ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೈಬರ್ ಸೆಂಟರ್ ದೋಷ : ಪರೀಕ್ಷಾರ್ಥಿ ಆತಂಕ ದೂರ ಮಾಡಿದ ಶಾಸಕ ಸಿಬಿಎಸ್

ಸೈಬರ್ ಸೆಂಟರ್ ಮಾಡಿದ ಎಡವಟ್ಟಿಗೆ ಸಿಇಟಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಪ್ರವೇಶಪತ್ರ ದೊರಕದೆ ಆತಂಕ ಸ್ಥಿತಿ ಎದುರಾಗಿತ್ತು. ವಿದ್ಯಾರ್ಥಿನಿಯ ಪರೀಕ್ಷಾ ಶುಲ್ಕ ಪಾವತಿಯ ಗೊಂದಲದಿಂದ ಉಂಟಾದ ಸಮಸ್ಯೆಯನ್ನು ಶಾಸಕ ಸಿ.ಬಿ.ಸುರೇಶಬಾಬು ಪರಿಹರಿಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಮತಿ ದೊರಕಿಸಿ ಕೊಡಲು ಯಶಸ್ವಿಯಾಗಿದ್ದಾರೆ

ಪರೀಕ್ಷಾರ್ಥಿ ಆತಂಕ ದೂರ ಮಾಡಿದ ಶಾಸಕ ಸಿಬಿಎಸ್

Profile Ashok Nayak Apr 16, 2025 9:33 PM

ಚಿಕ್ಕನಾಯಕನಹಳ್ಳಿ: ಪಟ್ಟಣದ ಸೈಬರ್ ಸೆಂಟರ್ ಮಾಡಿದ ಎಡವಟ್ಟಿಗೆ ಸಿಇಟಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಪ್ರವೇಶಪತ್ರ ದೊರಕದೆ ಆತಂಕ ಸ್ಥಿತಿ ಎದುರಾಗಿತ್ತು. ವಿದ್ಯಾರ್ಥಿ ನಿಯ ಪರೀಕ್ಷಾ ಶುಲ್ಕ ಪಾವತಿಯ ಗೊಂದಲದಿಂದ ಉಂಟಾದ ಸಮಸ್ಯೆಯನ್ನು ಶಾಸಕ ಸಿ.ಬಿ.ಸುರೇಶಬಾಬು ಪರಿಹರಿಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಮತಿ ದೊರಕಿಸಿ ಕೊಡಲು ಯಶಸ್ವಿಯಾಗಿದ್ದಾರೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಿಇಟಿ ತೆಗೆದುಕೊಳ್ಳುವ ಉದ್ದೇಶದಿಂದ ಕೆ.ಬಿ.ಕ್ರಾಸ್‌ನಲ್ಲಿರುವ ಶ್ರೀಮದ್ ರಂಭಾಪುರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪುಷ್ಪಾ ನಿಗದಿತ ದಿನಾಂಕದೊಳಗೆ ದ್ವಿತೀಯ ಪಿಯುಸಿ ಪ್ರವೇಶಾತಿ, ಇತರೆ ಮಾಹಿತಿಗಳು ಒಳಗೊಂಡಂತೆ ನೀಡಿ ನಗರದ ನೆಹರು ವೃತ್ತದ ಬಳಿಯಿರುವ ಸೈಬರ್ ಸೆಂಟರ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದೇ ಸೆಂಟರ್ ನಲ್ಲಿ ಶುಲ್ಕ ಪಾವತಿಸಿದ್ದರು.

ಇದನ್ನೂ ಓದಿ: Tumkur (Chikkanayakanahalli) News: ಮೊದಲೇ ಗುರುತಿಸಿದ್ದ ಸ್ಥಳದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು

ಪ್ರವೇಶ ಪತ್ರ ಬಿಡುಗಡೆ ಮಾಡಿದ ದಿನಾಂಕದಿಂದಲೂ ಪ್ರವೇಶ ಪತ್ರದ ಡೌನ್‌ಲೋಡ್‌ಗಾಗಿ ವಿದ್ಯಾರ್ಥಿನಿ ಪ್ರಯತ್ನಿಸಿದಾಗ ತಾಂತ್ರಿಕ ಸಮಸ್ಯೆ ಉಂಟಾಗಿ ಲಾಗಿನ್ ಆಗಲಿಲ್ಲ. ಆತಂಕಗೊಂಡ ವಿದ್ಯಾರ್ಥಿನಿ ಇತರೆ ಸೈಬರ್ ಸೆಂಟರ್‌ನಲ್ಲಿ ಪ್ರಯತ್ನಿಸಿದಾಗ ಶುಲ್ಕ ಪಾವತಿಯಾಗಿರುವುದಿಲ್ಲ ಎಂದು ತಿಳಿದುಬರುತ್ತದೆ. ನೊಂದಣಿ ಮಾಡಿದ ಸೈಬರ್ ಸೆಂಟರ್‌ಗೆ ಪೋಷಕರು ಏ.11 ರಂದು ಪುನಃ ತೆರಳಿ ವಿಚಾರಿಸಿದಾಗ ನಮ್ಮ ಕಡೆಯಿಂದ ಯಾವುದೇ ತೊಂದರೆ ಇರುವುದಿಲ್ಲ. ನೀವು ಬೆಂಗಳೂರಿನ ಸಿಇಟಿ ಸೆಲ್ ಸಂಪರ್ಕಿಸಬೇಕು ಎಂದು ತಿಳಿಸಿ ಪೋಷಕರನ್ನು ಸಾಗ ಹಾಕುತ್ತಾನೆ. ಮುಂದಿನ ಮೂರು ದಿನ ಸರಕಾರಿ ರಜೆ ಇರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿನಿ ಆತಂಕಗೊಂಡಿದ್ದರು.

ವಿದ್ಯಾರ್ಥಿನಿಯ ಮುಖದಲ್ಲಿ ಮಂದಹಾಸ ಮೂಡಿಸಿದ ಶಾಸಕ ಸಿಬಿಎಸ್

ಶಾಸಕರ ನೇತೃತ್ವದಲ್ಲಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ನಡೆಸುತ್ತಿದ್ದ ಉಚಿತ ಸಿಇಟಿ ನೀಟ್ ತರಬೇತಿ ಯಲ್ಲಿ ವಿದ್ಯಾರ್ಥಿನಿ ಪುಷ್ಪಾ ಕಲಿಯುತ್ತಿದ್ದರು. ವಿದ್ಯಾರ್ಥಿನಿ ಮತ್ತು ಪಾಲಕರು ಶಾಸಕ ಸಿ.ಬಿ.ಸುರೇಶಬಾಬು ಅವರನ್ನು ಸಂಪರ್ಕಿಸಿ ತಾಂತ್ರಿಕ ಸಮಸ್ಯೆ ಕುರತು ಮಾಹಿತಿ ನೀಡಿದರು. ಶಾಸಕ ಸಿ.ಬಿ.ಸುರೇಶಬಾಬು ಅವರು ತಕ್ಷಣ ದಾಖಲೆಗಳನ್ನು ಪರಿಶೀಲಿಸಿ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಕಳುಹಿಸಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. ಸಿಇಟಿ ಸೆಲ್ ನಿರ್ದೇಶಕರೊಂದಿಗೆ ಚರ್ಚಿಸಿ ವಿದ್ಯಾರ್ಥಿನಿ ಸಿಇಟಿ ಪರೀಕ್ಷೆ ಬರೆಯಲು ಪ್ರವೇಶ ಪತ್ರವನ್ನು ದೊರಕಿಸಿಕೊಟ್ಟು ವಿದ್ಯಾರ್ಥಿಯ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. ವಿದ್ಯಾರ್ಥಿನಿ ಪುಷ್ಪಾ ಶಾಸಕರಿಗೆ ಧನ್ಯವಾದ ಅರ್ಪಿಸಿ ಭಾವುಕರಾದರು.