ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CBSE 12th Exam Result: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ, ವಿದ್ಯಾರ್ಥಿನಿಯರೇ ಮೇಲುಗೈ, ಬೆಂಗಳೂರಿಗೆ 4ನೇ ಸ್ಥಾನ

CBSE 12th Exam Result: ದೇಶಾದ್ಯಂತ ಕಳೆದ ಫೆಬ್ರವರಿ 15ರಿಂದ 4 ಏಪ್ರಿಲ್‌ವರೆಗೆ CBSE 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. 2025ನೇ ಸಾಲಿನಲ್ಲಿ 16 ಲಕ್ಷದ 92 ಸಾವಿರದ 794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 14 ಲಕ್ಷದ 96 ಸಾವಿರದ 307 ಮಕ್ಕಳು 12ನೇ ತರಗತಿ ಪಾಸ್ ಮಾಡಿದ್ದಾರೆ.

ಸಿಬಿಎಸ್‌ಇ 12ನೇ ತರಗತಿ  ಫಲಿತಾಂಶ, ವಿದ್ಯಾರ್ಥಿನಿಯರೇ ಮೇಲುಗೈ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 13, 2025 1:10 PM

ನವದೆಹಲಿ: 2025ನೇ ಸಾಲಿನ CBSE (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) 12ನೇ ತರಗತಿಯ ಫಲಿತಾಂಶ (CBSE 12th Exam Result) ಪ್ರಕಟವಾಗಿದೆ. ಈ ಬಾರಿ ಶೇಕಡಾ 88.39ರಷ್ಟು ಉತ್ತೀರ್ಣದ ಫಲಿತಾಂಶ ದೊರೆತಿದೆ. ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 91ರಷ್ಟು ಮಂದಿ ಪಾಸ್‌ ಆಗಿದ್ದಾರೆ. ದೇಶದ ನಗರಗಳಲ್ಲಿ ಬೆಂಗಳೂರು (Bengaluru) ಶೇಕಡಾ 95.95ರಷ್ಟು ಫಲಿತಾಂಶ ಪಡೆಯುವ ಮೂಲಕ 4ನೇ ಸ್ಥಾನದಲ್ಲಿ ಗಮನ ಸೆಳೆದಿದೆ.

ದೇಶಾದ್ಯಂತ ಕಳೆದ ಫೆಬ್ರವರಿ 15ರಿಂದ 4 ಏಪ್ರಿಲ್‌ವರೆಗೆ CBSE 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. 2025ನೇ ಸಾಲಿನಲ್ಲಿ 16 ಲಕ್ಷದ 92 ಸಾವಿರದ 794 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 14 ಲಕ್ಷದ 96 ಸಾವಿರದ 307 ಮಕ್ಕಳು 12ನೇ ತರಗತಿ ಪಾಸ್ ಮಾಡಿದ್ದಾರೆ. CBSE 12ನೇ ತರಗತಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇಕಡಾ 0.41ರಷ್ಟು ಹೆಚ್ಚು ಫಲಿತಾಂಶ ಬಂದಿದೆ.

ಈ ಬಾರಿ CBSE 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.60ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜಯವಾಡ ಇಡೀ ದೇಶದಲ್ಲೇ ನಂ.1 ಸ್ಥಾನ ಪಡೆದಿದೆ. ಶೇ.79.53ರಷ್ಟು ಫಲಿತಾಂಶ ಪಡೆದ ಪ್ರಯಾಗ್‌ರಾಜ್‌ ಕೊನೆಯ ಸ್ಥಾನದಲ್ಲಿದೆ.

ಯಾವ ನಗರ ಎಷ್ಟನೇ ಸ್ಥಾನ?

ವಿಜಯವಾಡ 99.60

ತಿರುವನಂತಪುರ 99.32

ಚೆನ್ನೈ 97.39

ಬೆಂಗಳೂರು 95.95

ದೆಹಲಿ ಪಶ್ಚಿಮ 95.37

ದೆಹಲಿ ಪೂರ್ವ 95.06

ಚಂಡೀಗಢ 91.61

ಪಂಚಕುಲ 91.17

ಪುಣೆ 90.93

ಅಜ್ಮೀರ್ 90.40

ಭುವನೇಶ್ವರ 83.64

ಗುವಾಹಟಿ 83.62

ಡೆಹ್ರಾಡೂನ್ 83.45

ಪಾಟ್ನಾ 82.86

ಭೋಪಾಲ್ 82.46

ನೋಯ್ಡಾ 81.29

ಪ್ರಯಾಗ್ ರಾಜ್ 79.53

CBSE ರಿಸಲ್ಟ್ ಹೀಗೆ ನೋಡಿ

CBSE 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ನೋಡಲು ಹಲವು ರೀತಿಯ ಅವಕಾಶಗಳಿವೆ. ಆನ್‌ಲೈನ್‌, ಮೊಬೈಲ್ ಆ್ಯಪ್, SMS ಹಾಗೂ IVRS ಮೂಲಕ ನಿಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಆನ್‌ಲೈನ್ ಮೂಲಕ ಡಿಜಿಟಲ್ ಸಹಿ ಇರುವ ಮಾರ್ಕ್ಸ್‌ ಕಾರ್ಡ್‌ಗಳನ್ನು ಮಾಡಿಕೊಳ್ಳುವ ಅವಕಾಶವಿದೆ.

  1. CBSE ವೆಬ್‌ಸೈಟ್‌: cbse.gov.in
  2. CBSE ರಿಸಲ್ಟ್ಸ್ ಪೋರ್ಟಲ್: results.cbse.nic.in
  3. ಡಿಜಿಲಾಕರ್ ಪೋರ್ಟಲ್: results.digilocker.gov.in
  4. UMANG ಆ್ಯಪ್‌ನಲ್ಲೂ ಫಲಿತಾಂಶ ವೀಕ್ಷಿಸಬಹುದು
  5. SMS: CBSE10 <roll number> ಅಥವಾ CBSE12 <roll number> to 7738299899
  6. IVRS : STD ಕೋಡ್ ಸಹಿತ 24300699 ಕರೆ ಮಾಡಿ

ಇದನ್ನೂ ಓದಿ: CBSE Syllabus: ರಾಜ್ಯ ಪಠ್ಯಕ್ರಮದ 6-10ನೇ ತರಗತಿಗಳಿಗೆ ಗಣಿತ, ವಿಜ್ಞಾನ ವಿಷಯಗಳಲ್ಲಿ ಸಿಬಿಎಸ್‌ಇ ಸಿಲಬಸ್ ಅಳವಡಿಕೆ