ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basangouda Patil Yatnal: ಶಾಸಕ ಯತ್ನಾಳ ಹತ್ಯೆಗೆ ಭಾರೀ ಸಂಚು...! ಸ್ಫೋಟಕ ಆಡಿಯೋದಲ್ಲೇನಿದೆ?

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಮುಸ್ಲಿಂ ಯುವಕನೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ಮಹಮ್ಮದ್​ ಪೈಗಂಬರ್​ ವಿರುದ್ದ ಮಾತನಾಡಿದ್ದ ಯತ್ನಾಳ್‌ ಕುರಿತು ಕಿಡಿಗೇಡಿ ಯುವಕನೊಬ್ಬ ಆಡಿಯೋ ಹರಿಬಿಟ್ಟಿದ್ದು. “ಈ ಬಾರಿ ಯತ್ನಾಳ್​ಗೆ ಫೈನಲ್ ಡೇ, ಆತ ಅರೆಸ್ಟ್​ ಆಗಬೇಕು ಅಥವಾ ಆತನ ತಲೆಯನ್ನು ಕತ್ತರಿಸಬೇಕು ಎಂಬ ಪ್ರಚೋದನಕಾರಿ ಆಡಿಯೋವೊಂದನ್ನು ಹರಿಬಿಟ್ಟಿದ್ದಾನೆ.

ಶಾಸಕ ಯತ್ನಾಳ ಹತ್ಯೆಗೆ ಭಾರೀ ಸಂಚು...!

Profile Vishakha Bhat Apr 11, 2025 1:26 PM

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ (Basangouda Patil Yatnal) ಮುಸ್ಲಿಂ ಯುವಕನೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ಮಹಮ್ಮದ್​ ಪೈಗಂಬರ್​ ವಿರುದ್ದ ಮಾತನಾಡಿದ್ದ ಯತ್ನಾಳ್‌ ಕುರಿತು ಕಿಡಿಗೇಡಿ ಯುವಕನೊಬ್ಬ ಆಡಿಯೋ ಹರಿಬಿಟ್ಟಿದ್ದು. “ಈ ಬಾರಿ ಯತ್ನಾಳ್​ಗೆ ಫೈನಲ್ ಡೇ, ಆತ ಅರೆಸ್ಟ್​ ಆಗಬೇಕು ಅಥವಾ ಆತನ ತಲೆಯನ್ನು ಕತ್ತರಿಸಬೇಕು ಎಂಬ ಪ್ರಚೋದನಕಾರಿ ಆಡಿಯೋವೊಂದನ್ನು ಹರಿಬಿಟ್ಟಿದ್ದಾನೆ. ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಗ್ಗಟ್ಟಾಗಿ ಎಂದು ಆಡಿಯೋದಲ್ಲಿ ಯುವಕ ಹೇಳಿದ್ದಾನೆ. ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಮಾತನಾಡಿದ್ದರು .

ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್‌ ಅವರು ಮುಸ್ಲಿಮರ ವಿರುದ್ಧ ಹಾಗೂ ಮೊಹಮ್ಮದ್‌ ಪೈಗಂಬರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಗೋಲ್​ಗುಂಬಜ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಹಿನ್ನೆಲೆ ಯತ್ನಾಳ್‌ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ ಸ್ಫೋಟಕ ಆಡಿಯೋ ವೈರಲ್‌ ಆಗಿದೆ.

ಆಡಿಯೋದಲ್ಲೇನಿದೆ?

ಮುಸ್ಲಿಂ ಯುವಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ವಿಜಯಪುರದಲ್ಲಿ ನಡೆದ NMC ಸಭೆಯಲ್ಲಿ ಮುಸ್ಲಿಂ ಮುಖಂಡರು, ಉಲ್ಮಾಗಳು ಸೇರಿ ಸಭೆ ಮಾಡಲಾಗಿದೆ. ಪೈಗಂಬರ್ ವಿರುದ್ದ ಮಾತನಾಡಿದ ಯತ್ನಳ್ ಮನೆಗೆ ರ್ಯಾಲಿ ಮಾಡಬೇಕು. ಅದಕ್ಕಾಗಿ ಜನರನ್ನು ಸೇರಿಸಬೇಕು. ಅಂಬೆಡ್ಕರ್​ ಸರ್ಕಲ್​ನಿಂದ ಹೊರಡುವ ರ‍್ಯಾಲಿ, ಅಲ್ಲಿಂದ ಯತ್ನಾಳ್ ಮನೆ ಕಡೆಗೆ ನುಗ್ಗಬೇಕು. ಈ ರ‍್ಯಾಲಿಗೆ ಬರುವವರು ನಿಮ್ಮ ಗೆಳಯರನ್ನು ಕರೆದುಕೊಂಡು ಬನ್ನಿ ಎಂದು ಕರೆ ನೀಡಲಾಗಿದೆ. ಅಷ್ಟೇ ಅಲ್ಲದೆ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಅದೇ ಯತ್ನಾಳ್‌ ಅವರ ಕೊನೆ ದಿನ ಆಗಲಿದೆ. ಈ ಬಾರಿ ನಾವೆಲ್ಲಾ ನಿರ್ಧಾರ ಮಾಡಿದ್ದಾಗಿದೆ. ಆತನ ಕೊನೇ ದಿನ ಅಂದೇ ಎಂದು ಯುವಕ ಹೇಳಿದ್ದಾನೆ.



ಈ ಸುದ್ದಿಯನ್ನೂ ಓದಿ:Basanagouda Patil Yatnal: ಸತ್ಯವಂತರಿಗಿದು ಕಾಲವಲ್ಲ, ದುಷ್ಟರಿಗೆ ಸುಭಿಕ್ಷಕಾಲ: ಉಚ್ಚಾಟನೆ ಬಗ್ಗೆ ಯತ್ನಾಳ್‌ ಕಿಡಿ

ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದ್ರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಬೇರ್ಪಡಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದ ಬಳಿ ಬನ್ನಿ. ನಮ್ಮ ಒಗ್ಗಟನ್ನು ನಾವು ತೋರಿಸಬೇಕು ಎಂದು ಯುವಕ ಮಾತನಾಡಿದ್ದಾನೆ. ಸದ್ಯ ಆಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಶಾಸಕ ಹತ್ಯೆಗೆ ಸಂಚು ರೂಪಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ವೈರಲ್‌ ಆದ ಆಡಿಯೋ ವಿಜಯಪುರ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.