು. ತನಿಖೆ ದಾರಿ ತಪ್ಪಿಸಲು ವಾಮಾಚಾರ ಮಾಡಿದ್ದಾರೆಂದು ಬಿಂಬಿಸಲು ಕಳ್ಳರು ಈ ಪ್ಲ್ಯಾನ್ ತಿಳಿಸಿದ್ದರು. ಎಂದು ಪೊಲೀಸರು