Rahul Gandhi's Indian Citizenship: ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಭಾರತೀಯ ಪೌರತ್ವ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Indian Citizenship: ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ಅನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ವಜಾಗೊಳಿಸಿದೆ . ಜತೆಗೆ ಅರ್ಜಿದಾರರಿಗೆ ಇತರ ಪರ್ಯಾಯ ಕಾನೂನು ಮಾರ್ಗವನ್ನು ಅನುಸರಿಸುವಂತೆ ಸೂಚನೆ ನೀಡಿದೆ.

ರಾಹುಲ್ ಗಾಂಧಿ.

ಲಖನೌ: ಭಾರತೀಯ ಪೌರತ್ವ ವಿಚಾರದಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಭಾರತೀಯ ಪೌರತ್ವ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪಿಐಎಲ್ ಅನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ವಜಾಗೊಳಿಸಿದೆ (Rahul Gandhi's Indian Citizenship). ಜತೆಗೆ ಅರ್ಜಿದಾರರಿಗೆ ಇತರ ಪರ್ಯಾಯ ಕಾನೂನು ಮಾರ್ಗವನ್ನು ಅನುಸರಿಸುವಂತೆ ಸೂಚನೆ ನೀಡಿದೆ. ಅರ್ಜಿದಾರರ ದೂರನ್ನು ಪರಿಹರಿಸಲು ಕೇಂದ್ರ ಸರ್ಕಾರಕ್ಕೆ ಯಾವುದೇ ಸಮಯ ಮಿತಿಯನ್ನು ನೀಡಲು ಸಾಧ್ಯವಾಗದ ಕಾರಣ, ಈ ಅರ್ಜಿಯನ್ನು ಬಾಕಿ ಇಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಆರ್.ಮಸೂದಿ ಮತ್ತು ರಾಜೀವ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿ ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್.ವಿಘ್ನೇಶ್ ಶಿಶಿರ್ ಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ ಅವರು ಇತರ ಪರ್ಯಾಯ ಕಾನೂನು ಕ್ರಮಗಳ ಮೊರೆ ಹೋಗಬಹುದು ಎಂದೂ ನ್ಯಾಯಾಲಯ ತಿಳಿಸಿದೆ.
ತೀರ್ಪು ಬಗ್ಗೆ ವಿಘ್ನೇಶ್ ಶಿಶಿರ್ ಹೇಳಿದ್ದೇನು?
Lucknow, Uttar Pradesh: Regarding the petition on Lok Sabha LoP Rahul Gandhi's Indian Citizenship, petitioner S Vignesh Shishir says, "The hearing was scheduled today on 5th May 2025, where the Government of India had to present its final decision before the court regarding the… pic.twitter.com/xKo6IRgUB1
— IANS (@ians_india) May 5, 2025
ಈ ಸುದ್ದಿಯನ್ನೂ ಓದಿ: Caste Census: ಜಾತಿ ಗಣತಿ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ; ಕೇಂದ್ರಕ್ಕೆ ಬೆಂಬಲ ನೀಡುವುದಾಗಿ ಘೋಷಣೆ
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಸಾಬೀತುಪಡಿಸುವ ದಾಖಲೆಗಳು ಮತ್ತು ಬ್ರಿಟಿಷ್ ಸರ್ಕಾರದ ಕೆಲವು ಇಮೇಲ್‌ಗಳು ತಮ್ಮ ಬಳಿ ಇವೆ ಮತ್ತು ಈ ಕಾರಣದಿಂದಾಗಿ ಅವರು ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು. ಅವರಿಗೆ ಸಂಸದರಾಗಲು ಸಾಧ್ಯವಿಲ್ಲ ಎಂದು ಶಿಶಿರ್ ಪಿಐಎಲ್‌ನಲ್ಲಿ ಉಲ್ಲೇಖಿಸಿದ್ದರು.
ಏ. 21ರಂದು ನಡೆದ ಹಿಂದಿನ ವಿಚಾರಣೆಯಲ್ಲಿ, ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎಂಬ ಹೇಳಿಕೆಗಳ ಬಗ್ಗೆ ವಿವರಗಳನ್ನು ಕೋರಿ ಕೇಂದ್ರವು ಇಂಗ್ಲೆಂಡ್ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ರಾಹುಲ್ ಗಾಂಧಿ ಅವರ 2024ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಮನವಿಯ ಫಲಿತಾಂಶವನ್ನು ತನ್ನ ಮುಂದೆ ಮಂಡಿಸಲು ನ್ಯಾಯಪೀಠವು ಮೇ 5ರವರೆಗೆ ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ ನೀಡಿತ್ತು.
ರಾಹುಲ್ ಗಾಂಧಿ ಅವರ ದ್ವಿ ಪೌರತ್ವದ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ 2 ಬಾರಿ ದೂರು ಸಲ್ಲಿಸಿದ್ದಾಗಿಯೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಅರ್ಜಿದಾರರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಕಳೆದ ವರ್ಷ ನ. 25ರಂದು ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ಕೇಳಿತ್ತು.
ಅರ್ಜಿದಾರರ ಮನವಿಯ ಮೇರೆಗೆ, ಸಂಬಂಧಪಟ್ಟ ಸಚಿವಾಲಯವು ರಾಹುಲ್ ಗಾಂಧಿ ಅವರ ಬ್ರಿಟಿಷ್ ಪೌರತ್ವದ ಬಗ್ಗೆ ವಿವರಗಳನ್ನು ಕೋರಿ ಇಂಗ್ಲೆಂಡ್ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಮತ್ತು ಅರ್ಜಿದಾರರ ಪ್ರಾತಿನಿಧ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಹೆಚ್ಚಿನ ಸಮಯ ಬೇಕಾಗಿದೆ ಎಂದು ಉಪ ಸಾಲಿಸಿಟರ್ ಜನರಲ್ ಎಸ್.ಬಿ. ಪಾಂಡೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಸದ್ಯಕ್ಕಂತೂ ರಾಹುಲ್ ಗಾಂಧಿ ಅವರಿಗೆ ರಿಲೀಸ್ ಸಿಕ್ಕಿದ್ದು, ಅರ್ಜಿದಾರರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.