GT vs KKR: 90 ರನ್ಗೆ ಔಟ್ ಆಗಿ ವಿರಾಟ್ ಕೊಹ್ಲಿಯ ಅಗತ್ಯ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್!
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಜಿಟಿ ಪರ ನಾಯಕ ಶುಭಮನ್ ಗಿಲ್ ಅದ್ಭುತ ಬ್ಯಾಟ್ ಮಾಡಿ 55 ಎಸೆತಗಳಲ್ಲಿ 90 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ 90 ರನ್ಗಳಿಗೆ ವಿಕೆಟ್ ಒಪ್ಪಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯ ಅಗತ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ.



198 ರನ್ ಕಲೆ ಹಾಕಿದ ಗುಜರಾತ್ ಟೈಟನ್ಸ್
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಗುಜರಾತ್ ಟೈಟನ್ಸ್ ತಂಡ, ಶುಭಮನ್ ಗಿಲ್ (90) ಹಾಗೂ ಸಾಯಿ ಸುದರ್ಶನ್ (52) ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 198 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ಗೆ 199 ರನ್ಗಳ ಗುರಿಯನ್ನು ನೀಡಿತು.

ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್
ಗುಜರಾತ್ ಟೈಟನ್ಸ್ ಪರ ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಸ್ಪೋಟಕ ಬ್ಯಾಟ್ ಮಾಡಿದರು. ಅಲ್ಲದೆ ಸಾಯಿ ಸುದರ್ಶನ್ ಜೊತೆ ಮುರಿಯದ ಮೊದಲನೇ ವಿಕೆಟ್ಗೆ 114 ರನ್ಗಳ ಜೊತೆಯಾಟವನ್ನು ಆಡಿದ ಶುಭಮನ್ ಗಿಲ್, ತಾನು ಎದುರಿಸಿದ 55 ಎಸೆತಗಳಲ್ಲಿ 10 ಬೌಂಡರಿಗಳು ಹಾಗೂ ಮೂರು ಸಿಕ್ಸರ್ಗಳ ಸಹಾಯದಿಂದ 90 ರನ್ ಗಳಿಸಿದರು.

ಎರಡನೇ ಬಾರಿ 90 ಕ್ಕೆ ಔಟ್ ಆದ ಗಿಲ್
ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಕೇವಲ 10 ರನ್ಗಳಿಂದ ಶುಭಮನ್ ಗಿಲ್ ಶತಕವನ್ನು ವಂಚಿತರಾದರು. ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಶುಭಮನ್ ಗಿಲ್ 90 ರನ್ಗೆ ವಿಕೆಟ್ ಒಪ್ಪಿಸಿರುವುದು ಇದು ಎರಡನೇ ಬಾರಿ. 2022ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗಿಲ್ 96 ಕ್ಕೆ ವಿಕೆಟ್ ಒಪ್ಪಿಸಿದ್ದರು.

ಕೊಹ್ಲಿಯ ಅಗತ್ಯ ದಾಖಲೆ ಸರಿಗಟ್ಟಿದ ಗಿಲ್
ಶುಭಮನ್ ಗಿಲ್ ಐಪಿಎಲ್ ಟೂರ್ನಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ 90 ರನ್ಗಳಿಗೆ ವಿಕೆಟ್ ಒಪ್ಪಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಋತುರಾಜ್ ಗಾಯಕ್ವಾಡ್ (3), ವಿರಾಟ್ ಕೊಹ್ಲಿ (2) ಹಾಗೂ ಕೆಎಲ್ ರಾಹುಲ್ (2) ಕೂಡ ಇದ್ದಾರೆ. ಇದೀಗ ಶುಭಮನ್ ಗಿಲ್, ಕೊಹ್ಲಿ ಹಾಗೂ ರಾಹುಲ್ ಅವರ ಅಗತ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ಋತುರಾಜ್ ಗಾಯಕ್ವಾಡ್ಗೆ ಅಗ್ರ ಸ್ಥಾನ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಮೂರು ಬಾರಿ 90ರಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಈ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಮಾಜಿ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಪಂಜಾಬ್ ಕಿಂಗ್ಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ತಲಾ ಮೂರು ಬಾರಿ 90ರಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಶತಕಗಳ ವಂಚಿತರಾಗಿದ್ದಾರೆ.

305 ರನ್ ಕಲೆ ಹಾಕಿರುವ ಗಿಲ್
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 8 ಪಂದ್ಯಗಳಿಂದ 43.57ರ ಸರಾಸರಿಯಲ್ಲಿ 305 ರನ್ಗಳನ್ನು ಬಾರಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಏಳನೇ ಸ್ಥಾನವನ್ನು ಅಲಂಕರಿಸಿದ್ದಾರೆ.