Book Release: ನಟ, ಸಾಹಿತಿ ಸುಚೇಂದ್ರ ಪ್ರಸಾದರಿಂದ ಕರ್ಮಫಲ ಕಾದಂಬರಿ ಬಿಡುಗಡೆ
ಹೊಸಪೇಟೆಯ ಯಾಜಿ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಸತೀಶ್ ಹೆಗಡೆ ಹೊನ್ನಾವರ ಅನಿಲಗೋಡಿನ ಬರೆದಿರುವ ಕರ್ಮಫಲ ಕಾದಂಬರಿಯನ್ನು ನಟ, ಸಾಹಿತಿ ಸುಚೇಂದ್ರ ಪ್ರಸಾದ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಸಹಿತವಾದ ಸಾಹಿತ್ಯದ ಸಾಂಗತ್ಯ ಅಗತ್ಯ, ಸೀತಲ ತಾಟಸ್ಯ ಇಂದು ಬಾಧಿಸುತ್ತಿದೆ ಎಂದರು.


ಶಿರಸಿ: ಹೊಸಪೇಟೆಯ ಯಾಜಿ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಸತೀಶ್ ಹೆಗಡೆ ಹೊನ್ನಾವರ ಅನಿಲಗೋಡಿನ ಬರೆದಿರುವ ಕರ್ಮಫಲ ಕಾದಂಬರಿಯನ್ನು ನಟ, ಸಾಹಿತಿ ಸುಚೇಂದ್ರ ಪ್ರಸಾದ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಸಹಿತವಾದ ಸಾಹಿತ್ಯದ ಸಾಂಗತ್ಯ ಅಗತ್ಯ, ಸೀತಲ ತಾಟಸ್ಯ ಇಂದು ಬಾಧಿಸುತ್ತಿದೆ ಎಂದರು.
ಕೃತಿಕಾರ ಸತೀಶ್ ಹೆಗಡೆ ಮಾತನಾಡಿ, ನಾನು ಕಂಡ, ಕಾಡಿದ ವಸ್ತು, ಚಿತ್ರಗಳನ್ನು ನನಗನಿಸಿದಂತೆ ಅಕ್ಷರ ರೂಪ ಕೊಟ್ಟಿದ್ದೇನೆ. ಜಿಲ್ಲೆಯ ಅಂಗಳದ, ನೋಟ, ಕಾಡಿನ ಶಕ್ತ, ನದಿ ತಟಗಳ ಬಿಕ್ಕಿನ ನೀರು ಇವೆಲ್ಲವು ಇದರಲ್ಲಿ ಮೂಡಿವೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ರವೀಂದ್ರ ಭಟ್, ವಿಮರ್ಷಕ ಸುಬ್ರಾಯ ಮತ್ತಿಹಳ್ಳಿ, ಸವಿತಾ ಯಾಜಿ, ತೋಟಗಾರಿಕಾ ಇಲಾಖೆಯ ಡಿಪಿ ಸತೀಶ್, ಎಸ್ ಎಸ್ ಭಟ್ ಇದ್ದರು.