ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Om Prakash Murder: ಕೊಲೆಯಾದ ನಿವೃತ್ತ ಡಿಜಿ ಓಂಪ್ರಕಾಶ್‌ ಪುತ್ರಿಯಿಂದ ನಂದಿನಿ ಬೂತ್‌ನಲ್ಲಿ ರಂಪಾಟ

Om Prakash Murder case: ಓಂಪ್ರಕಾಶ್‌ ಪತ್ನಿ ಹಾಗೂ ಪುತ್ರಿ ಇಬ್ಬರೂ ಮಾನಸಿಕವಾಗಿ ಅಸ್ಥಿರರಾಗಿರುವುದು ಕಂಡುಬಂದಿದೆ. ಪತ್ನಿ ಈಗಾಗಲೇ ಓಂಪ್ರಕಾಶ್‌ ಕೊಲೆ ಆರೋಪಿಯಾಗಿದ್ದು ಜೈಲುಪಾಲಾಗಿದ್ದಾರೆ. ಕೃತಿಯ ಅತಿಯಾದ ವರ್ತನೆಯಿಂದ ಬೇಸತ್ತು ಬಂಧುಬಳಗದವರು, ಸ್ನೇಹಿತರು ಆಕೆಯಿಂದ ದೂರವಾಗಿದ್ದಾರೆ.

ನಿವೃತ್ತ ಡಿಜಿ ಓಂ ಪ್ರಕಾಶ್‌ ಪುತ್ರಿಯಿಂದ ನಂದಿನಿ ಬೂತ್‌ನಲ್ಲಿ ರಂಪಾಟ

ಓಂ ಪ್ರಕಾಶ್‌ ಪುತ್ರಿ ಕೃತಿ

ಹರೀಶ್‌ ಕೇರ ಹರೀಶ್‌ ಕೇರ Jul 3, 2025 11:50 AM

ಬೆಂಗಳೂರು: ಇತ್ತೀಚೆಗೆ ನಿವೃತ್ತ ಡಿಜಿ, ಐಜಿಪಿ ಓಂಪ್ರಕಾಶ್ (Om prakash Murder case) ಅವರ ಪತ್ನಿಯಿಂದಲೇ (wife) ಕೊಲೆಯಾಗಿದ್ದರು. ಪತ್ನಿ ಜೈಲಿನಲ್ಲಿದ್ದಾರೆ. ಇದೀಗ ಅವರ ಪುತ್ರಿ (daughter), ಮಾನಸಿಕ ಅಸ್ವಸ್ಥೆಯಾಗಿರುವ ಕೃತಿ ಎಂಬಾಕೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಸಮೀಪದ ನಂದಿನಿ ಬೂತ್‌ನಲ್ಲಿ ರಂಪಾಟ ಎಸಗಿ ಸುದ್ದಿಯಾಗಿದ್ದಾರೆ. ಬೂತ್‌ಗೆ ಬಂದು ಕೂಗಾಡಿ, ಅಲ್ಲಿದ್ದ ಬಾಟಲಿಗಳನ್ನು ಒಡೆದುಹಾಕಿ ಗಲಾಟೆ ಎಬ್ಬಿಸಿದ್ದಾರೆ.

ಜೂನ್ 30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃತಿ ವರ್ತನೆಗೆ ಬೇಸತ್ತ ಬೂತ್‌ ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೃತಿಯನ್ನು ಕರೆದೊಯ್ದಿದ್ದಾರೆ. ದೂರು ನೀಡಿದರೂ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ ಎಂದು ನಂದಿನಿ ಬೂತ್ ಅಂಗಡಿ ಮಾಲೀಕ ತಿಳಿಸಿದ್ದಾರೆ.

ಓಂಪ್ರಕಾಶ್‌ ಪತ್ನಿ ಹಾಗೂ ಪುತ್ರಿ ಇಬ್ಬರೂ ಮಾನಸಿಕವಾಗಿ ಅಸ್ಥಿರರಾಗಿರುವುದು ಕಂಡುಬಂದಿದೆ. ಪತ್ನಿ ಈಗಾಗಲೇ ಓಂಪ್ರಕಾಶ್‌ ಕೊಲೆ ಆರೋಪಿಯಾಗಿದ್ದು ಜೈಲುಪಾಲಾಗಿದ್ದಾರೆ. ಕೃತಿಯ ಅತಿಯಾದ ವರ್ತನೆಯಿಂದ ಬೇಸತ್ತು ಬಂಧುಬಳಗದವರು, ಸ್ನೇಹಿತರು ಆಕೆಯಿಂದ ದೂರವಾಗಿದ್ದಾರೆ. ಮನೆಯ ಸುತ್ತಮುತ್ತಲಿನವರು ಹಾಗೂ ಅಂಗಡಿಯವರು ಕೂಡ ಈಕೆಯ ವರ್ತನೆಯಿಂದ ರೋಸಿಹೋಗಿದ್ದು, ಅಂತರ ಕಾಪಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಕೃತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ಅಕ್ಕಪಕ್ಕದವರು ಆಗ್ರಹಿಸಿದ್ದಾರೆ.

ಕಾರು ಮರಕ್ಕೆ ಡಿಕ್ಕಿ, ಗರ್ಭಿಣಿ ರುಂಡ ಕತ್ತರಿಸಿ ಸಾವು

ಕೋಲಾರ : ಕೋಲಾರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಮರಕ್ಕೆ ಕಾರು ಡಿಕ್ಕಿಯಾಗಿ ಅದರಲ್ಲಿದ್ದ ಗರ್ಭಿಣಿಯ ರುಂಡ ಕತ್ತರಿಸಿಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೋಲಾರದ ಮಾಲೂರಿನಭಾವನಹಳ್ಳಿ ರಸ್ತೆಯ ಪುರ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗರ್ಭಿಣಿ ಅರ್ಚನಾ ಅವರನ್ನು ಅವರ ಮಾವ ನಾರಾಯಣಸ್ವಾಮಿ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಎದುರಿಗೆ ವೇಗವಾಗಿ ಬಂದ ಲಾರಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ. ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Om Prakash Murder Case: ಓಂ ಪ್ರಕಾಶ್‌ ಹತ್ಯೆ ಕೇಸ್‌, ಆರೋಪಿ ಪಲ್ಲವಿ 7 ದಿನ ಸಿಸಿಬಿ ಕಸ್ಟಡಿಗೆ