ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ನಿನಗೆ ಯೋಗ್ಯತೆ ಇಲ್ಲ... ಪತ್ರಕರ್ತನಿಗೆ ಟ್ರಂಪ್ ಫುಲ್‌ ಕ್ಲಾಸ್‌

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರ ಭೇಟಿಯ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವರದಿಗಾರನೊಬ್ಬ ಕತಾರಿ ಜೆಟ್ ಬಗ್ಗೆ ಪ್ರಶ್ನಿಸಿದ್ದು ಇದರಿಂದ ಕೋಪಗೊಂಡ ಟ್ರಂಪ್, ವರದಿಗಾರ ದಕ್ಷಿಣ ಆಫ್ರಿಕಾದಲ್ಲಿ ಬಿಳಿ ರೈತರ ವಿರುದ್ಧದ ಹಿಂಸಾಚಾರ ಮತ್ತು ಜನಾಂಗೀಯ ಕಾನೂನುಗಳಂತಹ ಹೆಚ್ಚು ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪತ್ರಕರ್ತನ ಮೇಲೆ ಟ್ರಂಪ್‌ ಫುಲ್‌ ಗರಂ- ವಿಡಿಯೊ ಇಲ್ಲಿದೆ

ವಾಷಿಂಗ್ಟನ್: ಕತಾರಿ ಜೆಟ್ (Qatari Boeing 747,) ಬಗ್ಗೆ ಪ್ರಶ್ನಿಸಿದ ಪತ್ರಕರ್ತನೊಬ್ಬನನ್ನು ಅಮೆರಿಕ ಅಧ್ಯಕ್ಷ (US president) ಡೊನಾಲ್ಡ್ ಟ್ರಂಪ್ (Donald Trump) ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ (South African President) ಅಧ್ಯಕ್ಷ ಸಿರಿಲ್ ರಾಮಾಫೋಸಾ (Cyril Ramaphosa ) ಅವರನ್ನು ಭೇಟಿಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್ ಬಳಿ ಕತಾರಿ ಜೆಟ್ ವಿಮಾನದ ಕುರಿತು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದು, ಇದು ಟ್ರಂಪ್ ಅವರನ್ನು ಕೆರಳುವಂತೆ ಮಾಡಿದೆ. ವರದಿಗಾರನ ಮೇಲೆ ವಾಗ್ದಾಳಿ ನಡೆಸಿದ ಅವರು ನೀವೊಬ್ಬ ಭಯಾನಕ ವರದಿಗಾರ, ನಾನು ನಿಮ್ಮಷ್ಟು ಬುದ್ದಿವಂತನಲ್ಲ ಎಂದರು.

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರ ಭೇಟಿಯ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವರದಿಗಾರನೊಬ್ಬ ಕತಾರಿ ಜೆಟ್ ಬಗ್ಗೆ ಪ್ರಶ್ನಿಸಿದ್ದು ಇದರಿಂದ ಕೋಪಗೊಂಡ ಟ್ರಂಪ್, ವರದಿಗಾರ ದಕ್ಷಿಣ ಆಫ್ರಿಕಾದಲ್ಲಿ ಬಿಳಿ ರೈತರ ವಿರುದ್ಧದ ಹಿಂಸಾಚಾರ ಮತ್ತು ಜನಾಂಗೀಯ ಕಾನೂನುಗಳಂತಹ ಹೆಚ್ಚು ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕತಾರಿ ಬೋಯಿಂಗ್ 747 ವಿಮಾನವನ್ನು ಭವಿಷ್ಯದ ಏರ್ ಫೋರ್ಸ್ ಒನ್ ಆಗಿ ಮಾರ್ಪಡಿಸುವ ಪೆಂಟಗನ್‌ನ ಇತ್ತೀಚಿನ ಘೋಷಣೆಯ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತರಾಟೆಗೆ ತೆಗೆದುಕೊಂಡರು. ಆ ಪತ್ರಕರ್ತ ತನ್ನ ಕೆಲಸವನ್ನು ಮಾಡಲು ಸಾಕಷ್ಟು ಬುದ್ಧಿವಂತನಲ್ಲ. ಈತ ಭಯಾನಕ ವರದಿಗಾರ ಎಂದು ಕರೆದರು. ಪತ್ರಕರ್ತನಿಗೆ ತಿರುಗೇಟು ನೀಡಿದ ಟ್ರಂಪ್, ನೀವು ಏನು ಮಾತನಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿದೆಯೇ.. ನೀವು ಇಲ್ಲಿಂದ ಹೊರಡಬೇಕು… ಇದಕ್ಕೂ ಕತಾರಿ ಜೆಟ್‌ಗೂ ಏನು ಸಂಬಂಧ… ಅವರು ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್‌ಗೆ ಜೆಟ್ ನೀಡುತ್ತಿದ್ದಾರೆ. ಇದು ಒಂದು ದೊಡ್ಡ ವಿಷಯ… ಎಂದು ಹೇಳಿದರು.

ತಮ್ಮ ಮಾತನ್ನು ಮುಂದುವರಿಸುತ್ತಾ ಟ್ರಂಪ್, ನಾವು ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇವೆ. ಎನ್ ಬಿಸಿಯ ನೀವು ಈಗಷ್ಟೇ ಈ ವಿಷಯದಿಂದ ಹೊರಬರಲು ಪ್ರಯತ್ನಿಸುತ್ತಿದೆ. ನೀವು ಒಬ್ಬ ಭಯಾನಕ ವರದಿಗಾರ. ವರದಿಗಾರನಾಗಲು ಬೇಕಾಗಿರುವುದು ನಿಮ್ಮಲ್ಲಿಲ್ಲ. ನೀವು ಸಾಕಷ್ಟು ಬುದ್ಧಿವಂತರಲ್ಲ ಎಂದರು. ಎನ್ ಬಿಸಿ ಮತ್ತು ಅದರ ಮಾತೃ ಕಂಪೆನಿಯ ಸಿಇಒ ಮತ್ತು ಅಧ್ಯಕ್ಷರಾದ ಬ್ರಿಯಾನ್ ರಾಬರ್ಟ್ಸ್ ಅವರ ಕಾರ್ಯಾಚರಣೆಗಳಿಗಾಗಿ ತನಿಖೆ ನಡೆಸಬೇಕು ಎಂದ ಟ್ರಂಪ್, ಇದೊಂದು ದೊಡ್ಡ ಅವಮಾನ ಎಂದು ಹೇಳಿದರು.

ನೀವು ಎನ್ ಬಿಸಿಯಲ್ಲಿರುವ ಸ್ಟುಡಿಯೋಗೆ ಹಿಂತಿರುಗಿ. ಯಾಕೆಂದರೆ ಬ್ರಿಯಾನ್ ರಾಬರ್ಟ್ಸ್ ಮತ್ತು ಆ ಸ್ಥಳವನ್ನು ನಡೆಸುವ ಜನರ ಬಗ್ಗೆ ತನಿಖೆ ಮಾಡಿ. ಆ ನೆಟ್‌ವರ್ಕ್ ಅನ್ನು ನಡೆಸುವವರು ತುಂಬಾ ಭಯಾನಕರು. ಅದರಲ್ಲಿ ನೀವು ನಾಚಿಕೆಗೇಡಿನವರು. ನಿಮ್ಮಿಂದ ಇನ್ನು ಪ್ರಶ್ನೆಗಳು ಬೇಡ ಎಂದು ನೇರವಾಗಿ ಹೇಳಿದರು. ಇನ್ನು ಕತಾರಿ ಜೆಟ್ ವಿಮಾನದ ಬಗ್ಗೆ ಸಮರ್ಥಿಸಿಕೊಳ್ಳುತ್ತಾ, ಯುನೈಟೆಡ್ ಸ್ಟೇಟ್ಸ್ ವಾಯುಪಡೆಗೆ ನೀಡಲಾದ ಜೆಟ್ ಬಗ್ಗೆ ವಿಷಯಕ್ಕೆ ಹೋಗಿದ್ದು ತುಂಬಾ ಒಳ್ಳೆಯ ವಿಷಯ. ಅವರು ಜೆಟ್ ಜೊತೆಗೆ ಯುಎಸ್ ಡಿ 5.1 ಟ್ರಿಲಿಯನ್ ಮೌಲ್ಯದ ಹೂಡಿಕೆಗಳನ್ನು ಸಹ ಮಾಡಿದ್ದಾರೆ ಎಂದರು. ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ವರ್ಗಾವಣೆಯು ಅಮೆರಿಕದ ಎಲ್ಲಾ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿದೆ ಎಂದು ಟ್ರಂಪ್ ದೃಢಪಡಿಸಿದರು.

ಇದನ್ನೂ ಓದಿ: Team india: ನಾಳೆ ಭಾರತ ಟೆಸ್ಟ್‌ ತಂಡದ ನೂತನ ನಾಯಕನ ಆಯ್ಕೆ?

ಕತಾರಿ ಜೆಟ್ ವಿಮಾನದ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ಟ್ರಂಪ್ ಜೆಟ್ ನನಗಾಗಿ ಅಲ್ಲ. ಅದು ದೇಶಕ್ಕಾಗಿ ಬಂದಿರುವ ಉಡುಗೊರೆ. ಬೋಯಿಂಗ್ 747 ಅನ್ನು ಯುನೈಟೆಡ್ ಸ್ಟೇಟ್ಸ್ ನ ರಕ್ಷಣಾ ಇಲಾಖೆಗೆ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ನಾವು ರಕ್ಷಣೆ ಒದಗಿಸಿರುವ ರಾಷ್ಟ್ರವಾದ ಕತಾರ್‌ನಿಂದ ಬಂಡಿರುವ ಉಡುಗೊರೆಯಾಗಿದೆ. ನಮ್ಮ ಹೊಸ ಬೋಯಿಂಗ್‌ಗಳು ಬರುವವರೆಗೆ ಇದನ್ನು ನಮ್ಮ ಸರ್ಕಾರವು ತಾತ್ಕಾಲಿಕ ಏರ್ ಫೋರ್ಸ್ ಒನ್ ಆಗಿ ಬಳಸುತ್ತದೆ ಎಂದು ಟ್ರಂಪ್ ತಿಳಿಸಿದರು.