UP Crime: ಯಾರು ಇಲ್ಲ ಮನೆಗೆ ಬಾ ಎಂದು ಕರೆದ್ಳು ಮಳ್ಳಿ- ಓಡಿ ಬಂದ ಪ್ರಿಯಕರನಿಗೆ ಈಕೆ ಮಾಡಿದ್ದೇನು ಗೊತ್ತಾ...?
UP Crime: ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿಸಿ ಪ್ರೇಮಿಯನ್ನು ಕರೆಸಿಕೊಂಡ ಯುವತಿ, ಯಾವುದೋ ವಿಚಾರಕ್ಕೆ ಜಗಳ ಹುಡುಗನ ಜೊತೆ ಜಗಳ ನಡೆಸಿದ್ದು, ಜಗಳದ ಬಳಿಕ ಈ ಕೃತ್ಯ ಎಸಗಿದ್ದಾಳೆ. ಗಂಟೆಗಳ ಕಾಲ ರಕ್ತಸ್ರಾವವಾಗಿದ್ದು, ಪ್ರೇಮಿ ಆಸ್ಪತ್ರೆಗೆ ದಾಖಲಾಗಿದ್ದಾನೆ.


ಲಖನೌ: ಉತ್ತರ ಪ್ರದೇಶದ (Uttar Pradesh) ಸಂತ ಕಬೀರ್ ನಗರ ಜಿಲ್ಲೆಯ ಖಲೀಲಾಬಾದ್ ಕೋಟ್ವಾಲಿ ಪ್ರದೇಶದ ಮುಶಾರ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರು ಇಲ್ಲ ಬಾ ಎಂದು ಗೆಳೆಯನ್ನು (Boyfriend) ಕರೆಸಿಕೊಂಡ ಯುವತಿಯೊಬ್ಬಳು ತನ್ನ ಪ್ರೇಮಿಯ ಖಾಸಗಿ ಅಂಗವನ್ನು (Private Organ) ಬ್ಲೇಡ್‌ನಿಂದ ಕತ್ತರಿಸಿದ ಶಾಕಿಂಗ್ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ವರದಿಗಳ ಪ್ರಕಾರ, ಇಬ್ಬರ ನಡುವೆ ಕೆಲ ವಿಚಾರಕ್ಕೆ ಜಗಳವಾಗಿದ್ದು, ಇದರಿಂದ ಕೋಪಗೊಂಡ ಯುವತಿ ಈ ಕೃತ್ಯವೆಸಗಿದ್ದಾಳೆ.
ಜಂಗಲ್ ಕಾಲದಲ್ಲಿ ವಾಸಿಸುವ 19 ವರ್ಷದ ವಿಕಾಸ್ ನಿಷಾದ್, ಸೋಮವಾರ ಗೆಳತಿಯನ್ನು ಭೇಟಿಯಾಗಲು ಮುಶಾರ ಗ್ರಾಮಕ್ಕೆ ತೆರಳಿದ್ದ. ಆತ ಯುವತಿಯ ಮನೆಯಲ್ಲಿ ಸುಮಾರು ಆರು ಗಂಟೆಗಳ ಕಾಲ ಕಳೆದಿದ್ದ. ಆದರೆ, ಇಬ್ಬರ ನಡುವೆ ಜಗಳವಾಗಿದ್ದು, ಯುವತಿ ವಿಕಾಸ್‌ನ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾಳೆ. ರಕ್ತದ ಮಡುವಿನಲ್ಲಿ ಮನೆಗೆ ತಲುಪಿದ ವಿಕಾಸ್‌ನನ್ನು ಕುಟುಂಬಸ್ಥರು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಟೆಗಟ್ಟಲೆ ರಕ್ತಸ್ರಾವವಾಗಿದ್ದರಿಂದ ಆತನ ಸ್ಥಿತಿ ಗಂಭೀರವಾಗಿತ್ತು.
ಈ ಸುದ್ದಿಯನ್ನು ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ
ಕಳೆದ ಆರು ವರ್ಷಗಳಿಂದ ಪ್ರತೀತಿಸುತ್ತಿದ್ದ ವಿಕಾಸ್ ಮತ್ತು ಯುವತಿ ಆಗಾಗ ಭೇಟಿಯಾಗುತ್ತಿದ್ದರು. ಸೋಮವಾರ ಯುವತಿಯ ಆಹ್ವಾನದ ಮೇರೆಗೆ ಆಕೆಯ ಮನೆಗೆ ತೆರಳಿದ್ದ. ಆದರೆ, ಈ ಭೇಟಿ ದುರಂತ ಘಟನೆಗೆ ಕಾರಣವಾಗಿದೆ.ಈ ಘಟನೆ ಬಗ್ಗೆ ಮಾತನಾಡಿರುವ ವಿಕಾಸ್‌ನ ತಾಯಿ, ಆ ಯುವತಿ ನನ್ನ ಮಗನನ್ನು ಮನೆಗೆ ಕರೆದಿದ್ದಳು. ಬೆಳಗ್ಗೆ ದಾಳಿ ಮಾಡಿ ನನ್ನ ಮಗನ ಜೀವಕ್ಕೆ ಅಪಾಯ ತಂದಿದ್ದಾಳೆ ಎಂದು ಆರೋಪಿಸಿದ್ದಾರೆ. ಚಿಕಿತ್ಸೆಯ ವೇಳೆ ವಿಕಾಸ್ ಕೆಲಕಾಲ ಪ್ರಜ್ಞೆ ತಪ್ಪಿದ್ದ ಎಂದು ಅವರು ತಿಳಿಸಿದ್ದಾರೆ.
ಖಲೀಲಾಬಾದ್ ಕೋಟ್ವಾಲಿ ಪೊಲೀಸರು ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ದೂರು ದಾಖಲಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರೇಮ ಸಂಬಂಧದಲ್ಲಿ ಇಂತಹ ಕೃತ್ಯ ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ. ತನಿಖೆಯಿಂದ ಸತ್ಯಾಂಶ ಬಯಲಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.