ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ಪ್ರವಾಸದ ನಿಮಿತ್ತ 10 ಕೆ.ಜಿ ತೂಕ ಇಳಿಸಿಕೊಂಡಿರುವ ಸರ್ಫರಾಝ್‌ ಖಾನ್‌!

ಭಾರತ ತಂಡದ ಮುಂದಿನ ಇಂಗ್ಲೆಂಡ್‌ ಪ್ರವಾಸಕ್ಕಾಗಿ ಮುಂಬೈ ಯುವ ಬ್ಯಾಟರ್‌ ಸರ್ಫರಾಝ್‌ ಖಾನ್‌ ಕಠಣ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅವರು ತಮ್ಮ ದೇಹದ ತೂಕದಲ್ಲಿ 10 ಕೆ.ಜಿಯನ್ನು ಇಳಿಸಿಕೊಂಡಿದ್ದಾರೆ ಹಾಗೂ ಪ್ರತಿ ದಿನ ಎರಡು ಬಾರಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಅವರು ಭಾರತ ಎ ತಂಡದಲ್ಲಿಯೂ ಸ್ಥಾನವನ್ನು ಪಡೆದಿದ್ದಾರೆ.

IND vs ENG: 10 ಕೆ.ಜಿ ತೂಕ ಇಳಿಸಿಕೊಂಡಿರುವ ಸರ್ಫರಾಝ್‌ ಖಾನ್‌!

ಇಂಗ್ಲೆಂಡ್‌ ಪ್ರವಾಸಕ್ಕೆ ಸಜ್ಜಾಗುತ್ತಿರುವ ಸರ್ಫರಾಝ್‌ ಖಾನ್‌.

Profile Ramesh Kote May 18, 2025 5:48 PM

ಮುಂಬೈ: ಮುಂದಿನ ಇಂಗ್ಲೆಂಡ್‌ ಪ್ರವಾಸಕ್ಕಾಗಿ ಭಾರತ ಟೆಸ್ಟ್‌ (Indain Test Team) ತಂಡದ ಯುವ ಬ್ಯಾಟ್ಸ್‌ಮನ್‌ ಸರ್ಫರಾಝ್‌‌ ಖಾನ್ (Sarfaraz Khan) ಕಠಿಣ ಸಿದ್ದತೆಯನ್ನು ನಡೆಸುತ್ತಿದ್ದಾರೆ. ಅವರು ತಮ್ಮ ದೇಹದ ತೂಕದಲ್ಲಿ 10 ಕೆ.ಜಿ ತೂಕವನ್ನು ಇಳಿಸಿಕೊಂಡು, ಕಠಿಣ ಆಹಾರ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. 2024ರಲ್ಲಿ ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸರ್ಫರಾಝ್‌ ಖಾನ್‌, ಇದೀಗ ವಿದೇಶಿ ನೆಲದಲ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನದ ಮೊದಲ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದಾರೆ. ಅಂದ ಹಾಗೆ 27ರ ಪ್ರಾಯದ ಬ್ಯಾಟ್ಸ್‌ಮನ್‌ ಭಾರತ ಎ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಟೆಸ್ಟ್‌ ಸರಣಿಗೂ ಮುನ್ನ ಭಾರತ ಎ ತಂಡ, ಇಂಗ್ಲೆಂಡ್‌ ಲಯನ್ಸ್‌ ವಿರುದ್ದ ಎರಡು ಪಂದ್ಯಗಳನ್ನು ಆಡಲಿದೆ.

ಜೂನ್‌ 20 ರಂದು ಇಂಗ್ಲೆಂಡ್‌ನಲ್ಲಿ ಭಾರತ ತಂಡ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆರಂಭಿಸಲಿದೆ. ಈ ಸರಣಿಗೆ ಇನ್ನೂ ಭಾರತ ತಂಡವನ್ನು ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಇನ್ನೂ ಪ್ರಕಟಿಸಿಲ್ಲ. ಇದೀಗ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಸರ್ಫರಾಝ್‌ ಖಾನ್‌, ನಂತರ ಭಾರತ ಟೆಸ್ಟ್‌ ತಂಡದಲ್ಲಿಯೂ ಸ್ಥಾನವನ್ನು ಉಳಿಸಿಕೊಳ್ಳುವ ಭರವಸೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಠಿಣ ಆಹಾರ ಪದ್ದತಿ, ಫಿಟ್‌ನೆಸ್‌ ಹಾಗೂ ಅಭ್ಯಾಸ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಅವರು ತಮ್ಮ ದೇಹದ ತೂಕದಲ್ಲಿ 10 ಕೆ.ಜಿಯನ್ನು ಇಳಿಸಿಕೊಂಡಿದ್ದಾರೆ ಹಾಗೂ ತರಕಾರಿ ಮತ್ತು ಚಿಕನ್‌ ಸೇರಿದಂತೆ ಕಠಿಣ ಆಹಾರ ಪದ್ದತಿಯನ್ನು ಪಾಲಿಸುತ್ತಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.

ಟೆಸ್ಟ್‌ಗೆ ವಿದಾಯಕ್ಕೂ ವಿರಾಟ್‌ ಕೊಹ್ಲಿ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ರವಿ ಶಾಸ್ತ್ರಿ!

ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಸರ್ಫರಾಝ್‌ ಖಾನ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಇದಕ್ಕೂ ಮುನ್ನ ನ್ಯೂಜಿಲೆಂಡ್‌ ವಿರುದ್ದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ನಲ್ಲಿ ಸರ್ಫರಾಝ್‌ ಕೊನೆಯ ಪಂದ್ಯವನ್ನು ಆಡಿದ್ದರು. ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ಮುಂಬೈ ಬ್ಯಾಟ್ಸ್‌ಮನ್‌ ಆಡಿದ 6 ಪಂದ್ಯಗಳಿಂದ 37.10 ಸರಾಸರಿಯಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕಗಳು ಸೇರಿದಂತೆ 371 ರನ್‌ಗಳನ್ನು ಕಲೆ ಹಾಕಿದ್ದಾರೆ.

ಕಳೆದ ವರ್ಷ ನ್ಯೂಜಿಲೆಂಡ್‌ ವಿರುದ್ದದ ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಸರ್ಫರಾಝ್‌ ಖಾನ್‌ ತಮ್ಮ ವೃತ್ತಿ ಜೀವನದ ಮೊದಲನೇ ಶತಕವನ್ನು ಬಾರಿಸಿದ್ದರು. ಅವರು 150 ರನ್‌ಗಳನ್ನು ಬಾರಿಸಿದ್ದರು. ಆದರೂ ಈ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಇದಕ್ಕೂ ಮುನ್ನ ಅವರು ಇರಾನಿ ಕಪ್‌ ಟೂರ್ನಿಯ 286 ಎಸೆತಗಳಲ್ಲಿ ಅಜೇಯ 222 ರನ್‌ಗಳನ್ನು ಕಲೆ ಹಾಕಿದ್ದರು.

IND vs ENG: ದ್ರಾವಿಡ್‌, ಸೆಹ್ವಾಗ್‌ ದಾಖಲೆ ಮುರಿಯುವ ಸನಿಹದಲ್ಲಿ ಯಶಸ್ವಿ ಜೈಸ್ವಾಲ್‌!

ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಟೆಸ್ಟ್‌ ತಂಡದ ಪ್ಲೇಯಿಂಗ್‌ XIನಲ್ಲಿ ಇವರಿಬ್ಬರ ಸ್ಥಾನಗಳನ್ನು ತುಂಬಲು ಯುವ ಬ್ಯಾಟ್ಸ್‌ಮನ್‌ಗಳು ಎದುರು ನೋಡುತ್ತಿದ್ದಾರೆ. ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ, ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಸರ್ಫರಾಝ್‌ ಖಾನ್‌ ಉತ್ಸುಕರಾಗಿದ್ದಾರೆ.