Met Gala 2025: ಮೆಟ್ ಗಾಲಾದ ಮೆನುವಿನಲ್ಲಿ ಕೆಲ ಆಹಾರ ಪದಾರ್ಥಗಳು ನಿಷಿದ್ಧ; ಕಾರಣ ಏನು?
ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆಯಲಿರುವ ಮೆಟ್ ಗಾಲಾ 2025ಕ್ಕಾಗಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಶಾರುಖ್ ಖಾನ್, ಕಿಯಾರಾ ಅಡ್ವಾಣಿ ಮತ್ತು ದಿಲ್ಜಿತ್ ದೋಸಾಂಜ್ ಸೇರಿದಂತೆ ಅನೇಕ ಭಾರತೀಯ ತಾರೆಯರು ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Met Gala 2025_ 5 Foods Banned From Menu

ವಾಷಿಂಗ್ಟನ್: ಫ್ಯಾಷನ್ ಲೋಕದ ವಿಭಿನ್ನ ಕಾರ್ಯಕ್ರಮವಾದ ಮೆಟ್ ಗಾಲಾ 2025 (Met Gala 2025) ಆರಂಭವಾಗಿದೆ. ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆಯಲಿರುವ ಮೆಟ್ ಗಾಲಾ 2025ಕ್ಕಾಗಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಶಾರುಖ್ ಖಾನ್, ಕಿಯಾರಾ ಅಡ್ವಾಣಿ ಮತ್ತು ದಿಲ್ಜಿತ್ ದೋಸಾಂಜ್ ಸೇರಿದಂತೆ ಅನೇಕ ಭಾರತೀಯ ತಾರೆಯರು ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬಹುತೇಕ ಸೆಲೆಬ್ರಿಟಿಗಳು ಜಾಗತಿಕ ಮಟ್ಟದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುವ ಈ ಕಾರ್ಯಕ್ರಮವನ್ನು ವೋಗ್ ಸಂಪಾದಕಿ-ಮುಖ್ಯಸ್ಥ ಅನ್ನಾ ವಿಂಟೌರ್ ಅವರ ಸೂಚನೆಯಂತೆ ಮುತುವರ್ಜಿಯಿಂದ ಆಯೋಜನೆ ಮಾಡಲಾಗಿದೆ. ಅದೇ ರೀತಿ ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಸೆಲೆಬ್ರಿಟಿಗಳಿಗೆ ಯಾವ ಖಾದ್ಯ ಬೆಸ್ಟ್ ಎಂಬ ನಿರ್ಣಯ ಸಹ ತೆಗೆದುಕೊಳ್ಳಲಾಗಿದೆ. ಜತೆಗೆ ಕೆಲವು ಆಹಾರ ಪದಾರ್ಥಗಳನ್ನು ಈ ಕಾರ್ಯಕ್ರಮದಲ್ಲಿ ನಿಷೇಧಿಸಲಾಗಿದೆ.
ಮೆಟ್ ಗಾಲಾ 2025 ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ತಯಾರಿ ಮಾಡಿದಂತೆ ವಿಶೇಷ ಹೈಜೆನಿಕ್ ಖಾದ್ಯಕ್ಕೆ ಅಧಿಕ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಈ ಬಾರಿ ಯಾವೆಲ್ಲ ಮೆನು ಇರುತ್ತೆ ಎಂಬ ಬಗ್ಗೆ ಮಾಹಿತಿ ಇನ್ನು ತಿಳಿದುಬಂದಿಲ್ಲ. ಕಾರ್ಯಕ್ರಮ ಆಯೋಜಕರಾದ ವಿಂಟೌರ್ ಸೂಚನೆಗಳ ಪ್ರಕಾರ ಕೆಲವು ಆಹಾರ ಪದಾರ್ಥಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಇದನ್ನು ಓದಿ: Met Gala 2025: ಮೆಟ್ ಗಾಲಾ 2025ರಲ್ಲಿ ಕಿಚ್ಚು ಹಚ್ಚೋಕೆ ರೆಡಿ ಆಗ್ತಿದ್ದಾರೆ ಈ ಸೆಲೆಬ್ರಿಟಿಗಳು
ಈ ಆಹಾರಗಳಿಲ್ಲ
ಮೆಟ್ ಗಾಲಾ ಕಾರ್ಯಕ್ರಮಕ್ಕೆ ವಿವಿಧ ಖಾದ್ಯಗಳು ಇರುವುದು ಖಾತರಿಯಾಗಿದ್ದರೂ ಕೆಲವು ಆಹಾರ ಪದಾರ್ಥಗಳು ನಿಷಿದ್ಧವಾಗಿದೆ. ಬೆಳ್ಳುಳ್ಳಿ, ಈರುಳ್ಳಿ, ಚೀವ್ಸ್ ತರಹದ ಆಹಾರ, ಪಾರ್ಸ್ಲಿ, ಬ್ರುಶೆಟ್ಟಾ ಇತರ ಆಹಾರಗಳು ಈ ಬಾರಿ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಇರುವುದಿಲ್ಲ. ಅದೇ ರೀತಿ ಈ ತರಹದ ಆಹಾರ ಯಾವ ಕಾರಣಕ್ಕೆ ನಿಷಿದ್ಧ ಎಂಬುದನ್ನು ಸಹ ತಿಳಿಸಲಾಗಿದೆ.
- ಈ ತರಹದ ಆಹಾರದಲ್ಲಿ ಉಸಿರಾಟಕ್ಕೆ ತೊಂದರೆ ನೀಡಿ ಪರಿಣಾಮ ಬೀರುವ ಸಾಧ್ಯತೆ ಇದೆ.
- ಕೆಲವು ಆಹಾರಗಳು ಕೆಲವರ ದೇಹಕ್ಕೆ ಅಲರ್ಜಿ. ಅಸ್ತಮಾ ಸಮಸ್ಯೆ ತರಲಿದೆ. ಹಾಗಾಗಿ ಅಂತಹ ಆಹಾರ ಖಾದ್ಯ ಕಾರ್ಯಕ್ರಮದಲ್ಲಿ ಇರುವುದಿಲ್ಲ.
- ಇನ್ನು ಬ್ರುಶೆಟ್ಸ್‌ನಂತಹ ಆಹಾರಗಳು ತಿನ್ನುವಾಗ ಮೈಮೇಲೆ ಬೀಳುವ ಸಾಧ್ಯತೆ ಇದ್ದು ಸೆಲೆಬ್ರಿಟಿಗಳು ಧರಿಸುವ ಉಡುಪಿನ ಪರಿಣಾಮ ಬೀರುವ ಸಾಧ್ಯತೆ ಇದೆ.