Sirsi News: ವಿಶ್ವಶಾಂತಿ ಸರಣಿಯ ಹತ್ತನೇ ಆವೃತ್ತಿಯ ವಿಶ್ವಾಭಿಗಮನಂ ಯಕ್ಷ ರೂಪಕ ಪ್ರದರ್ಶನ
ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು, ಒಂದು ಕಾರ್ಯಕ್ರಮದ ಸಂಘಟನೆಗೆ ಎಷ್ಟೆಲ್ಲ ಕಷ್ಟ ಇದೆ ಎಂಬುದರ ಅರಿವಿದೆ. ಇಂಥ ಕಾರ್ಯಕ್ರಮಗಳಿಗೆ ಬೆನ್ನೆಲಬಾಗಿ ಎಲ್ಲರೂ ಜೊತೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದಕ್ಕಿಂತ ನಗರದಲ್ಲಿ ಕಾರ್ಯಕ್ರಮ ಮಾಡುವುದು ಕೊಂಚ ಸುಲಭ ಎಂದರು

ಶಿರಸಿ: ಚಂಡೆ ನುಡಿಸುವ ಮೂಲಕ ವಾನಳ್ಳಿಯಲ್ಲಿ ಸುರ ಸಾನಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಿರಸಿ: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವ ಸದಾ ಪ್ರೋತ್ಸಾಹ ನೀಡುವ ವಾತಾವರಣ ಹೆಚ್ಚಬೇಕು. ಇದರಿಂದ ಮಾನಸಿಕ ನೆಮ್ಮದಿ ಸಾಧ್ಯವಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಲೂಕಿನ ವಾನಳ್ಳಿಯಲ್ಲಿ ಅವರು ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ, ಬೆಂಗಳೂರಿನ ಅವಿನಾಶಿ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡ 'ಸುರ ಸಾನಿಕ' ವೇಣು ವಾದನ, ಯಕ್ಷ ರೂಪಕ, ಸನ್ಮಾನ ಕಾರ್ಯಕ್ರಮಕ್ಕೆ ಚಂಡೆ ನುಡಿಸಿ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ದಿ ಅದರ ಅವಧಿಯಲ್ಲಿ ಅದಾಗೇ ಆಗುತ್ತದೆ. ಹಾಗೂ ಅಭಿವೃದ್ಧಿ ಎಂದರೆ ಸೌಲಭ್ಯ, ಆರ್ಥಿಕ ಅಭಿವೃದ್ಧಿ ಒಂದಷ್ಟೇ ಅಲ್ಲ. ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಶ್ರದ್ದೆ ಕೂಡ ಬೆಳಸಿಕೊಳ್ಳ ಬೇಕು. ಅದರಿಂದ ನೆಮ್ಮದಿ ಸಾಧ್ಯ ಎಂದರು.
ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು, ಒಂದು ಕಾರ್ಯಕ್ರಮದ ಸಂಘಟನೆಗೆ ಎಷ್ಟೆಲ್ಲ ಕಷ್ಟ ಇದೆ ಎಂಬುದರ ಅರಿವಿದೆ. ಇಂಥ ಕಾರ್ಯಕ್ರಮಗಳಿಗೆ ಬೆನ್ನೆಲಬಾಗಿ ಎಲ್ಲರೂ ಜೊತೆಯಾಗ ಬೇಕು. ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದಕ್ಕಿಂತ ನಗರದಲ್ಲಿ ಕಾರ್ಯ ಕ್ರಮ ಮಾಡುವುದು ಕೊಂಚ ಸುಲಭ ಎಂದರು.
ಇದನ್ನೂ ಓದಿ: Sirsi News: ಕಾಂಗ್ರೆಸ್ ವಿರೋಧಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಚಾಲನೆ
ಸಮ್ಮಾನಿತ ಪ್ರಕಾಶ ಹೆಗಡೆ ಕಲ್ಲಾರೆಮನೆ, ಯಾರೂ ಪ್ರಶಸ್ತಿ ಹಿಂದೆ ಹೋಗದೇ ಅದು ಬಂದಾಗ ವಿನಂಮ್ರವಾಗಿ ಸ್ವೀಕರಿಸಬೇಕು ಎಂದು ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದರು.
ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕಲೆಯ ಮೂಲಕ ಒಗ್ಗೂಡಲು ಸಾಧ್ಯ. ಅದೇ ವಿಶ್ವಶಾಂತಿಯ ಮೂಲ. ಕಲ್ಲಾರೆಮನೆ ಪ್ರಕಾಶ ಹೆಗಡೆ ಅವರು ನಮ್ಮ ಜಿಲ್ಲೆಗೆ ಅವರು ನಮ್ಮವರು. ಆದರೆ, ಅವರ ಸಾಧನೆ, ಪ್ರಸಿದ್ದಿ, ಸಾಧನೆ ನೋಡಲು ಬೆಂಗಳೂರಲ್ಲಿ ಗೊತ್ತಾಗುತ್ತದೆ ಎಂದರು.
ವಾನಳ್ಳಿ ಸೊಸೈಟಿ ಅಧ್ಯಕ್ಷ ಎಂ.ಎ.ಹೆಗಡೆ ಕಾನಮುಷ್ಕಿ ಮಾತನಾಡಿದರು. ಸುಮಾ ಹೆಗಡೆ ಸಂಗಡಿ ಗರು ಪ್ರಾರ್ಥಿಸಿದರು. ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಸಮ್ಮಾನ ಪತ್ರ ವಾಚಿಸಿದರು. ಪ್ರೋ.ರಾಘವೇಂದ್ರ ಜಾಜಿಗುಡ್ಡೆ ನಿರ್ವಹಿಸಿದರು.
ಇದಕ್ಕೂ ಮುನ್ನ ಪ್ರಕಾಶ ಹೆಗಡೆ ಕಲ್ಲಾರೆಮನೆ ಅವರ ಕೊಳಲು, ಕಾರ್ತಿಕ ಭಟ್ಟ ಅವರ ತಬಲಾ ದಲ್ಲಿ ನಡೆದ ವೇಣು ವಾದನ ಮುದ ನೀಡಿತು. ಬಳಿಕ ನಡೆದ ವಿಶ್ವಶಾಂತಿ ಸರಣಿಯ ಹತ್ತನೇ ಕಲಾ ಕುಸುಮ ವಿಶ್ವಾಭಿಗಮನಂ ಯಕ್ಷ ರೂಪಕವು ಗೋಕುಲ ನಿರ್ಗಮನ ಸನ್ನಿವೇಶ ಕಟ್ಟಿಕೊಟ್ಟಿತು. ಕು. ತುಳಸಿ ಹೆಗಡೆ ಪ್ರಸ್ತುತಿಯ ರೂಪಕಕ್ಕೆ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಿದರು. ಉದಯ ಪೂಜಾರ ಧ್ವನಿ ಬೆಳಕಿನ ಸಂಯೋಜನೆ ಮಾಡಿದ್ದರು.
ವೇಣು ವಾದಲ ಕಲ್ಲಾರೆಮನೆ ಅವರನ್ನು ಸಂಸದ ಕಾಗೇರಿ ಗೌರವಿಸಿದರು.
ವಿಶ್ವಶಾಂತಿ ಸರಣಿಯ ಹತ್ತನೇ ಆವೃತ್ತಿಯ ವಿಶ್ವಾಭಿಗಮನಂ ಯಕ್ಷ ರೂಪಕ ಪ್ರದರ್ಶನ ಕಂಡಿತು.