Hania Aamir: ಪಾಕಿಸ್ತಾನದ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗೂ ಹೊಸ ರೂಲ್ಸ್; ನಟಿ ಹನಿಯಾ ಅಮಿರ್ ಹೇಳಿದ್ದೇನು?
ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೂಡ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಹನಿಯಾ ಆಮಿರ್, ಮಹಿರಾ ಖಾನ್, ಫವಾದ್ ಖಾನ್, ಉಸ್ತಾದ್ ರಹತ್ ಫತೇಹ್ ಅಲಿ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಪಾಕಿಸ್ತಾನದ ಪ್ರಸಿದ್ಧ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಭಾರತ ಬ್ಲಾಕ್ ಮಾಡಿದೆ. ಇದೀಗ ಖ್ಯಾತ ಪಾಕಿಸ್ತಾನಿ ಕಲಾವಿದೆ ಹನಿಯಾ ಅಮಿರ್ ಭಾರತದ ಈ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Pakistan's Hania Aamir

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿ ಇಡೀ ದೇಶಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ದಾಳಿಯಿಂದ 26 ಜನರು ಸ್ಥಳದಲ್ಲಿ ಮೃತವಾಗಿದ್ದು, ಉಗ್ರರ ಈ ನಡೆಗೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಅನೇಕ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ದಾಳಿಗೆ ಪ್ರತಿಯಾಗಿ ಭಾರತ ಸಿಂಧೂ ನದಿ ನೀರು ಸ್ಥಗಿತ, ಪಾಕ್ ಪ್ರಜೆಗಳ ವೀಸಾ ರದ್ದು, ಪಾಕ್‌ನಿಂದ ಬರುವ ಸರಕುಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಬೆನ್ನಲ್ಲೆ ಭಾರತದಲ್ಲಿ ಪಾಕಿಸ್ತಾನಿ ಕಲಾವಿದರಿಗೆ ನಟಿಸಲು ಅವಕಾಶ ನೀಡದಂತೆ ನಿಯಮ ಜಾರಿಗೊಳಿಸಲಾಗಿದೆ. ಪರಿಣಾಮ ಅನೇಕ ಕಲಾವಿದರಿಗೆ ಭಾರತದಲ್ಲಿ ನಟಿಸಲು ಅವಕಾಶ ಇಲ್ಲದಂತಾಗಿದೆ. ಇದೀಗ ಖ್ಯಾತ ಪಾಕಿಸ್ತಾನಿ ಕಲಾವಿದೆ ಹನಿಯಾ ಅಮಿರ್ (Hania Aamir) ಭಾರತದ ಈ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದಲ್ಲಿ ಪಾಕಿಸ್ತಾನಿ ಕಲಾವಿದರೂ ಕೂಡ ಹಲವು ಅಭಿಮಾನಿಗಳನ್ನು ಹೊಂದಿದ್ದು, ಹನಿಯಾ ಆಮಿರ್, ಮಹಿರಾ ಖಾನ್, ಫವಾದ್ ಖಾನ್, ಉಸ್ತಾದ್ ರಹತ್ ಫತೇಹ್ ಅಲಿ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಪಾಕಿಸ್ತಾನದ ಪ್ರಸಿದ್ಧ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬ್ಲಾಕ್ ಮಾಡುವ ನಿರ್ಣಯಕ್ಕೆ ಭಾರತ ಮುಂದಾಗಿದೆ.
ಕೆಲವು ಭಾರತೀಯ ಅಭಿಮಾನಿಗಳು ತಮ್ಮ ಪಾಕಿಸ್ತಾನದ ನೆಚ್ಚಿನ ಸೆಲೆಬ್ರಿಟಿಗಳ ಪ್ರೊಫೈಲ್ ಫಾಲೋ ಮಾಡುತ್ತಾರೆ. ತಮ್ಮ ಪ್ರೀತಿಯ ಸೆಲೆಬ್ರಿಟಿಗಳನ್ನು ಬಿಟ್ಟುಕೊಡಲು ಇಷ್ಟ ಪಡದ ಕೆಲವು ಅಭಿಮಾನಿಗಳು VPN ಸೇವೆಗಳಿಗೆ ಚಂದಾದಾರರಾಗುವ ಮೂಲಕ ಪಾಕಿಸ್ತಾನದ ಕಲಾವಿದರ ಫಾಲೋವರ್ಸ್ ಆಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಇದನ್ನು ಓದಿ:Tarrif On Movies: ಚಿತ್ರರಂಗಕ್ಕೂ ಶಾಕ್ ಕೊಟ್ಟ ಟ್ರಂಪ್- ವಿದೇಶಿ ಸಿನಿಮಾಗಳ ಮೇಲೆ 100% ಸುಂಕ
ಈ ಮೂಲಕ ಕೆಲವು ಭಾರತೀಯರು ಪಾಕಿಸ್ತಾನ ಕಲಾವಿದರನ್ನು ಸಹ ಬೆಂಬಲಿಸುತ್ತಿದ್ದಾರೆ. ಅಂತಹ ಸೆಲೆಬ್ರಿಟಿಗಳಲ್ಲಿ ಜನಪ್ರಿಯ ನಟಿ ಹನಿಯಾ ಆಮಿರ್ ಕೂಡ ಒಬ್ಬರು. ನಟಿ ಹನಿಯಾ ಆಮಿರ್ ಇದೀಗ ಭಾರತೀಯ ಅಭಿಮಾನಿಗಳಿಗಾಗಿ ಪೋಸ್ಟ್ ಒಂದನನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವ ಹನಿಯಾ ತನ್ನ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಬೇಸರವಿದೆ. ನಾನು ಅಳುತ್ತಿದ್ದೇನೆ ಎಂದು ಕ್ಯಾಪ್ಶನ್‌ನೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿ ಮಿಸ್ ಯು, ಚಿಂತಿಸಬೇಡಿ, ನಾವು ನಿಮಗಾಗಿ ವಿಪಿಎನ್ ಚಂದಾದಾರಿಕೆಯನ್ನು ತೆಗೆದುಕೊಂಡಿದ್ದೇವೆ ಎಂದು ಕೆಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.