Virat Kohli: ವಿರಾಟ್ ಕೊಹ್ಲಿ ನಿವೃತ್ತಿಗೆ ಬಾಲಿವುಡ್ ಮಂದಿ ಬೇಸರ; ಏನ್ ಹೇಳಿದ್ರು ಗೊತ್ತಾ?
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕಿಟ್‌ಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಕೊಹ್ಲಿಯವರ (Virat Kohli) ಟೆಸ್ಟ್ ಕ್ರಿಕೆಟ್ ಸಾಧನೆ ಕುರಿತು ಅಭಿನಂದನೆ ತಿಳಿಸಿದ್ದರು.


ಮುಂಬೈ: ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕಿಟ್‌ಗೆ ಗುಡ್‌ಬೈ ಹೇಳಿದ ಬೆನ್ನಲ್ಲೇ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಕೊಹ್ಲಿಯವರ (Virat Kohli) ಟೆಸ್ಟ್ ಕ್ರಿಕೆಟ್ ಸಾಧನೆ ಕುರಿತು ಅಭಿನಂದನೆ ತಿಳಿಸಿದ್ದರು. ಇದೀಗ ಬಾಲಿವುಡ್ (Bollywood) ತಾರೆಯರಾದಂತಹ ಸುನೀಲ್ ಶೆಟ್ಟಿ, ವರುಣ್ ಧವನ್, ವಿಕ್ಕಿ ಕೌಶಲ್, ನೇಹಾ ದುಫಿಯಾ,ಅಂಗದ್ ಬೇಡಿ ಸೇರಿದಂತೆ ಇನ್ನೂ ಅನೇಕರು ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯವರ ಸಾಧನೆ ಕುರಿತು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ರೋಹಿತ್ ಶರ್ಮಾ(Rohit Sharma)ಬೆನ್ನಲ್ಲೇ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ(Virat Kohli Test Cricket retirement) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ "ನಾನು ಈ ಸ್ವರೂಪದಿಂದ ಹಿಂದೆ ಸರಿಯುತ್ತಿರುವುದು ಅಷ್ಟು ಸುಲಭವಲ್ಲ ಆದರೆ ನನಗೆ ಇದು ಸರಿ ಅನಿಸುತ್ತಿದೆ. ನಾನು ಟೆಸ್ಟ್ ಕ್ರಿಕೆಟ್‌ಗೆ ಸಾಧ್ಯವಾದಷ್ಟೂ ಆಡಿದ್ದೇನೆ, ಅದು ಕೂಡ ನನ್ನ ನೀರೀಕ್ಷೆಗೂ ಮೀರಿ ಯಶಸ್ಸನ್ನು ಹಿಂದಿರುಗಿಸಿದೆ." ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.ಈ ಹಿನ್ನಲೆಯಲ್ಲಿ ಹಲವು ಕ್ರಿಕೆಟ್ ದಿಗ್ಗಜರು ಕೊಹ್ಲಿಯವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡಿದ ಅನನ್ಯ ಸಾಧನೆಗೆ ಅಭಿನಂದನೆಗಳನ್ನು ತಿಳಿಸಿ ಮುಂದಿನ ನಿವೃತ್ತಿ ಜೀವನಕ್ಕೆ ಶುಭಕೋರಿದ್ದರು,ಇದೀಗ ಬಾಲಿವುಡ್ ತಾರೆಯರು(Bollywood) ಸಹ ಕೊಹ್ಲಿಯವರ ನಿವೃತ್ತಿ ಕುರಿತು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಕೊಹ್ಲಿಯವರನ್ನು ಹೊಗಳಿ ಗುಣಗಾನ ಮಾಡಿರುವ ಸುನೀಲ್ ಶೆಟ್ಟಿ "ಕೊಹ್ಲಿಯವರೇ ನೀವು ಟೆಸ್ಟ್ ಕ್ರಿಕೆಟ್ ಆಡಿ ರನ್ ಗಳಿಸಿ ತಂಡಕ್ಕೆ ಜಯ ಮಾತ್ರ ತಂದುಕೊಟ್ಟಿರುವುದು ಮಾತ್ರವಲ್ಲದೆ ಅದರಲ್ಲಿ ಜೀವಿಸಿದ್ದೀರಿ ಮತ್ತು ಅದನ್ನು ಗೌರವಿಸಿದ್ದೀರಿ ಅನೇಕ ಯುವ ಕ್ರಿಕೆಟ್ ತಾರೆಗಳಿಗೆ ಪ್ರೇರಣೆಯಾಗುವ ಮೂಲಕ ಅದೆಷ್ಟೋ ಅಸಂಖ್ಯಾತ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದೀರಿ ಎಂದು ಬರೆದಿದ್ದಾರೆ. ವಿರಾಟ್ ಕೊಹ್ಲಿ ಅವರ ಆಪ್ತವಲಯದಲ್ಲಿ ಆಗಾಗ ಕಾಣಿಸಿಕೊಳ್ಳುವ ವಿಕ್ಕಿ ಕೌಶಲ್‌ರವರು ಕೊಹ್ಲಿಯವರ ಟೆಸ್ಟ್ ಕ್ರಿಕೆಟ್‌ನ ದೀರ್ಘಾವಧಿ ಪಯಣ ಸ್ಪೂರ್ತಿದಾಯಕ, ಮತ್ತು ಜಗತ್ತಿನ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ನೀವು ನಿಮ್ಮದೇ ರೀತಿಯಲ್ಲಿ ಛಾಪು ಮೂಡಿಸಿದ್ದೀರಿ,ನಿಜವಾಗಿಯೂ ಟೆಸ್ಟ್ ಕ್ರಿಕೆಟ್ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೆ ಎಂದು ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಡಿದ್ದಾರೆ.
ವರುಣ್ ದವನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಶೇರ್ ಮಾಡುವುದರ ಮೂಲಕ ವಿರಾಟ್ ಕೊಹ್ಲಿಯವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಭಾರತೀಯ ಟೆಸ್ಟ್ ಕ್ರಿಕೆಟ್ ಸ್ವರೂಪಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: IND vs AUS: ʻಸ್ಯಾಮ್ ಕೋನ್‌ಸ್ಟಸ್ ಭುಜಕ್ಕೆ ಗುದ್ದಿದ ವಿರಾಟ್ʼ-ಅಮಾನತು ಭೀತಿಯಲ್ಲಿ ಕಿಂಗ್ ಕೊಹ್ಲಿ!
ನೇಹಾ ದೂಫಿಯಾ ಮತ್ತು ಅವರ ಪತಿ ನಟ ಅಂಗದ್ ಬೇಡಿ ದಂಪತಿಗಳು ಕೂಡ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು ನೇಹಾ ಅವರು ಕೊಹ್ಲಿಯವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರ ವೈಯಕ್ತಿಕ ಎಂದರೆ, ಇನ್ನೂ ಪತಿ ಅಂಗದ್ ಬೇಡಿ ಕೊಹ್ಲಿಯವರ ಟೆಸ್ಟ್ ಕ್ರಿಕೆಟ್ ಸಾಧನೆಯನ್ನು"ನೆನಪುಗಳು, ಕಣ್ಣೀರು, ಬೆವರು ಮತ್ತು ರಕ್ತ" ಎಂದು ವಿರಾಟ್ ಕೊಹ್ಲಿಯವರಿಗಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನಗೆ ಈ ಪೋಸ್ಟ್ ಹಂಚಿಕೊಳ್ಳುವಾಗ ನನ್ನ ಮನಸ್ಸು ಭಾವನಾತ್ಮಕವಾಗಿ ಭಾರ ಆಗಿದೆ.ನೀವು ನಿಮ್ಮ ಪರಂಪರೆಯನ್ನು ಮುಂದುವರೆಸಲು ಯಾರಿಗೂ ಸಾಧ್ಯವಾಗದಷ್ಟು ಎತ್ತರಕ್ಕೆ ಬೆಳೆದ್ದೀರಿ, ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡನ್ನೂ ಹತ್ತಿರದಿಂದ ನೋಡುವ ಒಂದು ಸುವರ್ಣಾವಕಾಶ ನನಗೆ ಸಿಕ್ಕಿತು.ನಾನು ನಿಮ್ಮ ಆಟವನ್ನು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ನೋಡುವುದಾಗಿ ನನ್ನ ಪತ್ನಿ ನೇಹಾಗೆ ಭರವಸೆ ನೀಡಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ ಹಾಗಾಗಿ ನಿಮ್ಮ ಜೆರ್ಸಿ ನಂಬರ್ 18ನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.