ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಾವಿನಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಶಿಕ್ಷಕ ಎಂ.ವಿ.ಪಿಳ್ಳಸ್ವಾಮಿ

ಚಿಕ್ಕಬಳ್ಳಾಪುರ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ವೈದ್ಯಕೀಯ ಸಿಬ್ಬಂದಿ ಮೃತರ ಮನೆಗೆ ಆಗಮಿಸಿ ಕುಟುಂಬದವರು ನಡೆಸಿಕೊಟ್ಟ ಮರಣೋತ್ತರ ಸಂಪ್ರದಾಯದ ನಂತರ ದೇಹವನ್ನು ದಾನ ಪಡೆದರು. ಪಿಳ್ಳ ಸ್ವಾಮಿರವರು ತಮ್ಮ ವೃತ್ತಿ ಜೀವನದಲ್ಲಿ ಅಪಾರ ಶಿಷ್ಯ ವೃಂದವನ್ನು ಹಾಗೂ ಸ್ನೇಹ ವರ್ಗವನ್ನು ಹೊಂದಿದ್ದು ಅವರು ಸ್ವಯಂ ಕಲಾವಿದರು ಸಹ ಆಗಿದ್ದರು.

Profile Ashok Nayak Apr 28, 2025 9:44 PM

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಡಾವಣೆಯ ನಿವಾಸಿ ನಿವೃತ್ತ ಶಿಕ್ಷಕ ಎಂ.ವಿ. ಪಿಳ್ಳಸ್ವಾಮಿ (೭೮) ರವರು ಅನಾರೋಗ್ಯದ ನಿಮಿತ್ತ ಮೃತರಾಗಿದ್ದು ತಮ್ಮ ಇಡೀ ದೇಹ ವನ್ನು ಆಸ್ಪತ್ರೆಯೊಂದಕ್ಕೆ ದಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೃತ ನಿವೃತ್ತ ಶಿಕ್ಷಕ  ಎಂವಿ ಪಿಳ್ಳಸ್ವಾಮಿ ರವರಿಗೆ ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿ  ಹಾಗೂ ಅಪಾರ ಬಂದು ವರ್ಗವನ್ನು ಹಾಗೂ ಸ್ನೇಹಿತರನ್ನು ಅಗಲಿದ್ದಾರೆ. ಚಿಕ್ಕಬಳ್ಳಾಪುರ ಇತಿಹಾಸದಲ್ಲಿ ವ್ಯಕ್ತಿ ಯೊಬ್ಬರು ತಮ್ಮ ಸಾವಿನ ನಂತರ ತಮ್ಮ ಇಡೀ ದೇಹವನ್ನು ದಾನ ಮಾಡಿದ ಪ್ರಕರಣ ಇದೆ ಮೊದಲು ಹಾಗು ಅಪರೂಪದ್ದು ಆಗಿದ್ದು ತಮ್ಮ ದೇಹ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಶೋಧ ನೆಗೆ ಅನುಕೂಲ ಆಗಬೇಕು ಆ ರೀತಿ ನನ್ನ ದೇಹ ಸಾವಿನ ನಂತರವೂ ಸಾರ್ಥಕತೆ, ಪಡೆದುಕೊಳ್ಳ ಬೇಕು ಎಂಬ ಸದಾಶಿಯವನ್ನು ಈ ಶಿಕ್ಷಕರು ಹೊಂದಿರುವುದು ಅವರ ಮರಣ ನಂತರ ತಿಳಿದು ಬಂದಿದ್ದು ದೇಹವನ್ನು ಚಿಕ್ಕಬಳ್ಳಾಪುರ ವೈದ್ಯಕೀಯ ಶಿಕ್ಷಣ ಮಹಾವಿದ್ಯಾ ಲಯಕ್ಕೆ ಅವರು ದಾನ ಮಾಡಿದ್ದಾರೆ.

ಇದನ್ನೂ ಓದಿ: Chikkaballapur News: ಶಾಸಕ ಸುಬ್ಬಾರೆಡ್ಡಿ ವಿರುದ್ಧ ರೈತರ ಪ್ರತಿಭಟನೆ

ಚಿಕ್ಕಬಳ್ಳಾಪುರ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ವೈದ್ಯಕೀಯ ಸಿಬ್ಬಂದಿ ಮೃತರ ಮನೆಗೆ ಆಗಮಿಸಿ ಕುಟುಂಬದವರು ನಡೆಸಿಕೊಟ್ಟ ಮರಣೋತ್ತರ ಸಂಪ್ರದಾಯದ ನಂತರ ದೇಹವನ್ನು ದಾನ ಪಡೆದರು. ಪಿಳ್ಳ ಸ್ವಾಮಿರವರು ತಮ್ಮ ವೃತ್ತಿ ಜೀವನದಲ್ಲಿ ಅಪಾರ ಶಿಷ್ಯ ವೃಂದವನ್ನು ಹಾಗೂ ಸ್ನೇಹ ವರ್ಗವನ್ನು ಹೊಂದಿದ್ದು ಅವರು ಸ್ವಯಂ ಕಲಾವಿದರು ಸಹ ಆಗಿದ್ದರು.

ಇವರ ನಿಧನಕ್ಕೆ ಸಾಹಿತಿ ಟಿಎಸ್ ನಾಗೇಂದ್ರ ಬಾಬು ಪತ್ರಕರ್ತ ಎಂ ಕೃಷ್ಣಪ್ಪ ಜಮೀನ್ದಾರ್ ಕೆಂಪ್ ರೆಡ್ಡಿ ನಗರಸಭೆ ಮಾಜಿ ಸದಸ್ಯ ಹಾಗೂ ಅಭಿಲಾಶ್ ಟೇಲರ್ ಮಲ್ಲಿಕಾ ಲಕ್ಷ್ಮಿಪತಿ ನಿವೃತ್ತ ಪ್ರಾಂಶುಪಾಲ ಡಿ ಎಂ ಶ್ರೀನಿವಾಸಲು ನಿವೃತ್ತ ಶಿಕ್ಷಕ ಬಿ ಎಂ ರಾಮಕೃಷ್ಣ ಮತ್ತೊಬ್ಬ ನಿವೃತ್ತ ಶಿಕ್ಷಕ ಪರಶಿವಮೂರ್ತಿ ಒಳಗೊಂಡAತೆ ಮತ್ತಿತ್ತರು ತೀವ್ರ ಕಂಬನಿ ಮಿಡಿದಿದ್ದು ಸಾವಿನ ನಂತರವೂ ಸಹ ಸಮಾಜಕ್ಕೆ ಅನುಕೂಲ ಆಗಬೇಕು ಎಂಬ ಮೃತರ ಮನೋಭಾವಕ್ಕೆ ತುಂಬಾ ಗೌರವ ಸಲ್ಲಿಸಿದರು.

೨೮ಸಿಬಿಪಿಎಂ೬: ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಡಾವಣೆಯ ನಿವಾಸಿ ನಿವೃತ್ತ ಶಿಕ್ಷಕ ಎಂ.ವಿ. ಪಿಳ್ಳಸ್ವಾಮಿ (೭೮) ರವರು ಅನಾರೋಗ್ಯದ ನಿಮಿತ್ತ ಮೃತರಾಗಿದ್ದು ತಮ್ಮ ಇಡೀ ದೇಹವನ್ನು ಆಸ್ಪತ್ರೆ ಯೊಂದಕ್ಕೆ ದಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.