ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DA Hike: ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ ಶೇ.1.50 ಏರಿಕೆ; ಸಿಎಸ್‌ ಷಡಾಕ್ಷರಿ ಸ್ವಾಗತ

ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸಹ ಡಿಎ ಹೆಚ್ಚಳ (DA Hike) ವಿಚಾರದಲ್ಲಿ ಈಗಿರುವ ನಿಯಮ ಪಾಲನೆ ಮಾಡುವುದು ಉತ್ತಮ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರವು ಡಿಎ ಏರಿಕೆ ಮಾಡುವ ಸಂಪ್ರದಾಯವನ್ನು ಸದ್ಯ ಪಾಲನೆ ಮಾಡುತ್ತಿದೆ.

ಸರಕಾರಿ ನೌಕರರ ತುಟ್ಟಿ ಭತ್ಯೆ ಶೇ.1.50 ಏರಿಕೆ; ಸಿಎಸ್‌ ಷಡಾಕ್ಷರಿ ಸ್ವಾಗತ

ಹರೀಶ್‌ ಕೇರ ಹರೀಶ್‌ ಕೇರ May 5, 2025 4:48 PM

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ (Government employees) ನೀಡಲಾಗುತ್ತಿರುವ ತುಟ್ಟಿ ಭತ್ಯೆಯನ್ನು (Dearness allowance) ಶೇ.1.50ರಷ್ಟು ಹೆಚ್ಚಿಸಿ (DA Hike) ಆದೇಶ ನೀಡಲಾಗಿದೆ. ಸರಕಾರಿ ನೌಕರರಿಗೆ 2025ರ ಜನವರಿ 1ರಿಂದಲೇ ಅನ್ವಯ ಆಗುವಂತೆ ಶೇ. 1.50 ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಪ್ರಕಟಣೆ ನೀಡಿದ್ದು, ಮುಖ್ಯಮಂತ್ರಿಗಳ (CM Siddaramaiah) ಈ ಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌ ಷಡಾಕ್ಷರಿ (CS Shadakshari) ಸ್ವಾಗತಿಸಿದ್ದಾರೆ.

ಸರಕಾರಿ ನೌಕರರಿಗೆ 2025ರ ಜನವರಿ 1ರಿಂದಲೇ ಅನ್ವಯ ಆಗುವಂತೆ ಶೇ. 1.50 ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿದ್ದು, ಆ ಮೂಲಕ ತುಟ್ಟಿ ಭತ್ಯೆಯು 10.75 ಶೇಕಡದಿಂದ 12.25 ಶೇಕಡಕ್ಕೆ ಏರಿದೆ ಎಂದು ತಿಳಿಸಲಾಗಿದೆ. ಇದು ಈ ವರ್ಷ ಜನವರಿಯಿಂದಲೇ ಪೂರ್ವಾನ್ವಯ ಆಗಲಿದೆ.

ತುಟ್ಟಿಭತ್ಯೆ ಹೆಚ್ಚಿಸಿ ಅನುಮೋದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಹಾಗೂ ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳಗೆ ಸಮಸ್ತ ರಾಜ್ಯ ಸರಕಾರಿ ನೌಕರರ ಪರವಾಗಿ ಧನ್ಯವಾದಗಳನ್ನು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್‌ ಷಡಾಕ್ಷರಿ ಅವರು ತಿಳಿಸಿದ್ದಾರೆ.

ಮಾರ್ಚ್ 28ರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜನವರಿ 1, 2025 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ನೀಡಲು ಅನುಮೋದನೆ ನೀಡಲಾಗಿತ್ತು. ಕೇಂದ್ರ ಸರ್ಕಾರ ತುಟ್ಟಿಭತ್ಯೆ ಏರಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರ ಡಿಎ ಏರಿಕೆ ಮಾಡುತ್ತದೆ. ಇದನ್ನು ಆಸಷ್ಟು ಬೇಗನೆ ಮಾಡಬೇಕು ಎಂದು ಷಡಾಕ್ಷರಿ ಸರಕಾರವನ್ನು ಈ ಹಿಂದೆ ಒತ್ತಾಯಿಸಿ ಪತ್ರ ಬರೆದಿದ್ದರು.

ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸಹ ಡಿಎ ಹೆಚ್ಚಳ ವಿಚಾರದಲ್ಲಿ ಈಗಿರುವ ನಿಯಮ ಪಾಲನೆ ಮಾಡುವುದು ಉತ್ತಮ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ವರ್ಷದಲ್ಲಿ ಎರಡು ಬಾರಿ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರವು ಡಿಎ ಏರಿಕೆ ಮಾಡುವ ಸಂಪ್ರದಾಯವನ್ನು ಸದ್ಯ ಪಾಲನೆ ಮಾಡುತ್ತಿದೆ.

ಇದನ್ನೂ ಓದಿ: CM Siddaramaiah: ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಷಡಾಕ್ಷರಿಯಿಂದ ಸಿಎಂ ಸಿದ್ದರಾಮಯ್ಯ ಭೇಟಿ, ಬೇಡಿಕೆ ಮಂಡನೆ