Operation Sindoor: ಯುದ್ದ ಸಮಯದಲ್ಲಿ ಮುಂಜಾಗ್ರತಾ ಕ್ರಮಗಳು ಹೇಗಿರಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಭಾರತ ಪಾಕಿಸ್ತಾನ ನಡುವಿನ ಯುದ್ದದ ಉದ್ವಿಗ್ನತೆ ಹೆಚ್ಚುತ್ತಿದೆ. ದೇಶದಾದ್ಯಂತ ನಾಗರಿಕರ ಜಾಗೃತಿಗಾಗಿ ಮಾಕ್ ಡ್ರಿಲ್‌ಗಳು (Operation Sindoor) ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಅತೀ ಅವಶ್ಯ. ಪ್ರತಿಯೊಬ್ಬರಿಗೂ ರಕ್ಷಣಾ ಕೌಶಲ್ಯ ಇರಲೇ ಬೇಕು. ಮೊದಲೇ ಬೇಕಾದ ಮನೆಯಲ್ಲಿಯೇ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಾಪಾಡಿಕೊಳ್ಳುವುದು ಹೇಗೆ?


ಬೆಂಗಳೂರು: ಭಾರತ ಪಾಕಿಸ್ತಾನ ನಡುವಿನ ಯುದ್ದದ ಉದ್ವಿಗ್ನತೆ ಹೆಚ್ಚುತ್ತಿದೆ. ದೇಶದಾದ್ಯಂತ ನಾಗರಿಕರ ಜಾಗೃತಿಗಾಗಿ ಮಾಕ್ ಡ್ರಿಲ್‌ಗಳು (Operation Sindoor) ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಅತೀ ಅವಶ್ಯ. ಪ್ರತಿಯೊಬ್ಬರಿಗೂ ರಕ್ಷಣಾ ಕೌಶಲ್ಯ ಇರಲೇ ಬೇಕು. ಮೊದಲೇ ಬೇಕಾದ ಮನೆಯಲ್ಲಿಯೇ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಾಪಾಡಿಕೊಳ್ಳುವುದು ಹೇಗೆ ಎಂಬುದು ಸಹಜವಾದ ಚಿಂತನೆಯಾಗಿದೆ. ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತವಾಗುವುದು ಅಥವಾ ಯುದ್ಧದ ಪರಿಸ್ಥಿತಿ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ತುರ್ತು ಕಿಟ್ ಅನ್ನು ಸಿದ್ಧಪಡಿಸುವ ವಿಧಾನವೇನು ಎಂಬುದು ಇಲ್ಲಿದೆ.
ಆಹಾರ ಮತ್ತು ನೀರು:
1.ಶೇಖರಿಸಬಹುದಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಳ್ಳುವುದು. ಆಹಾರ, ಒಣಹಣ್ಣು, ಬಾದಾಮಿ, ಒಣಕಾಯಿ ಮುಂತಾದವುಗಳನ್ನು ಇಡಬಹುದು. ಆಹಾರವನ್ನು ಶೇಖರಿಸಲು ಟಿನ್ನಿಂಗ್, ಒಣಗಿಸುವುದು ಅಥವಾ ಉಪ್ಪಿನಕಾಯಿ ಮಾಡುವ ವಿಧಾನಗಳು ಸಹಾಯಕರವಾಗಿವೆ. ಬಾಟಲ್ ನೀರನ್ನು ಸಾಕಷ್ಟು ಸಂಗ್ರಹಿಸಿಕೊಳ್ಳಿ ಅಥವಾ ನೀರು ಶುದ್ಧೀಕರಣ ಟ್ಯಾಬ್ಲೆಟ್ ಅಥವಾ ಫಿಲ್ಟರ್ ಅನ್ನು ಬಳಸುವ ಬಗ್ಗೆ ಚಿಂತಿಸಬಹುದು.
2.ಹೆಚ್ಚು ಶಕ್ತಿಯುಕ್ತ ಆಹಾರ ಪದಾರ್ಥಗಳಾದ ಹುರಿಗಡಲೆ ಹಿಟ್ಟು, ಕಡಲೆ, ಓಟ್ಸ್ ಇತ್ಯಾದಿಗಳನ್ನು ಇಡಬಹುದು. ಇವು ದೀರ್ಘಾವಧಿಗೆ ಉಳಿಯುತ್ತವೆ ಹಾಗೂ ಕಡಿಮೆ ಅಡುಗೆಗೆ ಬೇಕಾದವು.
ಮೆಡಿಕಲ್ ಕಿಟ್ ಮತ್ತು ಪ್ರಥಮ ಚಿಕಿತ್ಸೆ ಸಾಮಗ್ರಿಗಳು:
1 ಬ್ಯಾಂಡೇಜ್, ಆಂಟಿಸೆಪ್ಟಿಕ್, ನೋವು ಕಡಿಮೆ ಮಾಡುವ ಮಾತ್ರೆ ಮತ್ತು ಅಗತ್ಯವಿರುವ ಇತರೆ ಔಷಧಿಗಳನ್ನು ಇಟ್ಟುಕೊಳ್ಳಬೇಕು.
2.ನಿಯಮಿತವಾಗಿ ಸೇವಿಸುವ ಔಷಧಿಗಳನ್ನು ಬೇಕಾದಷ್ಟು ಇಡಬೇಕು.
3.ಸಣ್ಣ ಗಾಯ ಹಾಗೂ ಅನಾರೋಗ್ಯಗಳಿಗೆ ಚಿಕಿತ್ಸೆ ಕೊಡಿಸುವ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಇಟ್ಟುಕೊಳ್ಳಬೇಕು.
ಈ ಸುದ್ದಿಯನ್ನೂ ಓದಿ: Vastu Tips: ಪಕ್ಷಿಗಳಿಗೆ ಆಹಾರ ನೀಡಿ; ಮನೆಗೆ ಸುಖ ಸಮೃದ್ಧಿಯನ್ನು ಆಹ್ವಾನಿಸಿ
ಸಾಬೂನು, ಶಾಂಪೂ, ಪೇಸ್ಟ್, ಇತರೆ ಅಗತ್ಯ ಸಾನಿಟರಿ ವಸ್ತುಗಳು ಅಗತ್ಯ.
1.ವಿದ್ಯುತ್ ಇಲ್ಲದ ಸಮಯದಲ್ಲಿ ಬೆಳಕಿಗೆ ಟಾರ್ಚ್ ಮತ್ತು ಬ್ಯಾಟರಿ ಅಗತ್ಯ.
2.ಪರಿಸ್ಥಿತಿಯ ಮಾಹಿತಿಯನ್ನು ಪಡೆಯಲು ರೇಡಿಯೋ ಅಗತ್ಯವಾಗಬಹುದು.
- ರಿಂಚು, ಪ್ಲಿಯರ್ಸ್, ಹ್ಯಾಂಮರ್ ಇಂತಹ ಉಪಕರಣಗಳನ್ನು ಬೇಕಾಗಬಹುದು.
4.ಡಿಜಿಟಲ್ ಪಾವತಿಗಳು ಕಾರ್ಯನಿರ್ವಹಿಸದ ಸಂದರ್ಭಗಳಿಗೆ ಕ್ಯಾಶ್ ಸಹ ಬೇಕಾಗಬಹುದು.