ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pakistan Tension: ನಮಗೆ ಸಂಬಂಧಪಟ್ಟ ವಿಚಾರವಲ್ಲ... ಭಾರತ-ಪಾಕ್‌ ಘರ್ಷಣೆ ಬಗ್ಗೆ ಜೆ.ಡಿ ವ್ಯಾನ್ಸ್‌ ಮಹತ್ವದ ಹೇಳಿಕೆ

JD Vance's big claim on India-Pakistan: ಭಾರತ-ಪಾಕ್‌ ನಡುವಿನ ಸಂಘರ್ಷ ಇಂದು ನಿನ್ನೆಯದ್ದಲ್ಲ. ಬರೋಬ್ಬರಿ 40 ವರ್ಷಗಳ ಈ ಸಂಘರ್ಷಕ್ಕೂ ಅಮೆರಿಕಕ್ಕೂ ಯಾವುದೇ ಸಂಬಂಧ ಇಲ್ಲ. ಈ ಯುದ್ಧದ ವಾತಾವರಣ ಸಾಧ್ಯವಾದಷ್ಟು ಬೇಗ ಕೊನೆಗೊಂಡು ಶಾಂತಿ ನೆಲೆಸಲಿ ಎಂಬುದು ಅಮೆರಿಕದ ಆಶಯ ಎಂದು ಹೇಳಿದರು.

ಭಾರತ-ಪಾಕ್‌ ಘರ್ಷಣೆ ಬಗ್ಗೆ ಜೆ.ಡಿ ವ್ಯಾನ್ಸ್‌ ಹೇಳಿದ್ದೇನು?

Profile Rakshita Karkera May 9, 2025 3:41 AM

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಪ್ರಕ್ಷುಬ್ದತೆ(India-Pakistan Tension) ಬಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌(JD Vance) ಪ್ರತಿಕ್ರಿಯಿಸಿದ್ದಾರೆ. ಗುರುವಾರ ಈ ಬಗ್ಗೆ ಮಾತನಾಡಿದ ಜೆ.ಡಿ. ವ್ಯಾನ್ಸ್ ಅವರು ಭಾರತ-ಪಾಕಿಸ್ತಾನ ಸಂಘರ್ಷ ನಮಗೆ ಸಂಬಂಧಿಸಿದ ಸಂಗತಿ ಅಲ್ಲ. ಇದು ಇಂದು ನಿನ್ನೆಯ ಸಂಘರ್ಷವಲ್ಲ. ಬರೋಬ್ಬರಿ 40 ವರ್ಷಗಳ ಈ ಸಂಘರ್ಷಕ್ಕೂ ಅಮೆರಿಕಕ್ಕೂ ಯಾವುದೇ ಸಂಬಂಧ ಇಲ್ಲ. ಈ ಯುದ್ಧದ ವಾತಾವರಣ ಸಾಧ್ಯವಾದಷ್ಟು ಬೇಗ ಕೊನೆಗೊಂಡು ಶಾಂತಿ ನೆಲೆಸಲಿ ಎಂಬುದು ಅಮೆರಿಕದ ಆಶಯ ಎಂದು ಹೇಳಿದರು.

ನಾವು ಈ ದೇಶಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮೂಲಭೂತವಾಗಿ, ಭಾರತವು ಪಾಕಿಸ್ತಾನದ ಮೇಲೆ ತನ್ನ ಹಿಡಿತವನ್ನು ಹೊಂದಿದೆ ಮತ್ತು ಪಾಕಿಸ್ತಾನವು ಭಾರತಕ್ಕೆ ಪ್ರತಿಕ್ರಿಯಿಸಿದೆ. ಯುದ್ಧ ಕೈಬಿಟ್ಟು ಶಾಂತಿ ಕಾಪಾಡುವಂತೆ ಉಭಯ ರಾಷ್ಟ್ರಗಳಿಗೆ ನಾವು ಮನವಿ ಮಾಡಬಹುದಷ್ಟೇ. ಅದರ ಹೊರತಾಗಿ ಅಮೆರಿಕ ಏನೂ ಮಾಡಲು ಸಾಧ್ಯವಿಲ್ಲ. ಅಮೆರಿಕ ಈ ಯುದ್ಧದಲ್ಲಿ ಭಾಗಿಯಾಗುವುದಿಲ್ಲ ಎಂದು ವ್ಯಾನ್ಸ್‌ ತಿಳಿಸುವ ಮೂಲಕ ಅಮೆರಿಕದ ಸ್ಪಷ್ಟ ನಿಲುವನ್ನು ಎತ್ತಿ ಹಿಡಿದಿದ್ದಾರೆ.

ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು 'ಭಯಾನಕ' ಎಂದು ಕರೆದ ಒಂದು ದಿನದ ನಂತರ ಜೆ.ಡಿ. ವ್ಯಾನ್ಸ್ ಅವರ ದೊಡ್ಡ ಹೇಳಿಕೆ ಹೊರಬಿದ್ದಿದೆ.

ಈ ಸುದ್ದಿಯನ್ನೂ ಓದಿ: India-Pak Tensions: ಪಾಕ್‌ ಪುಂಡಾಟಕ್ಕೆ ಭಾರತ ಬ್ರೇಕ್‌; ಒಳನುಸುಳುವಿಕೆ ಪ್ರಯತ್ನ ವಿಫಲ