ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs PBKS: ಆರಂಭಿಕ ಸ್ಥಾನವನ್ನು ವೈಭವ್‌ ಸೂರ್ಯವಂಶಿಗೆ ಬಿಟ್ಟುಕೊಟ್ಟ ಸಂಜು ಸ್ಯಾಮ್ಸನ್‌!

ಗಾಯದಿಂದ ಗುಣಮುಖರಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪ್ಲೇಯಿಂಗ್‌ XIಗೆ ಮರಳಿದ ಸಂಜು ಸ್ಯಾಮ್ಸನ್‌, ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ತನ್ನ ಆರಂಭಿಕ ಸ್ಥಾನವನ್ನು ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ ಬಿಟ್ಟುಕೊಡುವ ಮೂಲಕ ಹೃದಯವಂತಿಕೆಯನ್ನು ಮೆರೆದಿದ್ದಾರೆ.

ವೈಭವ್‌ಗೆ ಆರಂಭಿಕ ಸ್ಥಾನವನ್ನು ಬಿಟ್ಟು ಹೃದಯವಂತಿಕೆ ಮೆರೆದ ಸಂಜು!

ವೈಭವ್‌ ಸೂರ್ಯವಂಶಿ ಬಗ್ಗೆ ಸಂಜು ಸ್ಯಾಮ್ಸನ್‌ ಹೇಳಿಕೆ.

Profile Ramesh Kote May 18, 2025 7:02 PM

ಜೈಪುರ: ಗಾಯದಿಂದ ಗುಣಮುಖರಾದ ಬಳಿಕ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ನಾಯಕ ಸಂಜು ಸ್ಯಾಮ್ಸನ್‌ (Sanju Samson), ಪಂಜಾಬ್‌ ಕಿಂಗ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2205) ಟೂರ್ನಿಯ 59ನೇ ಪಂದ್ಯದ ಪ್ಲೇಯಿಂಗ್‌ XIಗೆ ಮರಳಿದ್ದಾರೆ. ಈ ಸೀಸನ್‌ನಲ್ಲಿ ಗಾಯದ ಕಾರಣ ಸಂಜು ಏಳು ಪಂದ್ಯಗಳನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ ಅನುಪಸ್ಥಿತಿಯಲ್ಲಿ ರಿಯಾನ್‌ ಪರಾಗ್‌ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಿದ್ದರು. ಆದರೂ ರಾಜಸ್ಥಾನ್‌ ರಾಯಲ್ಸ್‌ ತಂಡ ಈ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಇಲ್ಲಿಯವರೆಗೂ ಆಡಿದ 12 ಪಂದ್ಯಗಳಿಂದ ಗೆದ್ದಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

ಭಾನುವಾರ ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ವೇಳೆ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌, ತಮ್ಮ ಬ್ಯಾಟಿಂಗ್‌ ಕ್ರಮಾಂಕ ಯಾವುದೆಂದು ಬಹಿರಂಗಪಡಿಸಿದರು. ಈ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದರು.

IPL 2025: ʻಕೆಕೆಆರ್‌ನ ಐಪಿಎಲ್‌ ಗೆಲುವಿನ ಶ್ರೇಯ ಶ್ರೇಯಸ್‌ ಅಯ್ಯರ್‌ಗೆ ಸಿಕ್ಕಿರಲಿಲ್ಲʼ-ಸುನೀಲ್‌ ಗವಾಸ್ಕರ್‌!

ಟಾಸ್‌ ವೇಳೆ ನಿಮ್ಮ ಬ್ಯಾಟಿಂಗ್‌ ಕ್ರಮಾಂಕ ಯಾವುದೆಂದು ಕೇಳಿದಾಗ ಸಂಜು ಸ್ಯಾಮ್ಸನ್‌, ನಾನು ಓಪನಿಂಗ್‌ ಬ್ಯಾಟ್‌ ಮಾಡುವುದಿಲ್ಲ ಎಂದು ಹೇಳಿದರು. ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಯಶಸ್ವಿಯಾಗಿರುವ ಸಂಜು ಸ್ಯಾಮ್ಸನ್‌, ಐಪಿಎಲ್‌ ಟೂರ್ನಿಯ ಈ ಸೀಸನ್‌ನ ಆರಂಭಿಕ ಏಳು ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅವರ ನಾಯಕತ್ವದ ಅಡಿಯಲ್ಲಿ ಸಂಜು ಸ್ಯಾಮ್ಸನ್‌, 2024ರ ವರ್ಷದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಕಳೆದ ವರ್ಷದಲ್ಲಿ ಮೂರು ಶತಕಗಳನ್ನು ಸಿಡಿಸಿದ್ದರು.

ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗುವುದಕ್ಕೂ ಮುನ್ನ ಆಡಿದ್ದ ಏಳು ಇನಿಂಗ್ಸ್‌ಗಳಿಂದ ಸಂಜು ಸ್ಯಾಮ್ಸನ್‌, ಒಂದು ಅರ್ಧಶತಕದ ಜೊತೆಗೆ 224 ರನ್‌ಗಳನ್ನು ಸಿಡಿಸಿದ್ದರು. ಪಂಜಾಬ್‌ ಕಿಂಗ್ಸ್‌ ಪಂದ್ಯದ ಟಾಸ್‌ ವೇಳೆ 14 ವರ್ಷದ ವೈಭವ್‌ ಸೂರ್ಯವಂಶಿ ಅವರು ಇನಿಂಗ್ಸ್‌ ಆರಂಭಿಸಲಿದ್ದಾರೆಂದು ಆರ್‌ಆರ್‌ ನಾಯಕ ಸಂಜು ಸ್ಯಾಮ್ಸನ್‌ ರಿವೀಲ್‌ ಮಾಡಿದರು. ಅದರಂತೆ ಸಂಜು ಸ್ಯಾಮ್ಸನ್‌ ಅವರ ಆರಂಭಿಕ ಬ್ಯಾಟಿಂಗ್‌ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ ಆಡಿದ 5 ಇನಿಂಗ್ಸ್‌ಗಳಿಂದ 155 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಒಂದು ಶತಕವನ್ನು ಬಾರಿಸಿದ್ದಾರೆ.

IPL 2025 Final: ಫೈನಲ್‌ ಕೋಲ್ಕತಾದಿಂದ ಸ್ಥಳಾಂತರಿಸುವುದು ಸುಲಭವಿಲ್ಲ; ಗಂಗೂಲಿ

ಅದರಲ್ಲಿಯೂ ವಿಶೇಷವಾಗಿ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕವನ್ನು ಬಾರಿಸಿದರು. ಇದು ಐಪಿಎಲ್‌ ಇತಿಹಾಸದ ಎರಡನೇ ವೇಗದ ಶತಕವನ್ನು ಬಾರಿಸಿದ್ದರು. ಕ್ರಿಸ್‌ ಗೇಲ್‌ ಅವರು ಆರ್‌ಸಿಬಿ ಪರ ಅತ್ಯಂತ ವೇಗದ ಶತಕವನ್ನು ಬಾರಿಸಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕವನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

"ಯಾರಾದರೂ ಒಬ್ಬರು ಅಸಾಧಾರಣ ಪ್ರದರ್ಶನವನ್ನು ತೋರಿದರೆ, ನೀವು ಅವರ ವಯಸನ್ನು ಲೆಕ್ಕಿಸದೆ ಗೌರವಿಸಬೇಕಾಗುತ್ತದೆ. ಹಾಗಾಗಿ ನಾನು ಖಚಿತವಾಗಿ ಗೌರವ ನೀಡಲೇಬೇಕು ಹಾಗೂ ನಾನು ಕೆಳಗಿನ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬರುತ್ತೇನೆ," ಎಂದು ಟಾಸ್‌ ವೇಳೆ ಸಂಜು ಸ್ಯಾಮ್ಸನ್‌ ತಿಳಿಸಿದ್ದಾರೆ.

IPL 2025: 10 ವರ್ಷಗಳ ಬಳಿಕ ಪ್ಲೇ-ಆಫ್‌ ಸ್ಥಾನದ ಮೇಲೆ ಕಣ್ಣಿಟ್ಟ ಪಂಜಾಬ್‌; ಇಂದು ರಾಜಸ್ಥಾನ್‌ ಎದುರಾಳಿ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 219 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ 220 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ಆರ್‌ಆರ್‌ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ, ಕೇವಲ 15 ಎಸೆತಗಳಲ್ಲಿ 40 ರನ್‌ ಸಿಡಿಸಿ ಹರಪ್ರೀತ್‌ ಬ್ರಾರ್‌ಗೆ ವಿಕೆಟ್‌ ಒಪ್ಪಿಸಿದರು.