Spy For Pakistan: ವಾಟ್ಸಾಪ್ ಗ್ರೂಪ್‌ಗಳ ಮೂಲಕ ಪಾಕಿಸ್ತಾನ ಪರ ಬೇಹುಗಾರಿಕೆ; ವಾರಣಾಸಿ ವ್ಯಕ್ತಿಯ ಬಂಧನ
ಆಪರೇಷನ್ ಸಿಂದೂರದ ಬಳಿಕ ಭಾರತದಲ್ಲಿ ಪಾಕ್ ಪರ ಬೇಹುಗಾರಿಕೆ ನಡೆಸುತ್ತಿರುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬೇಹುಗಾರಿಕೆಯಲ್ಲಿ ತೊಡಗಿರುವ 12 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಪಾಕಿಸ್ತಾನ ಬೆಂಬಲಿತ ರಾಷ್ಟ್ರವಿರೋಧಿ ಸಂಘಟನೆಗಳು ರಚಿಸಿದ ವಾಟ್ಸಾಪ್ ಗುಂಪಿನೊಂದಿಗೆ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ಮಕ್ಸೂದ್ ಆಲಂ ಪುತ್ರ ತುಫೈಲ್ ಸಂಪರ್ಕ ಹೊಂದಿದ್ದಾನೆ.


ಲಖನೌ: ಆಪರೇಷನ್ ಸಿಂದೂರದ ಬಳಿಕ ಭಾರತದಲ್ಲಿ ಪಾಕ್ ಪರ ಬೇಹುಗಾರಿಕೆ (Spy For Pakistan) ನಡೆಸುತ್ತಿರುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬೇಹುಗಾರಿಕೆಯಲ್ಲಿ ತೊಡಗಿರುವ 12 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಪಾಕಿಸ್ತಾನ ಬೆಂಬಲಿತ ರಾಷ್ಟ್ರವಿರೋಧಿ ಸಂಘಟನೆಗಳು ರಚಿಸಿದ ವಾಟ್ಸಾಪ್ ಗುಂಪಿನೊಂದಿಗೆ ಉತ್ತರ ಪ್ರದೇಶದ ವಾರಣಾಸಿ ನಿವಾಸಿ ಮಕ್ಸೂದ್ ಆಲಂ ಪುತ್ರ ತುಫೈಲ್ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತುಫೈಲ್ ವಾರಣಾಸಿಯ ಜೈತ್‌ಪುರ ಜಿಲ್ಲೆಯ ದೋಷಿಪುರ ನಿವಾಸಿಯಾಗಿದ್ದಾನೆ.
ಗುಪ್ತಚರ ಮಾಹಿತಿಯ ಪ್ರಕಾರ, ವಾರಣಾಸಿಯಲ್ಲಿರುವ ಎಟಿಎಸ್ ಕ್ಷೇತ್ರ ಘಟಕವು ಆರೋಪಿ ತುಫೈಲ್ ಪಾಕಿಸ್ತಾನದಲ್ಲಿ ಹಲವಾರು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ದೃಢಪಡಿಸಿದೆ. ತುಫೈಲ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ಲಬ್ಬೈಕ್‌ನ ನಾಯಕ ಮೌಲಾನಾ ಶಾದ್ ರಿಜ್ವಿಯ ವೀಡಿಯೊಗಳನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದ. ಬಾಬರಿ ಮಸೀದಿ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ಭಾರತದಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರಲು "ಘಜ್ವಾ-ಎ-ಹಿಂದ್" ಗೆ ಕರೆ ನೀಡುವ ಸಂದೇಶಗಳನ್ನು ಸಹ ಹಂಚಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ರಾಜ್‌ಘಾಟ್, ನಮೋಘಾಟ್, ಜ್ಞಾನವಾಪಿ, ರೈಲ್ವೆ ನಿಲ್ದಾಣ, ಜಾಮಾ ಮಸೀದಿ, ಕೆಂಪು ಕೋಟೆ ಮತ್ತು ನಿಜಾಮುದ್ದೀನ್ ಔಲಿಯಾ ಸೇರಿದಂತೆ ಹಲವಾರು ಪ್ರಮುಖ ಭಾರತೀಯ ಸ್ಥಳಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ಮಾಹಿತಿಯನ್ನು ತುಫೈಲ್ ಪಾಕಿಸ್ತಾನಿ ಸಂಖ್ಯೆಗಳೊಂದಿಗೆ ಹಂಚಿಕೊಂಡಿದ್ದ. ಪಾಕಿಸ್ತಾನ ನಡೆಸುತ್ತಿರುವ ಈ ಗುಂಪುಗಳ ಲಿಂಕ್ ಅನ್ನು ವಾರಣಾಸಿಯಲ್ಲಿರುವ ಇತರ ಅನೇಕ ಜನರಿಗೆ ಕಳುಹಿಸಿದ್ದ. ತುಫೈಲ್ 600 ಕ್ಕೂ ಹೆಚ್ಚು ಪಾಕಿಸ್ತಾನಿ ಸಂಖ್ಯೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂಬ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Viral News: ಸಿಂದೂ ನದಿ ಜಲ ಒಪ್ಪಂದ ರದ್ದು; ಭಾರತೀಯ ವ್ಯಕ್ತಿಗೆ ಕುಡಿಯಲು ನೀರು ಕೊಡದೆ ಪಾಕಿಸ್ತಾನಿ ಯುವಕರಿಂದ ದೌರ್ಜನ್ಯ
ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ನಫೀಸಾ ಎಂಬ ಮಹಿಳೆಯೊಂದಿಗೆ ಅವರು ಫೇಸ್‌ಬುಕ್ ಮೂಲಕ ಸಂಪರ್ಕದಲ್ಲಿದ್ದ. ಆಕೆಯ ಪತಿ ಪಾಕ್ ಸೇನಾಧಿಕಾರಿ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಮೇ 22, 2025 ರಂದು, ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 05/25, ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತಾ) ಸೆಕ್ಷನ್ 148/152 ರ ಅಡಿಯಲ್ಲಿ ವಾರಣಾಸಿಯ ಆದಂಪುರದಿಂದ ತುಫೈಲ್ ಬಂಧನವಾಗಿದೆ. ಆತನಿಂದ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.