Chikkaballapur News: 15ನೇ ವಾರ್ಷಿಕೋತ್ಸವ: ಶ್ರೀ ವರಸಿದ್ದಿ ವಿನಾಯಕನಿಗೆ ಬೆಳ್ಳಿ ರಥೋತ್ಸವ
ಪಟ್ಟಣದ 9 ನೇ ವಾರ್ಡಿನ ವರಸಿದ್ದಿ ವಿನಾಯಕ 15 ನೇ ವಾರ್ಷಿಕೋತ್ಸವ ಅಂಗವಾಗಿ ಗಣೇಶ ಮೂರ್ತಿ ಯನ್ನು ಶ್ರೀ ವರಸಿದ್ದಿ ವಿನಾಯಕ ಸೇವಾ ಟ್ರಸ್ಟ್ ಸದಸ್ಯರು ದೇವಾಲಯದಿಂದ ಹೊರ ತಂದು ಸರ್ವಾ ಲಂಕೃತ ಬೆಳ್ಳಿ ರಥದಲ್ಲಿ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಸಿರು ಪಟಾಕಿ ಸಿಡಿ ಮದ್ದಿನ ಸುರಿಮಳೆಗೈಯ್ಯಲಾಯಿತು


ಬಾಗೇಪಲ್ಲಿ: ಪಟ್ಟಣದ 9 ನೇ ವಾರ್ಡಿನ ವರಸಿದ್ದಿ ವಿನಾಯಕ 15 ನೇ ವಾರ್ಷಿಕೋತ್ಸವ ಅಂಗವಾಗಿ ಗಣೇಶ ಮೂರ್ತಿಯನ್ನು ಶ್ರೀ ವರಸಿದ್ದಿ ವಿನಾಯಕ ಸೇವಾ ಟ್ರಸ್ಟ್ ಸದಸ್ಯರು ದೇವಾಲಯದಿಂದ ಹೊರ ತಂದು ಸರ್ವಾಲಂಕೃತ ಬೆಳ್ಳಿ ರಥದಲ್ಲಿ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಸಿರು ಪಟಾಕಿ ಸಿಡಿ ಮದ್ದಿನ ಸುರಿಮಳೆಗೈಯ್ಯಲಾಯಿತು. ಸಂಜೆ 7 ಗಂಟೆಯಲ್ಲಿ ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳಾದ ಕೀಲು ಕುದುರೆ, ಡೊಳ್ಳುಕುಣಿತ, ಚಂಡೆವಾದ್ಯ, ಕೋಲಾಟ, ಗಾರುಡಿ ಗೊಂಬೆಗಳ ನೃತ್ಯ, ನಾಸಿಕ್ ಡೋಲ್, ಮಂಗಳ ವಾದ್ಯ ಹಾಗೂ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನದ ನಡುವೆ ಸ್ವಾಮಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಇದನ್ನೂ ಓದಿ: Chikkanayakanahalli News: ಒಳ ಮೀಸಲಾತಿ ಸಮೀಕ್ಷೆ ಕಾಲಾವಕಾಶ ಹೆಚ್ಚಿಸಿ : ಛಲವಾದಿ ಮಹಾಸಭಾ ಒತ್ತಾಯ
ಈ ಸಂದರ್ಭದಲ್ಲಿ ಶ್ರೀ ವರಸಿದ್ದಿ ವಿನಾಯಕ ಸೇವಾ ಸಮಿತಿ ಸದಸ್ಯರಾದ ಎ.ಜಿ.ಸುಧಾಕರ್, ಅಪ್ಪಯ್ಯ ಬಾಬು, ವೆಂಕಟೇಶ್, ಗೋಪಾಲಪ್ಪ, ರಮೇಶ್, ಆದಿ ನಾರಾಯಣಪ್ಪ, ಶ್ರೀನಿವಾಸ ಮಂಜು ನಾಥ, ಪಿ.ಎಸ್. ಪ್ರಕಾಶ್ ಹಾಗೂ ಊರಿನ ಪ್ರಮುಖರು ಸಾರ್ವಜನಿಕರು ಹಾಜರಿದ್ದರು.