Gubbi (Tumkur) News: ಗುಬ್ಬಿಯಲ್ಲಿ ಜು.7ರಂದು ಶ್ರೀ ಪಾಂಡುರಂಗಸ್ವಾಮಿ ದಿಂಡಿ ಉತ್ಸವ: ಭಾವಸಾರ ಕ್ಷತ್ರಿಯರಿಂದ ಅದ್ದೂರಿ ಮೆರವಣಿಗೆ
ಜು.6 ರ ಸಂಜೆ 5 ಗಂಟೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ ಮತ್ತು ಭಜನೆ ಕೀರ್ತನೆ ನಡೆದು ಮಹಾ ಮಂಗಳಾರತಿ ನಡೆಯಲಿದೆ. ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಘಟಕದ ಡಾ.ಸೂರ್ಯ ನಾರಾ ಯಣರಾವ್, ಗುರುಪ್ರಸಾದ್ ಪಿಸ್ಸೆ ಹಾಗೂ ಸತ್ಯನಾರಾಯಣ್ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸ ಲಾಗಿದೆ


ಗುಬ್ಬಿ: ಆಷಾಢ ಮಾಸದ ಏಕಾದಶಿ ಹಿನ್ನಲೆ ಜುಲೈ 6 ಮತ್ತು 7 ರಂದು ಶ್ರೀ ರುಖ್ಖುಮಾಯಿ, ಶ್ರೀ ಪಾಂಡುರಂಗಸ್ವಾಮಿ ಅವರ 21ನೇ ವರ್ಷದ ದಿಂಡಿ ಉತ್ಸವ ಕಾರ್ಯಕ್ರಮವನ್ನು ತಾಲ್ಲೂಕಿನ ಭಾವಸಾರ ಕ್ಷತ್ರಿಯ ಸಮಾಜದಿಂದ ಆಯೋಜನೆ ಮಾಡಲಾಗಿದೆ ಎಂದು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವಾಸುದೇವ ರಾವ್, ಗೌರವಾಧ್ಯಕ್ಷ ಕೆ.ಮಂಜುನಾಥ ಮಾಳೋದೆ ಹಾಗೂ ಕಾರ್ಯದರ್ಶಿ ಜಿ.ಬಿ.ಚಂದನ್ ರಾವ್ ನಾಜರೆ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಟ್ಟಣದ ಶ್ರೀ ಪಾಂಡುರಂಗ ಸ್ವಾಮಿ ಭಜನಾ ಮಂದಿರದಲ್ಲಿ ಜು.6 ರಂದು ಬೆಳಿಗ್ಗೆ 10 ಕ್ಕೆ ವಿಷ್ಣು ಸಹಸ್ರನಾಮ, ಕುಂಕುಮಾರ್ಚನೆ, ಅಷ್ಟೋತ್ತರ ಪೂಜೆ ನಡೆಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಸಿ ದಾನಿಗಳಾದ ಮಹಾಲಕ್ಷ್ಮಿ ನಾಗರಾಜರಾವ್ ಮಿರಸ್ಕರ್ ಅವರ ಕುಟುಂಬದ ಸೇವೆಯಿಂದ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದರು.
ಇದನ್ನೂ ಓದಿ: Gubbi (Tumkur) News: ಮರು ಜಾತಿಗಣತಿ ಸ್ವಾಗತಾರ್ಹ: ಶಾಸಕ ಎಸ್.ಆರ್.ಶ್ರೀನಿವಾಸ್
ಜು.6 ರ ಸಂಜೆ 5 ಗಂಟೆಗೆ ಶ್ರೀ ಜ್ಞಾನೇಶ್ವರಿ ಪಾರಾಯಣ ಮತ್ತು ಭಜನೆ ಕೀರ್ತನೆ ನಡೆದು ಮಹಾ ಮಂಗಳಾರತಿ ನಡೆಯಲಿದೆ. ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯ ಘಟಕದ ಡಾ.ಸೂರ್ಯ ನಾರಾ ಯಣರಾವ್, ಗುರುಪ್ರಸಾದ್ ಪಿಸ್ಸೆ ಹಾಗೂ ಸತ್ಯನಾರಾಯಣ್ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು ಜು.7 ರಂದು ಬೆಳಿಗ್ಗೆ ಪೂಜಾ ಕೈಂಕರ್ಯ ನೆರವೇರಿಸಿ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಸಿ ದಾನಿಗಳಾದ ಮುನಿದೇವರರಾವ್ ಮಕ್ಕಳಿಂದ ಪ್ರಸಾದ ವಿನಿಯೋಗ ನಡೆಯಲಿದೆ.
ನಂತರ ಶ್ರೀ ಪಾಂಡುರಂಗಸ್ವಾಮಿ ಶ್ರೀ ರುಕ್ಮಿಣಿ ದೇವಿಯ ಅದ್ದೂರಿ ಮೆರವಣಿಗೆ ಊರಿನ ರಾಜ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾ ಮೇಳದೊಂದಿಗೆ ಜರುಗಲಿದೆ. ಮುಖ್ಯ ಕೀರ್ತನಾಕಾರ ಧನಂಜಯ ಗುರೂಜಿ ಅವರು ಕೀರ್ತನೆ ಹಾಡಲಿದ್ದಾರೆ ಎಂದು ವಿವರಿಸಿದರು.