NWKRTC Bus: ಡಕೋಟ ಬಸ್ ಭಾಗ್ಯ; ಹುಬ್ಬಳ್ಳಿ- ಬಾಗಲಕೋಟೆ ಮಾರ್ಗದ ಪ್ರಯಾಣಿಕರ ಪರದಾಟ
NWKRTC Bus: ಹಲವು ವರ್ಷಗಳ ಹಳೆಯ ಬಸ್‌ಗಳನ್ನು ರಸ್ತೆಗಿಳಿಸುವುದಲ್ಲದೇ, ಅಗತ್ಯ ರಿಪೇರಿ ಕಿಟ್‌ಗಳು ಇಲ್ಲದ ಕಾರಣ ಬಸ್ ಸಿಬ್ಬಂದಿ ಮಾತ್ರವಲ್ಲದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.


ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಸಾರಿಗೆ ಬಸ್ ಹತ್ತುವ ಮುನ್ನ ಹೋಗುವ ಪ್ರಯಾಣಿಕರು ಒಮ್ಮೆ ಯೋಚಿಸಬೇಕಾಗಿದೆ. ಏಕೆಂದರೆ ಜನರು ಪ್ರಯಾಣಿಸುವ ಬಸ್ ಯಾವಾಗ ಹೋಗಿ ತಲುಪುತ್ತೆ ಎನ್ನುವುದಕ್ಕೆ ಗ್ಯಾರಂಟಿ ಇರುವುದಿಲ್ಲ. ಇದಕ್ಕೆ ತಾಜಾ ಉದಹಾರಣೆ ಎಂಬಂತೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ (NWKRTC Bus) ಮಾರ್ಗ ಮಧ್ಯೆ ನಿಂತಿದ್ದರಿಂದ ಗಂಟೆಗಟ್ಟಲೇ ಪ್ರಯಾಣಿಕರು ಪರದಾಡಿದ ಘಟನೆ ಬುಧವಾರ ನಡೆದಿದೆ.
ಹುಬ್ಬಳ್ಳಿಯಯಿಂದ ಬಾಗಲಕೋಟೆಗೆ ಹೋಗುವ ಬಸ್ ಮಾರ್ಗ ಮಧ್ಯೆ, ನರಗುಂದ ತಾಲೂಕಿನ ಕೊಣ್ಣೂರು ಬಳಿ ಪಂಕ್ಚರ್ ಆಗಿದೆ. ಹೀಗಾಗಿ ಪಂಕ್ಚರ್ ಹಾಕಿಸಲು ಚಾಲಕ ಮುಂದಾದಾಗ ಬಸ್‌ನಲ್ಲಿ ಜ್ಯಾಕ್ ಇರಲಿಲ್ಲ. ಹೀಗಾಗಿ ಚಾಲಕ, ರಸ್ತೆಯಲ್ಲಿ ಬರುವ, ಹೋಗುವ ಲಾರಿ, ಬಸ್‌ಗಳನ್ನು ನಿಲ್ಲಿಸಿ ಜ್ಯಾಕ್ ನೀಡುವಂತೆ ಕೇಳಿದ್ದಾರೆ. ಸುಮಾರು ಹೊತ್ತಿನ ಬಳಿಕ ಲಾರಿ ಚಾಲಕರೊಬ್ಬರಿಂದ ಜ್ಯಾಕ್ ಪಡೆದು ಪಂಕ್ಚರ್ ಹಾಕಿಸಿ, ಮುಂದೆ ಸಾಗಿದ್ದಾರೆ.
ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಮೂರೂವರೆ ಗಂಟೆಗಳ ಪ್ರಯಾಣ ಇದ್ದು, ಬಸ್ ಪಂಕ್ಚರ್ ಆಗಿದ್ದರಿಂದ ಆಗಿ 45 ನಿಮಿಷಗಳ ಕಾಲ ರಸ್ತೆ ಮಧ್ಯೆ ನಿಲ್ಲುವ ಪರಿಸ್ಥಿತಿ ಎದುರಾಯಿತು. ಹಲವು ವರ್ಷಗಳ ಹಳೆಯ ಬಸ್‌ಗಳನ್ನು ರಸ್ತೆಗಿಳಿಸುವುದಲ್ಲದೇ, ಅಗತ್ಯ ರಿಪೇರಿ ಕಿಟ್‌ಗಳು ಇಲ್ಲದ ಕಾರಣ ಬಸ್ ಸಿಬ್ಬಂದಿ ಮಾತ್ರವಲ್ಲದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಇತ್ತ ಗಮನ ಹರಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | CM Siddaramaiah: ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಎಂದು ಹೇಳಿ ಯುವ ಜನತೆಗೆ ಮೋದಿ ವಂಚನೆ: ಸಿಎಂ